ಕೊಡ್ಲಿಪೇಟೆ, ಏ. ೧೯: ಆಕಸ್ಮಿಕವಾಗಿ ಬೆಂಕಿ ಅವಘಡ ಸಂಭವಿಸಿ ವಾಸದ ಮನೆ ಭಾಗಶಃ ಭಸ್ಮಗೊಂಡಿರುವ ಘಟನೆ ಸಮೀಪದ ಮನುಗನಹಳ್ಳಿ ಗ್ರಾಮದಲ್ಲಿ ನಡೆದಿದೆ.
ಗ್ರಾಮದ ಕೂಲಿ ಕಾರ್ಮಿಕ ಎಂ.ಕೆ.ಗAಗಾಧರ್ ಎಂಬವರ ಮನೆಯಲ್ಲಿ ಆಕಸ್ಮಿಕ ಬೆಂಕಿ ಅವಘಡ ಸಂಭವಿಸಿದ್ದು, ಮನೆಯ ವಸ್ತುಗಳೆಲ್ಲ ಭಸ್ಮವಾಗಿ ಲಕ್ಷಾಂತರ ರೂಪಾ¬ ನಷ್ಟ ಸಂಭವಿಸಿದೆ.
ಗAಗಾಧರ್ ಹಾಗೂ ಕುಟಂಬ ಇಂದು ಬೆಳಿಗ್ಗೆ ಮನೆಗೆ ಬೀಗ ಹಾಕಿ ದೇವಸ್ಥಾನಕ್ಕೆ ತೆರಳಿತ್ತು. ಈ ಸಂದರ್ಭ ಮನೆಯೊಳಗೆ ಬೆಂಕಿ ಹತ್ತಿಕೊಂಡಿದೆ. ಮನೆಯಿಂದ ಹೊಗೆ ಬರುವುದನ್ನು ಗಮನಿಸಿದ ಸಮೀಪದ ನಿವಾಸಿಗಳು ತಕ್ಷಣ ಇತರರಿಗೆ ಮಾಹಿತಿ ನೀಡಿ ಬೆಂಕಿ ನಂದಿಸಲು ಯತ್ನಿಸಿದ್ದಾರೆ.
ಗಂಗಾಧರ್ ಕುಟುಂಬ ಬರುವಷ್ಟರಲ್ಲಿ ಮನೆಯೊಳಗಿದ್ದ ವಸ್ತುಗಳು ಭಾಗಶಃ ಸುಟ್ಟು ಕರಕಲಾಗಿತ್ತು.
ಅಡುಗೆ ಮನೆಗೆ ಬೆಂಕಿ ಆವರಿಸುವುದಕ್ಕಿಂತ ಮೊದಲೇ ಸೋಮವಾರಪೇಟೆಯಿಂದ ಆಗಮಿಸಿದ ಅಗ್ನಿ ಶಾಮಕ ದಳ ಸಿಬ್ಬಂದಿ ಬೆಂಕಿ ನಂದಿಸಿದರು.
ಅಡುಗೆ ಕೊಠಡಿಗೆ ಬೆಂಕಿ ಹತ್ತಿಕೊಂಡಿದ್ದರೆ ಗ್ಯಾಸ್ನಿಂದ ದೊಡ್ಡ ಮಟ್ಟದ ಅನಾಹುತವಾಗುತ್ತಿತ್ತೆಂದು ಸ್ಥಳೀಯ ನಿವಾಸಿಗಳು ಅಭಿಪ್ರಾಯಿಸಿದ್ದು, ಅಗ್ನಿ ಅವಘಡಕ್ಕೆ ವಿದ್ಯುತ್ ಶಾರ್ಟ್ ಸರ್ಕ್ಯೂಟ್ ಕಾರಣ ಎಂದು ಸಂಶಯಿಸಲಾಗಿದೆ.
ಮನೆಯಲ್ಲಿ ಅಗತ್ಯ ಬಳಕೆಯ ಪೀಠೋಪಕರಣಗಳು ಮತ್ತು ಗಾಡ್ರೇಜ್ ಬೀರು ಸಂಪೂರ್ಣ ಸುಟ್ಟು ಕರಕಲಾಗಿದೆ, ಬೀರುವಿನಲ್ಲಿದ್ದ ಕಾಗದ ಪತ್ರಗಳು ,ಅತ್ಯಗತ್ಯ ದಾಖಾಲಾತಿಗಳು, ಚಿನ್ನ, ಬಟ್ಟೆ ಬರೆಗಳು ಭಸ್ಮವಾಗಿವೆ.
ಇದರಿಂದ ಅಂದಾಜು ಹತ್ತು ಲಕ್ಷ ರೂಪಾಯಿಗಳಷ್ಟು ನಷ್ಟ ಸಂಭವಿಸಿದೆ. ಮನೆಯ ಗೋಡೆಗಳಲ್ಲಿ ಬಿರುಕು ಕಾಣಿಸಿಕೊಂಡಿದ್ದು, ಕೂಲಿ ಕಾರ್ಮಿಕರಾಗಿರುವ ಗಂಗಾಧರ್ ಅವರಿಗೆ ಮುಂದಿನ ಜೀವನಕ್ಕೆ ಸೂರು ಇಲ್ಲದಂತಾಗಿದೆ. ಮಕ್ಕಳ ವಿದ್ಯಾಭ್ಯಾಸಕ್ಕೆ ಸಂಬAಧಿಸಿದ ದಾಖಲೆಗಳು ಹಾಗೂ ಜಾಗದ ಕಾಗದ ಪತ್ರಗಳನ್ನು ಹೊಸದಾಗಿ ಹೊಂದಿಸಬೇಕಾಗಿದೆ.
ತಕ್ಷಣ ಸರ್ಕಾರ ಪರಿಹಾರ ನೀಡ ಬೇಕೆಂದು ಸ್ಥಳೀಯ ನಿವಾಸಿಗಳಾದ ಹಾಲಪ್ಪ ಮತ್ತು ಸಂತೋಷ್ ಸೇರಿದಂತೆ ಇತರರು ಆಗ್ರಹಿಸಿದ್ದಾರೆ.
ಈ ಬಗ್ಗೆ ಕೊಡ್ಲಿಪೇಟೆ ಉಪ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಕೊಡ್ಲಿಪೇಟೆ ವಿದ್ಯುತ್ ಉಪ ವಿಭಾಗದ ಕಿರಿಯ ಅಭಿಯಂತರರು ಮತ್ತು ಬೆಸೂರು ಪಂಚಾಯತ್ ಪಿ.ಡಿ.ಓ., ಹೋಬಳಿ ಕಂದಾಯಾ ಧಿಕಾರಿಗಳು ಸ್ಥಳ ಪರಿಶೀಲನೆ ನಡೆಸಿದ್ದಾರೆ.