ನಾಪೋಕ್ಲು, ಏ. ೧೯: ನಾಪೋಕ್ಲು ಚೆರಿಯಪರಂಬು ಜನರಲ್ ಕೆ.ಎಸ್.ತಿಮ್ಮಯ್ಯ ಕ್ರೀಡಾಂಗಣದಲ್ಲಿ ನಾಲ್ನಾಡ್ ಪ್ಲಾಂರ್ಸ್ ರಿಕ್ರಿಯೇಶನ್ ಅಸೋಸಿಯೇಶನ್ ವತಿಯಿಂದ ನಡೆಯುತ್ತಿರುವ ಕೊಡವ ಕಪ್ ಹಾಕಿಯ ಎರಡನೆಯ ದಿನದ ಪಂದ್ಯಾಟದಲ್ಲಿ ಅಲ್ಲಾರಂಡ, ಕೇಟೋಳಿರ, ಅಂಜಪರವAಡ, ಪಟ್ರಪಂಡ, ಕುಮ್ಮಂಡ, ಮುಕ್ಕಾಟಿರ, ತಾಪಂಡ, ಚೌರೀರ, ಕಲಿಯಂಡ, ಕೇಲೇಟಿರ, ಕೋಟೆರ ತಂಡಗಳು ಮುಂದಿನ ಸುತ್ತು ಪ್ರವೇಶಿಸಿವೆ.
ಮೈದಾನ ಒಂದರಲ್ಲಿ ನಡೆದ ಅಲ್ಲಾರಂಡ ಮತ್ತು ಬೊಳ್ಳಂಡ ತಂಡಗಳ ನಡುವಿನ ಪಂದ್ಯದಲ್ಲಿ ಅಲ್ಲಾರಂಡ ತಂಡವು ಬೊಳ್ಳಂಡ ತಂಡವನ್ನು ೩-೦ ಗೋಲುಗಳ ಅಂತರದಿAದ ಮಣಿಸಿತು. ಕೇಟೋಳಿರ ಮತ್ತು ಅಪ್ಪಚೆಟ್ಟೋಳಂಡ ತಂಡಗಳ ನಡುವೆ ನಡೆದ ಪಂದ್ಯದಲ್ಲಿ ಕೇಟೋಳಿರ ತಂಡವು ಅಪ್ಪಚೆಟ್ಟೋಳಂಡ ತಂಡವನ್ನು ೩-೧ ಗೋಲಿನಿಂದ ಸೋಲಿಸಿತು. ಅಂಜಪರವAಡ ಮತ್ತು ಕೋಡಿರ ತಂಡಗಳ ನಡುವಿನ ಪಂದ್ಯದಲ್ಲಿ ಅಂಜಪರವAಡ ತಂಡವು ಕೋಡಿರ ತಂಡವನ್ನು ೪-೦ ಗೋಲಿನಿಂದ ಮಣಿಸಿತು. ಪಟ್ರಪಂಡ ಮತ್ತು ಬೊಳಿಯಾಡಿರ ತಂಡಗಳ ನಡುವಿನ ಪಂದ್ಯದಲ್ಲಿ ಪಟ್ರಪಂಡ ತಂಡವು ಬೊಳಿಯಾಡಿರ ತಂಡವನ್ನು ೫-೪ ಗೋಲುಗಳ ಅಂತರದಿAದ ಶೂಟ್ಔಟ್ನಲ್ಲಿ ಮಣಿಸಿತು. ಕುಮ್ಮಂಡ ಮತ್ತು ಪಾಲೆಯಡ ತಂಡಗಳ ನಡುವಿನ ಪಂದ್ಯದಲ್ಲಿ ಕುಮ್ಮಂಡ ತಂಡವು ಪಾಲೆಯಡ ತಂಡವನ್ನು ೧-೦ ಗೋಲುಗಳ ಅಂತರದಿAದ ಸೋಲಿಸಿತು. ಮುಕ್ಕಾಟಿರ ಮತ್ತು ಪಾಡೆಯಂಡ ತಂಡಗಳ ನಡುವೆ ನಡೆದ ಪಂದ್ಯದಲ್ಲಿ ಮುಕ್ಕಾಟಿರ ತಂಡವು ಪಾಡೆಯಂಡ ತಂಡವನ್ನು ೫-೦ ಗೋಲುಗಳಿಂದ ಸೋಲಿಸಿ ಮುಂದಿನ ಸುತ್ತು ಪ್ರವೇಶಿಸಿತು.
ಮೈದಾನ ಎರಡರಲ್ಲಿ ನಡೆದ ಬೊಳ್ಳೆಪಂಡ ಮತ್ತು ತಾಪಂಡ ತಂಡಗಳ ನಡುವಿನ ಪಂದ್ಯದಲ್ಲಿ ಬೊಳ್ಳೆಪಂಡ ತಂಡವು ತಾಪಂಡ ತಂಡವನ್ನು ೬-೧ ಗೋಲಿನಿಂದ ಮಣಿಸಿತು. ಬಿದ್ದಂಡ ಮತ್ತು ಚೌರೀರ ತಂಡಗಳ ನಡುವೆ ನಡೆದ ಪಂದ್ಯದಲ್ಲಿ ಚೌರೀರ ತಂಡವು ಬಿದ್ದಂಡ ತಂಡವನ್ನು ೨-೦ ಗೋಲುಗಳಿಂದ ಸೋಲಿಸಿ ಮುಂದಿನ ಸುತ್ತು ಪ್ರವೇಶಿಸಿತು. ಕಲಿಯಂಡ ಮತ್ತು ಮಾದಂಡ ತಂಡಗಳ ನಡುವಿನ ಸೆಣಸಾಟದಲ್ಲಿ ಕಲಿಯಂಡ ತಂಡವು ಮಾದಂಡ ತಂಡವನ್ನು ೩-೦ ಗೋಲುಗಳ ಅಂತರದಿAದ ಸೋಲಿಸಿ ವಿಜಯಪತಾಕೆ ಹಾರಿಸಿತು. ಕೇಲೇಟಿರ ಮತ್ತು ಪಾಲಂದಿರ ತಂಡಗಳ ನಡುವಿನ ಪಂದ್ಯದಲ್ಲಿ ಕೇಲೇಟಿರ ತಂಡವು ಪಾಲಂದಿರ ತಂಡವನ್ನು ೨-೧ ಗೋಲಿನ ಅಂತರದಿAದ ಸೋಲಿಸಿತು. ಕೋಟೆರ ಮತ್ತು ಬೊಳ್ಳೆಪಂಡ ತಂಡಗಳ ನಡುವಿನ ಪಂದ್ಯದಲ್ಲಿ ಕೋಟೆರ ತಂಡವು ಬೊಳ್ಳೆಪಂಡ ತಂಡವನ್ನು ೩-೨ ಗೋಲುಗಳ ಅಂತರದಿAದ ಸೋಲಿಸಿ ಮುಂದಿನ ಸುತ್ತು ಪ್ರವೇಶಿಸಿತು.