ಗೋಣಿಕೊಪ್ಪ ವರದಿ, ಏ. ೧೯: ಅತ್ತೂರು ದುರ್ಗಾ ಪರಮೇಶ್ವರಿ ದೇವಿ ಉತ್ಸವ ತಾ. ೨೦ ರಿಂದ (ಇಂದಿನಿAದ) ೨೪ ರವರೆಗೆ ನಡೆಯಲಿದೆ.
ಇಂದು ಬೆಳಿಗ್ಗೆ ೯ ಗಂಟೆಗೆ ಗನಪತಿ ಹೋಮ, ಮಹಾಪೂಜೆ, ಸಂಜೆ ೬ಕ್ಕೆ ಕೊಡಿಮರ ನಿಲ್ಲಿಸುವ ಶಾಸ್ತç, ಬೊಳಕ್ ಅನ್ನಸಂತರ್ಪಣೆ ನಡೆಯಲಿದೆ.
ತಾ. ೨೧ ರಂದು ಇರ್ ಬೊಳಕ್, ಪ್ರಾರ್ಥನೆ, ತಂತ್ರಿ ಸುಸ್ತು ಬಲಿ, ಮೂರ್ತಿ ಪ್ರದಕ್ಷಿಣೆ, ಬೊಳಕ್, ಸಾಮೂಹಿಕ ಅಲಂಕಾರ ಪೂಜೆ, ತಾ. ೨೨ ರಂದು ಇರ್ಬೊಳಕ್, ತಂತ್ರ ಸುಸ್ತು, ದೇವರ ಪ್ರದಕ್ಷಿಣೆ, ರಂಗಪೂಜೆ, ಮಹಾಪೂಜೆ, ತಾ. ೨೩ ರಂದು ಉಷಾಪೂಜೆ, ನವಕಲಶ, ಮಹಾಪೂಜೆ, ಅನ್ನದಾನ, ನೆರಪು, ದೇವರ ದರ್ಶನ, ವಸಂತಪೂಜೆ, ತಾ. ೨೪ ರಂದು ನಿತ್ಯಪೂಜೆ, ಮಹಾಪೂಜೆ, ಅನ್ನದಾನ, ದೇವರ ಅವಭೃತ ಸ್ನಾನ, ದೇವರ ದರ್ಶನ, ನೃತ್ಯ, ಮಹಾಪೂಜೆ, ಅನ್ನದಾನ ನಡೆಯಲಿದೆ ಎಂದು ದೇವಸ್ಥಾನ ಆಡಳಿತ ಮಂಡಳಿ ಪ್ರಕಟಣೆ ತಿಳಿಸಿದೆ.