ಮಡಿಕೇರಿ, ಏ. ೧೯: ಯುದ್ಧ ಸಂದರ್ಭ ಹುತಾತ್ಮರಾದ ಹಾಗೂ ಉಗ್ರರಿಂದ ದೇಶ ರಕ್ಷಣೆ ಮಾಡುವ ಸಂದರ್ಭ ತಮ್ಮ ಪ್ರಾಣತ್ಯಾಗ ಮಾಡಿದ ಕೊಡಗು ಜಿಲ್ಲೆಯ ವೀರ ಯೋಧರನ್ನು ನೆನಪಿಸಿಕೊಂಡು ನಮಿಸುವ ಕಾರ್ಯಕ್ರಮ ಮಡಿಕೇರಿಯ ೧೯-ಕರ್ನಾಟಕ ಬೆಟಾಲಿಯನ್-ಎನ್.ಸಿ.ಸಿ ವತಿಯಿಂದÀ ಕಚೇರಿಯ ಆವರಣದಲ್ಲಿ ನಡೆಯಿತು.
ಸ್ವತಂತ್ರ ಭಾರತ ೭೫ ವರ್ಷ ಪೂರೈಸಿದ ಸಲುವಾಗಿ ‘ಆಜಾದಿ ಕಾ ಅಮೃತ್ ಮಹೋತ್ಸವ್’ ಪ್ರಯುಕ್ತ ‘ಶಹೀದೋ ಕಾ ಸಾಥ್ ಸಾಥ್ ನಮನ್’ (ಹುತಾತ್ಮರ ನಮನ) ಮೂಲಕ ಹುತಾತ್ಮ ಯೋಧರ ಕುಟುಂಬದವರಿಗೆ ಗೌರವ ನೀಡುವ ಕಾರ್ಯಕ್ರಮ ಕೇಂದ್ರ ಸರಕಾರದಿಂದ ಹಮ್ಮಿಕೊಳ್ಳಲಾಗಿದ್ದು, ಕೊಡಗು ಜಿಲ್ಲೆಯ ಹುತಾತ್ಮ ಯೋಧರ ಕುಟುಂಬದವರನ್ನು ಗೌರವಿಸಲಾಯಿತು.
ಜಿಲ್ಲೆಯ ೧೫ ಹುತಾತ್ಮ ಯೋಧರ ಕುಟುಂಬದವರು ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಸರ್ವರ ಗೌರವಕ್ಕೆ ಪಾತ್ರರಾದರು. ಹುತಾತ್ಮರ ಮೊಮ್ಮಕ್ಕಳು, ಸಹೋದರ-ಸಹೋದರಿಯರು ಸೇರಿದಂತೆ ಪತ್ನಿ ಹಾಗೂ ಹೆತ್ತ ತಂದೆ-ತಾಯಿಯರೂ ದೇಶಕ್ಕಾಗಿ ಪ್ರಾಣತೆತ್ತ ತಮ್ಮ ಸಹೋದರ, ಅಜ್ಜ, ಪತಿ ಹಾಗೂ ಮಕ್ಕಳ ಭಾವಚಿತ್ರಗಳಿಗೆ ಹೆಮ್ಮೆಯಿಂದ ಪುಷ್ಪನಮನ ಸಲ್ಲಿಸಿ ಭಾವುಕರಾದರು.
ಹುತಾತ್ಮ ಯೋಧರ ಕುಟುಂಬದವರಿಗೆ ಸ್ಮರಣಿಕೆ
೧೯೪೮ ಇಂಡೋ-ಪಾಕ್ ಯುದ್ಧದ ಸಂದರ್ಭ ೨ನೇ ಮೆಡ್ರಾಸ್ ರೆಜಿಮೆಂಟ್‌ನ ಸಿಪಾಯ್ ಎಮ್. ಮೇದಪ್ಪ ಅವರು ಶತ್ರುಗಳೊಂದಿಗೆ ಹೋರಾಟದ ಸಂದರ್ಭ ೧೯೪೮ ಜನವರಿ ೧೧ ರಂದು ತಮ್ಮ ಪ್ರಾಣತ್ಯಾಗ ಮಾಡಿದರು. ಇವರ ಮೊಮ್ಮಗ ಮಂಗೇರಿರ ಪಿ.ಮೇದಪ್ಪ ಅವರು ಸ್ಮರಣಿಕೆ ಸ್ವೀಕರಿಸಿದರು.
ನಾಯಕ್ ಕೆ.ಎನ್ ಪೊನ್ನಪ್ಪ ಅವರು ೧೯೬೫ರಲ್ಲಿ ಇಂಡೋ-ಪಾಕ್ ಯುದ್ಧದ ಸಂದರ್ಭ ಸೆಪ್ಟೆಂಬರ್ ೨೨ ರಂದು ಶತ್ರುಗಳ ಶೆಲ್ಲಿಂಗ್
(ಮೊದಲ ಪುಟದಿಂದ) ದಾಳಿಗೆ ಸಿಲುಕಿ ಮರಣ ಹೊಂದಿದರು. ಇವರ ಪರವಾಗಿ ಸಹೋದÀರ ಕಾವೇರಿಯಪ್ಪ ಸ್ಮರಣಿಕೆ ಪಡೆದುಕೊಂಡರು.
ಸುಬೇದಾರ್ ಎಮ್.ಎಮ್ ಪೂವಪ್ಪ ಅವರು ೧೯೬೫ ಇಂಡೋ-ಪಾಕ್ ಯುದ್ಧದಲ್ಲಿ ಯುದ್ಧ ಟ್ಯಾಂಕರ್ ಮೂಲಕ ಸೆಪ್ಟೆಂಬರ್ ೭ ರಿಂದ ೧೫ ರವರೆಗೆ ಶತ್ರುಗಳ ೩ ಟ್ಯಾಂಕ್‌ಗಳನ್ನು ನಾಶಗೊಳಿಸಿದರು. ತಾ.೧೫ ರಂದು ಶತ್ರುಗಳ ಬಾಂಬ್ ಸ್ಫೋಟಕ್ಕೆ ಸಿಲುಕಿ ಹುತಾತ್ಮರಾದರು. ಇವರ ಪರವಾಗಿ ಸಹೋದರ ಎಮ್.ಎಮ್ ಕಾವೇರಿಯಪ್ಪ ಅವರು ಸ್ಮರಣಿಕೆ ಸ್ವೀಕರಿಸಿದರು.
ಸಿಪಾಯ್ ಹರಿಜನ್ ಸುಬ್ಬಯ್ಯ ಮುತ್ತಣ್ಣ ಅವರು ೧೯೭೧ ಬಾಂಗ್ಲಾದೇಶ ಯುದ್ಧ ಸಂದರ್ಭ ಡಿಸೆಂಬರ್ ೩ ರಂದು ೩೦೦ ರೌಂಡ್ ಗುಂಡುಗಳನ್ನು ಹಾರಿಸಿ ಶತ್ರುಗಳ ನಾಶಕ್ಕೆ ಸಹಕಾರಿಯಾದರು. ಆದರೆ ಇದೇ ಸಂದರ್ಭ ತಮ ಪ್ರಾಣವನ್ನು ಬಲಿದಾನ ಮಾಡಿದರು. ಇವರ ಮೊಮ್ಮಗ ಹ್ಯಾರಿ ಅವರು ಸ್ಮರಣಿಕೆ ಸ್ವೀಕರಿಸಿದರು.
ಲೆಫ್ಟಿನೆಂಟ್ ಕೆ.ಎಮ್. ಮಂದಣ್ಣ ಅವರು ೧೯೭೧ ಬಾಂಗ್ಲಾ ಯುದ್ಧದ ಸಂದರ್ಭ ವೀರಮರಣ ಹೊಂದಿದರು. ಇವರ ಸಹೋದರಿ ಕಸ್ತೂರಿ ಅವರು ಸ್ಮರಣಿಕೆ ಪಡೆದುಕೊಂಡರು.
ನಾಯಕ್ ಪಿ.ಡಿ. ಕಾವೇರಪ್ಪ ೧೯೯೯ ಕಾರ್ಗಿಲ್ ಯುದ್ಧ ಸಂದರ್ಭ ಜುಲೈ ೬ ರಂದು ಶತ್ರುದೇಶದ ವಾಯು ಬಾಂಬ್ ದಾಳಿಗೆ ಸಿಲುಕಿ ಪ್ರಾಣತ್ಯಾಗ ಮಾಡಿದರು. ಇವರ ಪರವಾಗಿ ಪತ್ನಿ ಶೋಭಾ ಅವರು ಸ್ಮರಣಿಕೆ ಸ್ವೀಕರಿಸಿದರು.
ನಾಯಕ್ ಸುಂದ್ರೇಶ್ ಹೆಚ್.ಜಿ. ಅವರು ಜಮ್ಮು ಕಾಶ್ಮೀರದ ನಾರ್ಥ್ ಗ್ಲೇಸಿಯರ್‌ನಲ್ಲಿ ಹಿಮಪಾತದಲ್ಲಿ ಸಿಲುಕಿ ೨೦೦೩ರ ಫೆಬ್ರವರಿ ೧೭ ರಂದು ಹುತಾತ್ಮರಾದರು. ಇವರ ತಾಯಿ ಸೀತಮ್ಮ ಸ್ಮರಣಿಕೆ ಪಡೆದುಕೊಂಡರು.
ನಾಯಕ್ ಬಿದ್ದಪ್ಪ ಎ.ವಿ. ಅವರು ೨೦೦೩ ಆಗಸ್ಟ್ ೫ ರಂದು ‘ಆಪರೇಷನ್ ಮೇಘದೂತ್’ ಸಂದರ್ಭ ಜಮ್ಮು ಕಾಶ್ಮೀರದ ನಾರ್ಥ್ ಗ್ಲೇಸಿಯರ್‌ನಲ್ಲಿ ಹಿಮಪಾತಕ್ಕೆ ಹುತಾತ್ಮರಾದರು. ಇವರ ಪರವಾಗಿ ಪತ್ನಿ ಲೀನಾ ಅವರು ಸ್ಮರಣಿಕೆ ಪಡೆದುಕೊಂಡರು.
ಲ್ಯಾನ್ಸ್ ನಾಯಕ್ ಚಂದ್ರ ಅವರು ೧೯೯೫ ಅಕ್ಟೋಬರ್ ೧೮ ರಂದು ಲೆ-ಲಡಾಕ್‌ನಲ್ಲಿ ಕರ್ತವ್ಯದಲ್ಲಿದ್ದಾಗ ಶತ್ರುಗಳ ಐ.ಇ.ಡಿ ಬ್ಲಾಸ್ಟ್ ದಾಳಿಗೆ ಸಿಲುಕಿ ತಮ್ಮ ಪ್ರಾಣತ್ಯಾಗ ಮಾಡಿದರು. ಇವರ ಪರವಾಗಿ ಪತ್ನಿ ಜ್ಞಾನಮಣಿ ಅವರು ಸ್ಮರಣಿಕೆ ಸ್ವೀಕರಿಸಿದರು.
ಸಿಪಾಯ್ ದೇವಪ್ಪ ಬಿ.ಎಮ್. ಅವರು ಕಾಶ್ಮೀರದಲ್ಲಿ ೨೦೦೧ ಜೂನ್ ೧೪ ರಂದು ೪ ಉಗ್ರಗಾಮಿಗಳೊಂದಿಗೆ ಹೋರಾಡಿ ೩ ಮಂದಿಯನ್ನು ಹೊಡೆದುರುಳಿಸಿದರಾದರು ಮತ್ತೊಬ್ಬ ಉಗ್ರನ ಗುಂಡಿನ ದಾಳಿಗೆ ತಮ್ಮ ಪ್ರಾಣವನ್ನು ಕಳೆದುಕೊಂಡರು. ಈ ತಮ್ಮ ಕಾರ್ಯಕ್ಕೆ ಮರಣೋತ್ತರ ಸೇನಾ ಮೆಡಲ್ ಕೂಡ ಇವರಿಗೆ ದೊರಕಿದೆ. ಇವರ ಪರವಾಗಿ ತಂದೆ ಮುತ್ತಪ್ಪ ಅವರು ಸ್ಮರಣಿಕೆ ಪಡೆದುಕೊಂಡರು.
ಸಿಪಾಯ್ ರವೀಂದ್ರ ಕೆ.ಎಸ್. ಅವರು ೨೦೧೦ರ ಸೆಪ್ಟೆಂಬರ್ ೬ ರಂದು ಉಗ್ರರ ದಾಳಿಗೆ ಬಲಿಯಾಗಿ ಹುತಾತ್ಮರಾದರು. ಇವರ ತಾಯಿ ಶಾರದಾ ಅವರು ಸ್ಮರಣಿಕೆ ಪಡೆದುಕೊಂಡರು.
ಗನ್ನರ್ ಗಣಪತಿ ಅವರು ಸೆಪ್ಟೆಂಬರ್ ೧೬ ೧೯೬೫ ಇಂಡೋ-ಪಾಕ್ ಯುದ್ಧದ ಸಂದರ್ಭ ಶತ್ರುಗಳೊಂದಿಗೆ ಗುಂಡಿನ ಚಕಮಕಿ ಸಂದರ್ಭ ಹುತಾತ್ಮರಾದರು. ಕುಟುಂಬದ ಎನ್.ಎಮ್ ಅಯ್ಯಪ್ಪ ಅವರು ಸ್ಮರಣಿಕೆ ಸ್ವೀಕರಿಸಿದರು.
ಸುಬೇದಾರ್ ಈರಪ್ಪ ಅವರು ೨೦೦೦ ಜನವರಿ ೧೫ ರಂದು ಅಸ್ಸಾಮಿನಲ್ಲಿ ರೈಲು ಬೆಂಗಾವಲು ಮಾಡುವ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದಾಗ ರೈಲಿನಿಂದ ಕೆಳಗೆ ಬಿದ್ದು ಹುತಾತ್ಮರಾದರು. ಇವರ ಪರವಾಗಿ ಪತ್ನಿ ಪುಷ್ಪಾ ಈರಪ್ಪ ಅವರು ನೆನಪಿನ ಸ್ಮರಣಿಕೆ ಸ್ವೀಕರಿಸಿದರು.
ನಾಯಕ್ ಕೈಬಿಲೀರ ರಾಮಕೃಷ್ಣ ಅವರು ೧೯೮೮ ಅಕ್ಟೋಬರ್ ೨೦ ರಂದು ಶ್ರೀಲಂಕಾದಲ್ಲಿ ಶತ್ರುಗಳ ಬಾಂಬ್ ದಾಳಿಗೆ ಸಿಲುಕಿ ಪ್ರಾಣತ್ಯಾಗ ಮಾಡಿದರು. ಇವರ ಸಹೋದರ ಪರಮೇಶ್ವರ ಅವರು ಸ್ಮರಣಿಕೆ ಸ್ವೀಕರಿಸಿದರು.
ಲ್ಯಾನ್ಸ್ ನಾಯಕ್ ಸೋಮಯ್ಯ ಸಿ.ಎಮ್. ಅವರು ೧೯೯೪ ಜುಲೈ ೧೪ ರಂದು ಕಾಶ್ಮೀರದಲ್ಲಿ ಉಗ್ರರೊಂದಿಗೆ ತಮ್ಮ ಎಲ್.ಎಮ್.ಜಿ ಗನ್ ಮೂಲಕ ಹೋರಾಡುವ ಸಂದರ್ಭ ತಮ್ಮ ಪ್ರಾಣವನ್ನು ಕಳೆದುಕೊಂಡರು. ಇವರಿಗೆ ಸೇನಾ ಮೆಡಲ್ ನೀಡಿ ಗೌರವಿಸಲಾಗಿದೆ. ಇವರ ಪರವಾಗಿ ತಾಯಿ ಬೊಳ್ಳಮ್ಮ ಅವರು ಸ್ಮರಣಿಕೆ ಸ್ವೀಕರಿಸಿದರು.
ಕಾರ್ಯಕ್ರಮದಲ್ಲಿ ೧೯ ಕರ್ನಾಟಕ ಬೆಟಾಲಿಯನ್‌ನ ನೂತನ ಕಮಾಂಡಿAಗ್ ಅಧಿಕಾರಿ ಕರ್ನಲ್ ಜಫ್ರೀನ್ ಗಿಲ್ಬರ್ಟ್, ಸುಬೇದಾರ್ ಮೇಜರ್ ಸುನಿಲ್ ಕುಮಾರ್, ಜಿಲ್ಲಾ ಸೈನಿಕ ಅಭಿವೃದ್ಧಿ ಮಂಡಳಿಯ ಮೇಜರ್ ಬಾಲಕೃಷ್ಣ ಸೇರಿದಂತೆ, ಎನ್.ಸಿ.ಸಿ ಅಧಿಕಾರಿಗಳು, ಕೆಡೆಟ್‌ಗಳು ಹಾಜರಿದ್ದರು. ಪುತ್ತೂರು ವಿವೇಕಾನಂದ ಕಾಲೇಜಿನ ವಿದ್ಯಾರ್ಥಿ ಸಿ.ಎಸ್.ಎಮ್ ಹೇಮಂತ್ ಕುಮಾರ್ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು.