'ಸೋಮವಾರಪೇಟೆ/ಶನಿವಾರಸಂತೆ, ಏ. ೧೯: ಶನಿವಾರಸಂತೆಯಲ್ಲಿ ಇಂದು ಸಂಜೆ ಭಿನ್ನಕೋಮಿನ ಯುವಕರ ನಡುವೆ ಘರ್ಷಣೆ ಏರ್ಪಟ್ಟಿದ್ದು, ಪಟ್ಟಣದಲ್ಲಿ ಕೆಲಕಾಲ ಉದ್ವಿಗ್ನ ವಾತಾವರಣ ನಿರ್ಮಾಣವಾಗಿತ್ತು.

ಪಟ್ಟಣದ ಕೆ.ಆರ್.ಸಿ. ಸರ್ಕಲ್‌ನಲ್ಲಿ ಇಂದು ಸಂಜೆ ವೇಳೆಗೆ ಘರ್ಷಣೆ ನಡೆದು, ನಂತರ ಪೊಲೀಸ್ ಠಾಣೆಯ ಸಮೀಪದಲ್ಲೂ ಗಲಾಟೆ ಮುಂದುವರೆದಿದ್ದು, ಸ್ಥಳಕ್ಕೆ ಡಿ.ವೈ.ಎಸ್.ಪಿ. ಶೈಲೇಂದ್ರ ಸೇರಿದಂತೆ ಇತರ ಅಧಿಕಾರಿಗಳು ಭೇಟಿ ನೀಡಿ ಪರಿಸ್ಥಿತಿಯನ್ನು ಅವಲೋಕಿಸಿದ್ದಾರೆ. ಇಂದು ಸಂಜೆ ತ್ಯಾಗರಾಜ ಕಾಲೋನಿಯ ಪಿ. ತನ್ಮಯ್ ಹಾಗೂ ಸುಳುಗಳಲೆ ನಿವಾಸಿ ಎಸ್.ಆರ್. ಸಚಿನ್ ಅವರುಗಳು ಕೆ.ಆರ್.ಸಿ. ಸರ್ಕಲ್‌ನಲ್ಲಿರುವ ಹೊಟೇಲ್‌ಗೆ ಊಟ ಮಾಡಲೆಂದು ತೆರಳಿದ್ದು, ಈ ಸಂದರ್ಭ ಕ್ಷುಲ್ಲಕ ಕಾರಣಕ್ಕೆ ಜಗಳ ತೆಗೆದ ಶನಿವಾರಸಂತೆಯ ನಿವಾಸಿಗಳಾದ ರಷೀದ್, ಅಜರ್, ಬಾಷಾ, ಇಮ್ರಾನ್, ಸಲೀಂ ಅವರುಗಳು ಚಾಕು ಹಾಗೂ ಗಾಜಿನ ಬಾಟಲಿಯಿಂದ ತನ್ಮಯ್ ಮೇಲೆ ಹಲ್ಲೆ ನಡೆಸಿದ್ದಾರೆ. ಈ ಸಂದರ್ಭ ತಡೆಯಲು ಹೋದ ಸಚಿನ್ ಮೇಲೂ ಹಲ್ಲೆ ನಡೆಸಲಾಗಿದೆ ಎಂದು ಸಚಿನ್ ಶನಿವಾರಸಂತೆ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಇದೇ ಸಂದರ್ಭ ಆರೋಪಿಗಳು ಮುಂದಿನ ಎರಡು ದಿನದಲ್ಲಿ ಕೊಲೆ ಮಾಡುವುದಾಗಿ ಬೆದರಿಕೆ ಒಡ್ಡಿರುವ ಬಗ್ಗೆಯೂ ದೂರಿನಲ್ಲಿ ಉಲ್ಲೇಖಿಸಲಾಗಿದೆ. ಇದೇ ಘಟನೆಗೆ ಸಂಬAಧಿಸಿದAತೆ ತನ್ಮಯ್ ಮತ್ತೊಂದು ದೂರು ನೀಡಿದ್ದು, ಕೆಆರ್.ಸಿ. ಸರ್ಕಲ್ ಬಳಿ ತನ್ನ ಮೇಲೆ ನಡೆದ ಹಲ್ಲೆಗೆ ಸಂಬAಧಿಸಿದAತೆ ಪೊಲೀಸ್ ಠಾಣೆಗೆ ದೂರು ನೀಡಲು ತೆರಳುತ್ತಿದ್ದ ಸಂದರ್ಭ ೩ ಬೈಕ್ ಗಳಲ್ಲಿ ಆಗಮಿಸಿದ ಇಮ್ರಾನ್ ಅಲಿಯಾಸ್ ಇಮ್ಮು, ಸಲೀಂ, ರಭಾನಿ, ಮುದ್ದು, ಸುಹೇಬ್, ಅಪ್ಪಿ ಅಲಿಯಾಸ್ ರಫೀಕ್ ಅವರುಗಳು ಹಲ್ಲೆ ನಡೆಸಿದ್ದು, ಇಮ್ರಾನ್ ಎಂಬಾತ ಕಲ್ಲಿನಿಂದ ಮುಖದ ಭಾಗಕ್ಕೆ ಗಾಯಗೊಳಿಸಿರುವುದಾಗಿ ಆರೋಪಿಸಲಾಗಿದೆ. ಘಟನೆಯ ಬಗ್ಗೆ ಶನಿವಾರಸಂತೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸ್ ಇನ್ಸ್ಪೆಕ್ಟರ್ ಪರಶಿವಮೂರ್ತಿ ಅವರು ಪ್ರಕರಣದ ತನಿಖೆ ಕೈಗೊಂಡಿದ್ದಾರೆ. ಇದೇ ಘಟನೆಗೆ ಸಂಬAಧಿಸಿದAತೆ ಅಜûರ್ ಮತ್ತು ರಫೀಕ್ ಅವರುಗಳೂ ಸಹ ಠಾಣೆಗೆ ದೂರು ನೀಡಿದ್ದು, ತನ್ಮಯ್ ಹಾಗೂ ಸಚಿನ್ ಅವರುಗಳು ಹಲ್ಲೆ ನಡೆಸಿರುವುದಾಗಿ ಆರೋಪಿಸಿದ್ದಾರೆ. ಡಿ.ವೈ.ಎಸ್.ಪಿ. ಶೈಲೇಂದ್ರ ಅವರು ತಡರಾತ್ರಿಯವರೆಗೂ ಶನಿವಾರಸಂತೆಯಲ್ಲಿ ಮೊಕ್ಕಾಂ ಹೂಡಿದ್ದು,ಕಾನೂನು ಸುವ್ಯವಸ್ಥೆಗೆ ಸಂಬAಧಿಸಿದAತೆ ಕ್ರಮ ಕೈಗೊಂಡಿದ್ದಾರೆ. ಹಲ್ಲೆ ಘಟನೆಯ ಬಗ್ಗೆ ಮಾಹಿತಿ ರವಾನೆಯಾಗುತ್ತಿದ್ದಂತೆ ಸುತ್ತಮುತ್ತಲಿನ ಯುವಕರು ಪೊಲೀಸ್ ಠಾಣೆ ಎದುರು ಜಮಾಯಿಸಿದ್ದರು. ಕೆಲಕಾಲ ಪಟ್ಟಣದಲ್ಲಿ ಉದ್ವಿಗ್ನತೆಯ ವಾತಾವರಣ ನಿರ್ಮಾಣವಾಗಿ ನಂತರ ತಿಳಿಯಾಯಿತು.