ಮಡಿಕೇರಿ, ಏ. ೧೯: ಮಡಿಕೇರಿಯ ಕ್ರೆಸೆಂಟ್ ಶಾಲೆಯಲ್ಲಿ ಆಡಳಿತ ಮಂಡಳಿ-ಪೋಷಕ ಸಭೆಯು ಶಾಲೆಯ ಗೌರವ ಕಾರ್ಯದರ್ಶಿ ಮೊಹಮ್ಮದ್ ಹನೀಫ್ ಅಧ್ಯಕ್ಷತೆಯಲ್ಲಿ ನಡೆಯಿತು. ವೇದಿಕೆಯಲ್ಲಿ ಶಾಲಾ ಉಪಾಧ್ಯಕ್ಷ ಅನಿಸ್, ಮುನೀರ್ ಅಹಮ್ಮದ್, ಲಿಯಾಕತ್, ಉಮರ್, ಶಾಲೆಯ ಪ್ರಾಂಶುಪಾಲೆ ಜೋಯಿಸಿ ವಿನಯ, ಶಾಲೆಯ ಪೋಷಕ -ಶಿಕ್ಷಕ ಮಂಡಳಿಯ ಅಧ್ಯಕ್ಷೆ ಸಾದಿಯ ಸಿರಾಜ್, ದೈಹಿಕ ಶಿಕ್ಷಕ ನಾಗಯ್ಯ ಶೆಟ್ಟಿ ಉಪಸ್ಥಿತರಿದ್ದರು. ಮುನೀರ್ ಪ್ರಾಸ್ತಾವಿಕ ಮಾತುಗಳನ್ನಾಡಿ ಶಾಲೆಯು ಹೊಸ ಬದಲಾವಣೆಯತ್ತ ಹೆಜ್ಜೆ ಹಾಕುತ್ತಿದ್ದು, ಪಿ.ಯು.ಸಿ. ಆರಂಭವಾಗುತ್ತದೆ ಎಂದು ತಿಳಿಸಿದರು. ವಿದ್ಯಾರ್ಥಿಗಳಲ್ಲಿ ಅಡಗಿರುವ ಪ್ರತಿಭೆಯನ್ನು ಗುರುತಿಸಿ ಅದಕ್ಕೆ ಪ್ರೋತ್ಸಾಹ ನೀಡಬೇಕು ಎಂದು ತಿಳಿಸಿದರು. ಶಾಲೆಯ ಉದ್ದೇಶ ಹಾಗೂ ಗುರಿಗಳ ಬಗ್ಗೆ ಉಮರ್ ತಿಳಿಸಿದರು. ಲಿಯಾಕತ್ ಸಭೆಯನ್ನುದ್ದೇಶಿಸಿ ಮಾತನಾಡುತ್ತ ಪೋಷಕರು ಮತ್ತು ವಿದ್ಯಾರ್ಥಿಗಳು ಶಾಲೆಯ ಅಭಿವೃದ್ಧಿಯಲ್ಲಿ ಕೈ ಜೋಡಿಸಬೇಕೆಂದು ತಿಳಿಸಿದರು. ಕಾರ್ಯಕ್ರಮ ಕುರಾನ್, ಭಗವದ್ಗೀತೆ ಹಾಗೂ ಬೈಬಲ್ ಪಠಣದೊಂದಿಗೆ ಆರಂಭವಾಯಿತು, ಶಿಕ್ಷಕಿ ಮುಬೀನ ಸ್ವಾಗತಿಸಿ, ನೀಲಮ್ಮ ವಂದನಾರ್ಪಣೆಯನ್ನು ನಿರ್ವಹಿಸಿದರು. ಸುಲ್ಹತ್ ಕಾರ್ಯಕ್ರಮ ನಿರೂಪಿಸಿದರು. ರಾಷ್ಟçಗೀತೆಯೊಂದಿಗೆ ಸಭೆ ಮುಕ್ತವಾಯಿತು.