ಸಿದ್ದಾಪುರ, ಏ. ೧೯: ಸಿದ್ದಾಪುರ ಕರಡಿಗೋಡು ಗ್ರಾಮದ ಟೀಕ್ ವುಡ್ ಎಸ್ಟೇಟ್ನಲ್ಲಿರುವ ಶ್ರೀ ಚಾಮುಂಡೇಶ್ವರಿ ದೇವಾಲಯದ ವಾರ್ಷಿಕ ಉತ್ಸವ ಅಸಾನ್ ಸದ್ಗುರು ಶ್ರೀ-ಲಾ- ಶ್ರೀ ಪಂಡ್ರಿಮಲೈ ಶಕ್ತಿ ವಡಿವೇಲ್ ಸ್ವಾಮಿಗಳ ಉಪಸ್ಥಿತಿಯಲ್ಲಿ ಹಾಗೂ ಬ್ರಹ್ಮ ಶ್ರೀ ನೀಲೇಶ್ವರ ಉಚ್ಚಿಲತ್ತಾಯ ಪದ್ಮನಾಭ ತಂತ್ರಿಗಳ ನೇತೃತ್ವದಲ್ಲಿ ವಿವಿಧ ಧಾರ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ಶ್ರದ್ಧಾಭಕ್ತಿಯಿಂದ ಜರುಗಿತು.
ಗಣಪತಿ ಹೋಮ, ಉಷಾ ಪೂಜೆ, ಚಂಡಿಕಾ ಯಾಗ, ಮಹಾ ಪೂಜೆ ನಡೆಯಿತು. ದೇಗುಲದ ಶ್ರೀ ಆದಿಶಕ್ತಿ ಚಾಮುಂಡೇಶ್ವರಿ ದೇವಿಗೆ ವಿಶೇಷ ಅಲಂಕಾರ, ಕನಕಾಭರಣಗಳಿಂದ ಅಭಿಷೇಕ, ವಿಶೇಷವಾದ ನೈವೇದ್ಯ ಗಳನ್ನು ಅರ್ಪಣೆ ಮಾಡಿ ಮಹಾಪೂಜೆಯನ್ನು ಸಲ್ಲಿಸಲಾಯಿತು. ಭಕ್ತರಿಗೆ ಅನ್ನಸಂತರ್ಪಣೆ ಏರ್ಪಡಿಸಲಾಗಿತ್ತು.