ಪೊನ್ನಂಪೇಟೆ, ಏ.೧೮: ಕರ್ನಾಟಕ ಹೈಕೋರ್ಟಿನ ಹಿರಿಯ ವಕೀಲರಾಗಿರುವ ಮೂಲತಃ ಭಾಗಮಂಡಲದ ಚೇರಂಗಾಲ ಗ್ರಾಮದ ಮೊಟ್ಟನ ರವಿಕುಮಾರ್ ಅವರ ನೇತೃತ್ವದ ಶ್ರೀ ಕಾವೇರಿ ಜನ್ಮಭೂಮಿ ಟ್ರಸ್ಟ್ ಅಧೀನದಲ್ಲಿ ಚೇರಂಗಾಲದಲ್ಲಿ ಕಾರ್ಯನಿರ್ವಹಿಸುತ್ತಿರುವ ಮಕ್ಕಳ ಆರೈಕೆ ಕೇಂದ್ರಕ್ಕೆ ಸೇರ್ಪಡೆಯಾಗಲು ೬ ಅನಾಥ ಮಕ್ಕಳಿಗೆ ಅವಕಾಶವಿದೆ.
ಊಟ, ವಸತಿ, ವಿದ್ಯಾಭ್ಯಾಸ ಸೇರಿದಂತೆ ವಿದ್ಯಾರ್ಥಿಗಳ ಸಂಪೂರ್ಣ ಜವಾಬ್ದಾರಿಯನ್ನು ಈ ಕೇಂದ್ರವೇ ನಿರ್ವಹಿಸುತ್ತದೆ. ೯ರಿಂದ ೧೨ ವಯಸ್ಸಿನ ವಯೋಮಿತಿಯಲ್ಲಿರುವ ೪ರಿಂದ ೬ನೇ ತರಗತಿಯಲ್ಲಿ ವ್ಯಾಸಂಗ ಮಾಡಲಿಚ್ಛಿಸುವ ಬಾಲಕರನ್ನು ಮುಂದಿನ ೨೦೨೨ -೨೩ ಶೈಕ್ಷಣಿಕ ಸಾಲಿನಿಂದ ಆಯ್ಕೆ ಮಾಡಿಕೊಳ್ಳಲಾಗುವುದು.
ಕೊಡಗು ಸೇರಿದಂತೆ ನೆರೆ ಜಿಲ್ಲೆಯ ಯಾವುದೇ ಬಾಲಕರು ಇಲ್ಲಿ ಪ್ರವೇಶ ಪಡೆಯಲು ಮುಕ್ತ ಅವಕಾಶವಿದೆ. ಅನಾಥ ಮಕ್ಕಳಿಗೆ ಮೊದಲ ಆದ್ಯತೆಯಿದ್ದು, ತಂದೆ ಅಥವಾ ತಾಯಿಯನ್ನು ಕಳೆದುಕೊಂಡಿರುವ ಕಡುಬಡತನದಲ್ಲಿ ಇರುವ ಬಾಲಕರೂ ಸಂಪರ್ಕಿಸಬಹುದಾಗಿದೆ. ಮೊದಲು ಬಂದ ೬ ಬಾಲಕರಿಗೆ ಮಾತ್ರ ಅವಕಾಶ.
ಈ ಮೇಲಿನ ನಿಬಂಧನೆಗೆ ಒಳಪಟ್ಟು ಅರ್ಹ ಬಾಲಕರಿಗೆ ಬದುಕು ಕಟ್ಟಿಕೊಡಲು ನೆರವಾಗುವವರು ೯೮೮೬೦೬೦೩೪೨ ಅಥವಾ ೯೬೩೨೪೬೧೦೫೭ ದೂರವಾಣಿಯನ್ನು ಹೆಚ್ಚಿನ ಮಾಹಿತಿಗೆ ಸಂಪರ್ಕಿಸಬಹುದಾಗಿದೆ.