ಸೋಮವಾರಪೇಟೆ, ಏ. ೧೮: ಇಲ್ಲಿನ ಮಹದೇಶ್ವರ ಬಡಾವಣೆಯ ಮುನೇಶ್ವರ ಸ್ವಾಮಿ ಹಾಗೂ ಚಾಮುಂಡೇಶ್ವರಿ ಅಮ್ಮನವರ ದೇವಾಲಯದ ವಾರ್ಷಿಕ ಮಹಾಪೂಜಾ ಕಾರ್ಯಕ್ರಮ ತಾ. ೨೦ರಂದು ನಡೆಯಲಿದೆ ಎಂದು ಮಹದೇಶ್ವರ ಭಕ್ತ ವೃಂದ ಸಮಿತಿ ತಿಳಿಸಿದೆ. ಅಂದು ಬೆಳಿಗ್ಗೆ ೮ಗಂಟೆಯಿAದ ರಾತ್ರಿ ೮ ಗಂಟೆಯವರೆಗೆ ಅರ್ಚಕ ಜಗದೀಶ ಉಡುಪ ನೇತೃತ್ವದಲ್ಲಿ ವಿವಿಧ ಪೂಜಾ ಕೈಂಕರ್ಯಗಳು ನಡೆಯಲಿದ್ದು, ಮಧ್ಯಾಹ್ನ ೧ ಗಂಟೆಗೆ ಹಾಗೂ ರಾತ್ರಿ ೮ ಗಂಟೆಗೆ ಅನ್ನದಾನ ನಡೆಯಲಿದೆ.