ಕೊಡ್ಲಿಪೇಟೆ, ಏ. ೧೮: ಇಲ್ಲಿನ ಕಾಮಧೇನು ಪತ್ತಿನ ಸಹಕಾರ ಸಂಘದ ನೂತನ ಸಾಲಿನ ಆಡಳಿತ ಮಂಡಳಿಗೆ ಪದಾಧಿಕಾರಿಗಳ ಆಯ್ಕೆ ಪ್ರಕ್ರಿಯೆ ಸಂಘದ ಸಭಾಂಗಣದಲ್ಲಿ ನಡೆಯಿತು.
ಸಹಕಾರ ಸಂಘದ ನೂತನ ಅಧ್ಯಕ್ಷರಾಗಿ ಕೆ.ಕೆ. ರೇಣುಕ ಹಾಗೂ ಉಪಾಧ್ಯಕ್ಷರಾಗಿ ಅಲ್ತಾಫ್ ಹುಸೇನ್ ಅವರುಗಳು ಅವಿರೋಧವಾಗಿ ಆಯ್ಕೆಯಾದರು. ಚುನಾವಣಾಧಿಕಾರಿಯಾಗಿ ಸಹಕಾರ ಸಂಘಗಳ ಉಪ ನಿಬಂಧಕರ ಕಚೇರಿಯ ಅಧಿಕಾರಿ ಎಂ.ಈ. ಮೋಹನ್ ಕರ್ತವ್ಯ ನಿರ್ವಹಿಸಿದರು. ಈ ಸಂದರ್ಭ ನಿರ್ದೇಶಕರುಗಳಾದ ಕೆ.ಜಿ. ಕುಮಾರಸ್ವಾಮಿ, ಎಸ್.ಎಸ್. ರಮೇಶ್, ಭುವನೇಶ್ವರಿ, ಎಚ್.ಎಂ. ದಿವಾಕರ್, ಎ.ಎಂ. ಚಂದ್ರಶೆಟ್ಟಿ, ಎ.ಆರ್. ಕುಮಾರಸ್ವಾಮಿ, ಬಿ.ಕೆ. ರಂಜಿತ, ಸುಧೀಂದ್ರ, ಡಿ.ಹೆಚ್. ರಮೇಶ್, ಮುಖ್ಯ ಕಾರ್ಯನಿರ್ವಹಣಾಧಿಕಾರಿ ಕೃಷ್ಣಮೂರ್ತಿ ಅವರುಗಳು ಉಪಸ್ಥಿತರಿದ್ದರು.