ಸುಂಟಿಕೊಪ್ಪ,ಏ.೧೮: ಈಸ್ಟರ್ ಹಬ್ಬವನ್ನು ಸಂತ ಅಂಥೋಣಿ ದೇವಾಲಯದಲ್ಲಿ ಬಲಿಪೂಜೆ ಹಾಗೂ ಪ್ರಾರ್ಥನೆ ಸಲ್ಲಿಸುವ ಮೂಲಕ ಆಚರಿಸಲಾಯಿತು.
ಮಾನವ ಕುಲವನ್ನು ರಕ್ಷಿಸುವ ದಿಸೆಯಲ್ಲಿ ಯೇಸು ಕ್ರಿಸ್ತರು ಶುಕ್ರವಾರ ಶಿಲುಬೆಯ ಮೇಲೆ ಪ್ರಾಣತ್ಯಾಗವನ್ನು ಮಾಡಿದರು. ಆ ದಿನವನ್ನು ಗುಡ್ಫ್ರೆöÊಡೆ (ಶುಭ ಶುಕ್ರವಾರ) ಎಂದು ಕ್ರೆöÊಸ್ತರು ಉಪವಾಸ ಮೌನತೆಯೊಂದಿಗೆ ಅವರ ಅನುಭವಿಸಿದ ಯಾತನೆ ಹಾಗೂ ಪಾಡುಗಳನ್ನು ಧ್ಯಾನಿಸುತ್ತಾ ವಿವಿಧ ಪೂಜಾ ವಿಧಿ ವಿಧಾನ ಪ್ರಾರ್ಥನೆಯೊಂದಿಗೆ ಎಲ್ಲಾ ಪ್ರಾರ್ಥನಾ ಕೇಂದ್ರಗಳಲ್ಲಿ ಆಚರಿಸುತ್ತಾರೆ.
ಶನಿವಾರ ಮಧ್ಯರಾತ್ರಿ ೧೧.೩೦ ಗಂಟೆಗೆ ಸಂತ ಅಂತೋಣಿ ದೇವಾಲಯದಲ್ಲಿ ಧರ್ಮಗುರುಗಳಾದ ಫಾದರ್ ಅರುಳ್ ಸೆಲ್ವಕುಮಾರ್ ಅವರು ಬೆಂಕಿಯನ್ನು ಆಶಿರ್ವಚಿಸಿ, ಜೇನುಮೇಣದಿಂದ ತಯಾರಿಸಲಾದ ದೊಡ್ಡ ಮೊಂಬತ್ತಿಯನ್ನು ಆಶಿರ್ವಚಿಸಿ ಸಂತಮೇರಿ ಶಾಲಾವರಣದಿಂದ ಅದನ್ನು ಬೆಳಗಿಸಿಕೊಂಡು ಭಕ್ತಾದಿಗಳೊಂದಿಗೆ ಮೆರವಣಿಗೆಯೊಂದಿಗೆ ದೇವಾಲಯಕ್ಕೆ ತಂದು ಪ್ರತಿಷ್ಠಾಪಿಸಿ ಆಚರಣೆಗೆ ಮುನ್ನುಡಿ ಇಟ್ಟರು.
ಈ ದಿವ್ಯ ಬಲಿಪೂಜೆ ಹಾಗೂ ಆಚರಣೆಯಲ್ಲಿ ಡರ್ನಹಳ್ಳಿ ಧರ್ಮಕೇಂದ್ರದ ಸಹಾಯಕ ಧರ್ಮಗುರುಗಳಾದ ಅವಿನಾಶ್, ಕೇರಳದ ವೇರಪುಳ್ಳಿಯ ಫಾದರ್ ಪೌಲಸನ್, ಕೂಡಿಗೆಯ ತಪೋವನಾದ ಅಶ್ವಿತ್ ಡಿಸೋಜ, ಸಂತ ಕ್ಲಾರ ಕನ್ಯಾಸ್ತಿçÃಮಠದÀ ಕನ್ಯಾಸ್ತಿçÃಯರು, ಗಾಯನ ವೃಂದದೊAದಿಗೆ ನೂರಾರು ಸಂಖ್ಯೆಯಲ್ಲಿ ನೆರೆÀದಿದ್ದ ಭಕ್ತಾದಿಗಳು ದೇವಾಲಯದಲ್ಲಿ ಪುನರುತ್ಥಾನದ ಪ್ರಾರ್ಥನೆಯಲ್ಲಿ ತೊಡಗಿಸಿಕೊಂಡರು.