ನಾಪೋಕ್ಲು, ಏ. ೧೮: ಸಮೀಪದ ಪಾಲೂರಿನ ಮಹಾಲಿಂಗೇಶ್ವರ ದೇವಾಲಯದಲ್ಲಿ ವಾರ್ಷಿಕ ಉತ್ಸವ ವಿಜೃಂಭಣೆಯಿAದ ಜರುಗಿತು. ಸೋಮವಾರ ನಡೆದ ದೊಡ್ಡಹಬ್ಬ (ಪಟ್ಟಣಿ)ದಲ್ಲಿ ಅಧಿಕ ಸಂಖ್ಯೆಯ ಭಕ್ತಾಧಿಗಳು ಪಾಲ್ಗೊಂಡಿದ್ದರು.ಬೆಳಿಗ್ಗೆ ತುಲಾಭಾರ ಸೇವೆ, ನೃತ್ಯಬಲಿ, ಎತ್ತುಪೋರಾಟ ನಡೆಯಿತು. ಮಧ್ಯಾಹ್ನ ಭಕ್ತಾಧಿಗಳಿಗೆ ಅನ್ನಸಂತರ್ಪಣೆ ಏರ್ಪಡಿಸಲಾಗಿತ್ತು. ಅಪರಾಹ್ನ ಜೋಡುದೇವರ ನೃತ್ಯಬಲಿ ಜರುಗಿತು. ಮುಖ್ಯ ಅರ್ಚಕ ದೇವಿಪ್ರಸಾದ್ ನೇತೃತ್ವದಲ್ಲಿ ವಿವಿಧ ಪೂಜಾಕಾರ್ಯಗಳು ನಡೆದವು.

ತಾ. ೧೯ ರಂದು (ಇಂದು) ಸಂಜೆ ತೆಂಗಿನಕಾಯಿಗೆ ಗುಂಡು ಹೊಡೆಯುವುದು, ದೇವರ ದರ್ಶನ, ಸಮೀಪದ ಹರಿಶ್ಚಂದ್ರ‍್ರದಲ್ಲಿ ದೇವರ ಅವಭೃತ ಸ್ನಾನ ಜರುಗಲಿದೆ. ತಾ. ೨೦ ರಂದು ದೀಪಾಲಂಕಾರ, ಮಹಾಪೂಜೆ ಇನ್ನಿತರ ಕಾರ್ಯಕ್ರಮ ಗಳು ಜರುಗಲಿದ್ದು, ನವಕಕಲಶ ಹಾಗೂ ಮಹಾಪೂಜೆಯೊಂದಿಗೆ ಉತ್ಸವ ಸಂಪನ್ನಗೊಳ್ಳ್ಳಲಿದೆ.