ನಾಪೋಕ್ಲು, ಏ. ೧೮: ಕೊಡವರು ಅಂರ‍್ರಾಷ್ಟಿçÃಯ ಮಟ್ಟದಲ್ಲಿಖ್ಯಾತಿ ಗಳಿಸಲು ಸೇನೆಯಲ್ಲಿನ ಶೌರ್ಯದೊಂದಿಗೆ ಹಾಕಿ ಆಟದಲ್ಲಿನ ಸಾಧನೆಯೂ ಕಾರಣವಾಗಿದೆ ಎಂದು ರಾಜ್ಯ ಪಶ್ಚಿಮ ಘಟ್ಟ ಸಂರಕ್ಷಣಾ ಕಾರ್ಯಪಡೆ ಅಧ್ಯಕ್ಷ ಶಾಂತೆಯAಡ ರವಿ ಕುಶಾಲಪ್ಪ ಹೇಳಿದರು.ನಾಪೋಕ್ಲು ಚೆರಿಯಪರಂಬುವಿನ ಜನರಲ್ ಕೆ.ಎಸ್. ತಿಮ್ಮಯ್ಯ ಕ್ರೀಡಾಂಗಣದಲ್ಲಿ ನಾಲ್ಕುನಾಡು ಪ್ಲಾಂರ‍್ಸ್ ಕ್ಲಬ್ ವತಿಯಿಂದ ಆಯೋಜಿಸಲಾದ ನಾಲ್ನಾಡ್ ಕೊಡವ ಕಪ್ ಹಾಕಿ ಕ್ರೀಡಾಕೂಟವನ್ನು ಉದ್ಘಾಟಿಸಿ ಅವರು ಮಾತನಾಡಿದರು. ನಾಲ್ಕುನಾಡು ವ್ಯಾಪ್ತಿಯಲ್ಲಿ ಹೆಚ್ಚಿನ ಕ್ರೀಡಾಪಟುಗಳಿದ್ದಾರೆ. ಅವರನ್ನು ಪ್ರೋತ್ಸಾಹಿಸಲು ಹೆಚ್ಚಿನ ಕ್ರೀಡಾ ಭಿಮಾನಿಗಳೂ ಇದ್ದಾರೆ. ಇದು ಕ್ರೀಡಾ ಸಾಧನೆಗೆ ಸ್ಪೂರ್ತಿಯಾಗಿದೆ. ಗ್ರಾಮ ಗ್ರಾಮಗಳಲ್ಲಿ ಹಾಕಿ ಕ್ರೀಡೆಗೆ ಹೆಚ್ಚಿನ ಪ್ರೋತ್ಸಾಹ ನೀಡಬೇಕು ಎಂದರು.

ಜಿಲ್ಲೆಯಲ್ಲಿ ಸುಮಾರು ೯೦೦ ಕೊಡವ ಕುಟುಂಬಗಳು ಇದ್ದರೂ ಇಲ್ಲಿಯವರೆಗೆ ನಡೆದ ಕೊಡವ ಕೌಟುಂಬಿಕ ಹಾಕಿ ಪಂದ್ಯಾಟಗಳಲ್ಲಿ ೩೦೦ ಕುಟುಂಬಗಳು ಮಾತ್ರ ಭಾಗವಹಿಸಿವೆ. ಮುಂದಿನ ದಿನಗಳಲ್ಲಿ ೫೦೦ ಕುಟುಂಬಗಳು ಹಾಕಿ ಕ್ರೀಡಾಕೂಟದಲ್ಲಿ ಭಾಗವಹಿಸು ವಂತಾಗಬೇಕು. ಇದು ಇತರರಿಗೆ ಆದರ್ಶವಾಗಬೇಕು ಎಂದರು. ನಬಾರ್ಡ್ನ ನಿವೃತ್ತ ಅಧಿಕಾರಿ ಮುಂಡAಡ ಸಿ.ನಾಣಯ್ಯ ಮಾತನಾಡಿ ಇಂತಹ ಕ್ರೀಡಾಕೂಟಗಳು ಎಲ್ಲಾ ಮಕ್ಕಳಿಗೂ ಪ್ರೇರಣೆಯಾಗಬೇಕು ಹಾಗೂ ಅವರ ಭವಿಷ್ಯಕ್ಕೆ ಸಹಕಾರಿಯಾಗಬೇಕು ಎಂದರು.

ಮುಖ್ಯ ಅತಿಥಿಗಳಾಗಿ ಜಿಎಸ್‌ಟಿ ಅಧಿಕಾರಿ ವಾಂಜAಡ ಕಾರ್ಯಪ್ಪ, ಕಾಫಿ ಬೆಳೆಗಾರ ಮೂವೆರ ಜಿ.ಬೆಳ್ಯಪ್ಪ, ಡಿ.ಸಿ.ಸಿ ಬ್ಯಾಂಕ್ ಉಪಾಧ್ಯಕ್ಷ ಕೇಟೋಳಿರ ಹರೀಶ್ ಪೂವಯ್ಯ, ಹಾಕಿ ತರಬೇತುದಾರ ಬೊಳ್ಳೆಪಂಡ ಕಾರ್ಯಪ್ಪ, ಕಾಫಿ ಬೆಳೆಗಾರ ಪಟ್ಟಚೆರುವಂಡ ಪೂಣಚ್ಚ, ಲೆಫ್ಟಿನೆಂಟ್ ಕರ್ನಲ್ ಶಿವಚಾಳಿಯಂಡ ಗಿರೀಶ್ ಬಿದ್ದಪ್ಪ, ಮತ್ತಿತರರು ಇದ್ದರು. ಬಾಚಮಂಡ

(ಮೊದಲ ಪುಟದಿಂದ) ನವಲ್ ಪ್ರಾರ್ಥಿಸಿ, ಕ್ಲಬ್‌ನ ಅಧ್ಯಕ್ಷ ಬಾಚಮಂಡ ಲವ ಚಿಣ್ಣಪ್ಪ ಸ್ವಾಗತಿಸಿದರು. ಕುಲ್ಲೇಟಿರ ಅರುಣ್ ಬೇಬ ನಿರೂಪಿಸಿ, ಕ್ಲಬ್‌ನ ನಿರ್ದೇಶಕ ಚೇನಂಡ ಸುರೇಶ್ ನಾಣಯ್ಯ ವಂದಿಸಿದರು. ಮೊದಲ ಪಂದ್ಯ ಬೊಪ್ಪಂಡ ಹಾಗೂ ಮಾದಂಡ ತಂಡಗಳ ನಡುವೆ ನಡೆಯಿತು.

೯ ತಂಡಗಳ ಮುನ್ನಡೆ

ಕೊಡವ ಕಪ್ ಹಾಕಿಯ ಮೊದಲ ದಿನದ ಪಂದ್ಯಾಟದಲ್ಲಿ ಮಾದಂಡ, ಪಾಲಂದಿರ, ಚೋಯಮಾಡಂಡ, ಬಾಳೆಯಡ, ಕೋಡಿರ, ಪಟ್ರಪಂಡ, ಪಾಲೆಯಡ, ಬೊಟ್ಟೋಳಂಡ, ನೆರವಂಡ ತಂಡಗಳು ಮುಂದಿನ ಸುತ್ತು ಪ್ರವೇಶಿಸಿವೆ.

ಮೈದಾನ ಒಂದರಲ್ಲಿ ನಡೆದ ಮಾದಂಡ ಮತ್ತು ಬೊಪ್ಪಂಡ ತಂಡಗಳ ನಡುವಿನ ಪಂದ್ಯದಲ್ಲಿ ಮಾದಂಡ ತಂಡವು ಬೊಪ್ಪಂಡ ತಂಡವನ್ನು ೨-೦ ಗೋಲುಗಳ ಅಂತರದಿAದ ಮಣಿಸಿತು. ಅಪ್ಪಾರಂಡ ಮತ್ತು ಪಾಲಂದಿರ ತಂಡಗಳ ನಡುವೆ ನಡೆದ ಪಂದ್ಯದಲ್ಲಿ ಪಾಲಂದಿರ ತಂಡವು ಅಪ್ಪಾರಂಡ ತಂಡವನ್ನು ೧-೦ ಗೋಲಿನಿಂದ ಸೋಲಿಸಿತು. ಚೋಯಮಾಡಂಡ ಮತ್ತು ಚೋಕಿರ ತಂಡಗಳ ನಡುವಿನ ಪಂದ್ಯದಲ್ಲಿ ಚೋಯಮಾಡಂಡ ತಂಡವು ಚೋಕಿರ ತಂಡವನ್ನು ೧-೦ ಗೋಲಿನಿಂದ ಮಣಿಸಿತು. ಬಾಳೆಯಡ ಮತ್ತು ಚೇನಂಡ ತಂಡಗಳ ನಡುವಿನ ಪಂದ್ಯದಲ್ಲಿ ಬಾಳೆಯಡ ತಂಡವು ಚೇನಂಡ ತಂಡವನ್ನು ೪-೧ ಗೋಲುಗಳ ಅಂತರದಿAದ ಮಣಿಸಿ ಮುಂದಿನ ಸುತ್ತು ಪ್ರವೇಶಿಸಿತು.

ಮೈದಾನ ಎರಡರಲ್ಲಿ ನಡೆದ ಕೋಡಿರ ಮತ್ತು ಕಲ್ಯಾಟಂಡ ತಂಡಗಳ ನಡುವಿನ ಪಂದ್ಯದಲ್ಲಿ ಕೋಡಿರ ತಂಡವು ಕಲ್ಯಾಟಂಡ ತಂಡವನ್ನು ೧-೦ ಗೋಲಿನಿಂದ ಮಣಿಸಿತು. ಪಟ್ರಪಂಡ ಮತ್ತು ಚೆಟ್ಟಿಯಾರಂಡ ತಂಡಗಳ ನಡುವೆ ನಡೆದ ಪಂದ್ಯದಲ್ಲಿ ಪಟ್ರಪಂಡ ತಂಡವು ೧-೦ ಗೋಲು ಗಳಿಸಿ ಮುಂದಿನ ಸುತ್ತು ಪ್ರವೇಶಿಸಿತು. ಪಾಲೆಯಡ ಮತ್ತು ಬಾಚಮಂಡ ತಂಡಗಳ ನಡುವಿನ ಸೆಣಸಾಟದಲ್ಲಿ ಪಾಲೆಯಡ ತಂಡವು ಬಾಚಮಂಡ ತಂಡವನ್ನು ೫-೪ ಗೋಲುಗಳ ಅಂತರದಿAದ ಸೋಲಿಸಿ ವಿಜಯಪತಾಕೆ ಹಾರಿಸಿತು. ಬೊಟ್ಟೋಳಂಡ ಮತ್ತು ಚೀಯಕಪೂವಂಡ ತಂಡಗಳ ನಡುವಿನ ಪಂದ್ಯದಲ್ಲಿ ಬೊಟ್ಟೋಳಂಡ ತಂಡವು ಚೀಯಕಪೂವಂಡ ತಂಡವನ್ನು ೧-೦ ಗೋಲಿನ ಅಂತರದಿAದ ಸೋಲಿಸಿತು. ನೆರವಂಡ ಮತ್ತು ನಾಯಕಂಡ ತಂಡಗಳ ನಡುವಿನ ಪಂದ್ಯದಲ್ಲಿ ನೆರವಂಡ ತಂಡವು ನಾಯಕಂಡ ತಂಡವನ್ನು ೨-೦ ಗೋಲುಗಳ ಅಂತರದಿAದ ಸೋಲಿಸಿ ಮುಂದಿನ ಸುತ್ತು ಪ್ರವೇಶಿಸಿತು.