ಗೋಣಿಕೊಪ್ಪಲು, ಏ. ೧೮: ಕೊಡಗಿನ ಗಡಿ ಭಾಗವಾದ ಕುಟ್ಟದಲ್ಲಿ ಹಿಂದೂ ಸಮಾಜದ ಜಾಗೃತಿಗಾಗಿ ವಿಶ್ವ ಹಿಂದೂ ಪರಿಷದ್ ಹಾಗೂ ಭಜರಂಗದಳ ದುರ್ಗಾವಾಹಿನಿಯ ಆಶ್ರಯದಲ್ಲಿ ಜನಜಾಗೃತಿ ಸಮಾವೇಶ ಹಾಗೂ ಶೋಭಾ ಯಾತ್ರೆ ಜರುಗಿತು. ಹಿಂದೂ ಜನಜಾಗೃತಿ ಸಮಾವೇಶಕ್ಕೆ ವಿವಿಧೆಡೆಯಿಂದ ಸಾವಿರಾರು ಸಂಖ್ಯೆಯಲ್ಲಿ ಕಾರ್ಯಕರ್ತರು ಆಶ್ರಯದಲ್ಲಿ ಜನಜಾಗೃತಿ ಸಮಾವೇಶ ಹಾಗೂ ಶೋಭಾ ಯಾತ್ರೆ ಜರುಗಿತು. ಹಿಂದೂ ಜನಜಾಗೃತಿ ಸಮಾವೇಶಕ್ಕೆ ವಿವಿಧೆಡೆಯಿಂದ ಸಾವಿರಾರು ಸಂಖ್ಯೆಯಲ್ಲಿ ಕಾರ್ಯಕರ್ತರು ಮಂದಿ ಪಟ್ಟಣದಲ್ಲಿ ನಡೆದ
ಬೃಹತ್ ಶೋಭಾಯಾತ್ರೆಯಲ್ಲಿ ಭಾಗಿಯಾಗಿದ್ದರು. ಇಲ್ಲಿನ ಕೊಡವ ಸಮಾಜದಿಂದ ಪಟ್ಟಣದ ಪ್ರಮುಖ ಮಾರ್ಗಗಳಲ್ಲಿ ನಡೆದ ಶೋಭಾಯಾತ್ರೆ ಯಲ್ಲಿ ಹಿಂದೂಪರ ಸಂಘಟನೆಗಳ ಕಾರ್ಯಕರ್ತರು, ಶಾಸಕರು, ಬಿಜೆಪಿ ಪಕ್ಷದ ಮುಖಂಡರು ಯುವಕರು, ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡಿದ್ದರು. ಮಹಿಳೆಯರು ಹಾಗೂ ಯುವಕ, ಯುವತಿಯರು ಸಂಭ್ರಮದಿAದ ಕೊಡಗಿನ ವಾಲಗ ಹಾಗೂ ಚಂಡೆ ವಾದÀ್ಯಕ್ಕೆ ಹೆಜ್ಜೆ ಹಾಕುತ್ತಾ ಸಾಗಿದರು. ಪಟಾಕಿ ಸಿಡಿಸಿ ಸಂಭ್ರಮಿಸಿದರು.
ಶೋಭಾಯಾತ್ರೆಯಲ್ಲಿ ಭಾರತ್ ಮಾತಾಕೀಜೈ ವಂದೇ ಮಾತರಂ,ಜೈ ಶಿವಾಜಿ,ಜೈ ಶ್ರೀರಾಮ್ ಸೇರಿದಂತೆ ಇನ್ನಿತರ ಘೋಷಣೆಗಳು ಮುಗಿಲು ಮುಟ್ಟಿದವು. ವೀರಾಂಜನೇಯ ಭಾವಚಿತ್ರದೊಂದಿಗೆ ನಾವೆಲ್ಲಾ ಹಿಂದೂ, ನಾವೆಲ್ಲಾ ಒಂದು ಎಂಬ ಘೋಷಣೆಯೊಂದಿಗೆ ಬೆಳಿಗ್ಗೆ ೧೧ ಗಂಟೆಗೆ ಶೋಭಾ ಯಾತ್ರೆಯು ಕೊಡವ ಸಮಾಜದಿಂದ ಆರಂಭವಾಯಿತು. ವಿಶ್ವಹಿಂದೂ ಪರಿಷದ್ ಪೊನ್ನಂಪೇಟೆ ಪ್ರಖಂಡ ಅಧ್ಯಕ್ಷ ಪಂದ್ಯAಡ ಹರೀಶ್ ಹಾಗೂ ಭಜರಂಗದಳದ ದಕ್ಷಿಣ ಪ್ರಾಂತ ಸಹ ಸಂಯೋಜಕರಾದ ರಘು ಜಿ. ಸಕಲೇಶಪುರರವರು ಶೋಭಾಯಾತ್ರೆಗೆ ಚಾಲನೆ ನೀಡಿದರು. ಪಟ್ಟಣದ ಮುಖ್ಯರಸ್ತೆಯ ಮೂಲಕ ಸಾಗಿದ ಶೋಭಾ ಯಾತ್ರೆಯು ಸಿಂಕೋನವರೆಗೆ ತೆರಳಿ ಮುಕ್ತಾಯಗೊಂಡಿತು. ಬಿಸಿಲಿನ ಬೇಗೆಯ ನಡುವೆ ಹಿಂದೂ ಬಾಂಧವರು ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದರು. ತಂಪು ಪಾನೀಯ, ಮಜ್ಜಿಗೆ ಹಾಗೂ ಕುಡಿಯುವ ನೀರಿನ ವ್ಯವಸ್ಥೆಯನ್ನು ರಸ್ತೆಯ ಉದ್ದಕ್ಕೂ ಆಯೋಜಕರು ಕಲ್ಪಿಸಿದ್ದರು.
ಶೋಭಾಯಾತ್ರೆಯ ಅಂಗವಾಗಿ ಕುಟ್ಟ ಪಟ್ಟಣವನ್ನು ಕೇಸರಿ ಧ್ವಜ, ಬಂಟಿAಗ್ಸ್ಗಳಿAದ ಅಲಂಕರಿ ಸಲಾಗಿತ್ತು. ಕಾರ್ಯಕ್ರಮ ನಡೆದ ಬಸ್ ನಿಲ್ದಾಣದ ವೇದಿಕೆಯು ಸಂಪೂರ್ಣ ಕೇಸರಿಮಯವಾಗಿತ್ತು. ವಿವಿಧ ಭಾಗಗಳಿಂದ (ಮೊದಲ ಪುಟದಿಂದ) ಆಗಮಿಸಿದ್ದ ಸಾವಿರಾರು ಮಂದಿ ಕಾರ್ಯಕ್ರಮಕ್ಕೆ ಸಾಕ್ಷಿಯಾ ದರು. ಬೆಳಿಗ್ಗೆ ಜನಜಾಗೃತಿ ಸಮಾ ವೇಶಕ್ಕೆ ಆಗಮಿಸುತ್ತಿದ್ದ ವಾಹನಗಳನ್ನು ಪೊಲೀಸರು ಬ್ಯಾರಿಕೇಡ್ ಅಳವಡಿಸಿ ತಡೆದು ಸಂಪೂರ್ಣ ಮಾಹಿತಿಯನ್ನು ಪಡೆದ ನಂತರ ವಾಹನಗಳÀನ್ನು ಬಳಿಕ ಬಿಡಲಾಗುತ್ತಿತ್ತು.
ಕುಟ್ಟ ಚೆಕ್ಪೋಸ್ಟ್, ಕಾನೂರು, ಶ್ರೀಮಂಗಲ ಭಾಗದಿಂದ ತೆರಳುವ ವಾಹನವನ್ನು ತಪಾಸಣೆ ಮಾಡಿ ನಂತರ ಬಿಡಲಾಗುತ್ತಿತ್ತು. ಕುಟ್ಟ ಬಸ್ ನಿಲ್ದಾಣದಲ್ಲಿ ನಿರ್ಮಿಸಲಾಗಿದ್ದ ಬೃಹತ್ ವೇದಿಕೆಯಲ್ಲಿ ವಿಶ್ವಹಿಂದೂ ಪರಿಷದ್ ಪೊನ್ನಂಪೇಟೆ ಪ್ರಖಂಡ ಅಧ್ಯಕ್ಷ ಪಂದ್ಯAಡ ಹರೀಶ್ ಅಧ್ಯಕ್ಷತೆಯಲ್ಲಿ ಮಧ್ಯಾಹ್ನ ೧೨.೩೦ ಗಂಟೆಗೆ ಸಭಾಕಾರ್ಯಕ್ರಮವು ಜರುಗಿತು. ಪೊನ್ನಂಪೇಟೆ ರಾಮಕೃಷ್ಣ ಆಶ್ರಮದ ಅಧ್ಯಕ್ಷರಾದ ತತ್ವರೂಪನಂದ ಸ್ವಾಮೀಜಿಯವರು ಜ್ಯೋತಿ ಬೆಳಗಿಸುವ ಮೂಲಕ ಸಭಾ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ಕೊಡಗು ಜಿಲ್ಲಾ ವಿಶ್ವ ಹಿಂದೂ ಪರಿಷದ್ ಅಧ್ಯಕ್ಷ ಕೃಷ್ಣಮೂರ್ತಿ ಪ್ರಾಸ್ತಾವಿಕವಾಗಿ ಮಾತನಾಡಿ ಹಿಂದೂ ಸಮಾಜ ಎಂದಿಗೂ ಯಾರಿಗೂ ತೊಂದರೆ ಕೊಟ್ಟ ಉದಾಹರಣೆ ಇಲ್ಲ. ಹಿಂದೂ ಸಮಾಜ ನಿದ್ರಿಸುತ್ತಿಲ್ಲ. ಹಿಂದೂ ಸಮಾಜದ ಬಲಪ್ರದರ್ಶನ ಕ್ಕಾಗಿ ಇಂತಹ ಜನಜಾಗೃತಿ ಸಮಾವೇಶವನ್ನು ಹಮ್ಮಿಕೊಳ್ಳಲಾಗಿದೆ ಎಂದು ಹೇಳಿದರು.
ದಿಕ್ಸೂಚಿ ಭಾಷಣಕಾರರಾಗಿ ಆಗಮಿಸಿದ್ದ ಭಜರಂಗದಳದ ದಕ್ಷಿಣ ಪ್ರಾಂತ ಸಹ ಸಂಯೋಜಕರಾದ ರಘು ಜಿ. ಸಕಲೇಶಪುರ ಅವರು ಮಾತನಾಡಿ, ಹುಬ್ಬಳ್ಳಿಯಲ್ಲಿ ಪೊಲೀಸರ ವಾಹನವನ್ನು ಬೀಳಿಸಿ ಬೆಂಕಿ ಹಚ್ಚುವ ಆಶ್ರಮದ ಅಧ್ಯಕ್ಷರಾದ ತತ್ವರೂಪನಂದ ಸ್ವಾಮೀಜಿಯವರು ಜ್ಯೋತಿ ಬೆಳಗಿಸುವ ಮೂಲಕ ಸಭಾ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ಕೊಡಗು ಜಿಲ್ಲಾ ವಿಶ್ವ ಹಿಂದೂ ಪರಿಷದ್ ಅಧ್ಯಕ್ಷ ಕೃಷ್ಣಮೂರ್ತಿ ಪ್ರಾಸ್ತಾವಿಕವಾಗಿ ಮಾತನಾಡಿ ಹಿಂದೂ ಸಮಾಜ ಎಂದಿಗೂ ಯಾರಿಗೂ ತೊಂದರೆ ಕೊಟ್ಟ ಉದಾಹರಣೆ ಇಲ್ಲ. ಹಿಂದೂ ಸಮಾಜ ನಿದ್ರಿಸುತ್ತಿಲ್ಲ. ಹಿಂದೂ ಸಮಾಜದ ಬಲಪ್ರದರ್ಶನ ಕ್ಕಾಗಿ ಇಂತಹ ಜನಜಾಗೃತಿ ಸಮಾವೇಶವನ್ನು ಹಮ್ಮಿಕೊಳ್ಳಲಾಗಿದೆ ಎಂದು ಹೇಳಿದರು.
ದಿಕ್ಸೂಚಿ ಭಾಷಣಕಾರರಾಗಿ ಆಗಮಿಸಿದ್ದ ಭಜರಂಗದಳದ ದಕ್ಷಿಣ ಪ್ರಾಂತ ಸಹ ಸಂಯೋಜಕರಾದ ರಘು ಜಿ. ಸಕಲೇಶಪುರ ಅವರು ಮಾತನಾಡಿ, ಹುಬ್ಬಳ್ಳಿಯಲ್ಲಿ ಪೊಲೀಸರ ವಾಹನವನ್ನು ಬೀಳಿಸಿ ಬೆಂಕಿ ಹಚ್ಚುವ ತಾಲೂಕು ಕಾರ್ಯದರ್ಶಿ ಅಮ್ಮತ್ತೀರ ಸುರೇಶ್, ತೀತಿರ ತೀರ್ಥ ಮಂಜುನಾಥ್, ಸಂಚಾಲಕ ಸಜನ್, ಉಪಸ್ಥಿತರಿದ್ದರು.
ಶಾಸಕ ಕೆ.ಜಿ. ಬೋಪಯ್ಯ, ಸಂಘ ಪರಿವಾರದ ಪ್ರಮುಖ್ ಚೆಕ್ಕೇರ ಮನು ಕಾವೇರಪ್ಪ, ಬಿಜೆಪಿ ಮುಖಂಡರಾದ ಕಾಡ್ಯಮಾಡ ಗಿರೀಶ್ ಗಣಪತಿ, ನೆಲ್ಲೀರ ಚಲನ್ ಕುಮಾರ್, ಬೊಟ್ಟಂಗಡ ರಾಜು, ಅಜ್ಜಿಕುಟ್ಟಿರ ಪ್ರವೀಣ್, ಗುಮ್ಮಟ್ಟೀರ ಕಿಲನ್ ಗಣಪತಿ, ಚೆಕ್ಕೆರ ಸೂರ್ಯ ಅಯ್ಯಪ್ಪ, ಸಿ.ಕೆ. ಬೋಪಣ್ಣ, ಕಾಟಿಮಾಡ ಶರೀನ್ ಮುತ್ತಣ್ಣ, ಚೋಡುಮಾಡ ಶ್ಯಾಮ್ ಪೂಣಚ್ಚ, ಚೋಡುಮಾಡ ಶರೀನ್ ಸುಬ್ಬಯ್ಯ, ಮುದ್ದಿಯಡ ಮಂಜು, ಆಲೆಮಾಡ ನವೀನ್, ಗುಮ್ಮಟ್ಟೀರ ದರ್ಶನ್, ಚೆಪ್ಪುಡೀರ ರಾಕೇಶ್, ಚೆಪ್ಪುಡೀರ ವಿವೇಕ್ ಸೇರಿದಂತೆ ಅನೇಕ ಮುಖಂಡರು ಭಾಗವಹಿಸಿದ್ದರು. ಭಜರಂಗದಳದ ಸಜನ್ ಸ್ವಾಗತಿಸಿದರು. ದುರ್ಗಾವಾಹಿನಿಯ ತೀತಿರ ತೀರ್ಥ ಮಂಜುನಾಥ್ ವಂದಿಸಿದರು. ಜಿಲ್ಲಾ ಸಂಯೋಜಕಿ ಅಂಬಿಕ ಉತ್ತಪ್ಪ, ಅಮ್ಮತ್ತೀರ ಆರತಿ ಸುರೇಶ್ ಕಾರ್ಯಕ್ರಮ ನಿರೂಪಿಸಿದರು. ದುರ್ಗಾವಾಹಿನಿ ತಂಡದಿAದ ಸಂಘ ಗೀತೆ ಹಾಡಲಾಯಿತು.
ಕೊಡಗು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮಲ್ಚೀರ ಎ. ಅಯ್ಯಪ್ಪ ನೇತೃತ್ವದಲ್ಲಿ ಮಡಿಕೇರಿ ಡಿವೈಎಸ್ಪಿ ಗಜೇಂದ್ರ ಪ್ರಸಾದ್, ಸೋಮವಾರಪೇಟೆ ಡಿವೈಎಸ್ಪಿ ಶೈಲೇಂದ್ರ, ಸರ್ಕಲ್ ಇನ್ಸ್ಪೆೆಕ್ಟರ್ಗಳಾದ ಮಂಜಪ್ಪ, ಶ್ರೀಧರ್, ಸೇರಿದಂತೆ ೨೫೦ಕ್ಕೂ ಅಧಿಕ ಪೊಲೀಸ್ ಸಿಬ್ಬಂದಿ ಹಾಗೂ ಕೆ.ಎಸ್.ಆರ್.ಪಿ. ತುಕಡಿಗಳನ್ನು ಭದ್ರತಾ ಕಾರ್ಯಕ್ಕೆ ನಿಯೋಜಿಸಲಾಗಿತ್ತು.
ಚಿತ್ರ, ವರದಿ: ಹೆಚ್.ಕೆ. ಜಗದೀಶ್