ಕೊಡ್ಲಿಪೇಟೆ, ಏ. ೧೭: ಇಲ್ಲಿನ ಕಾಮಧೇನು ಪತ್ತಿನ ಸಹಕಾರ ಸಂಘದ ಆಡಳಿತ ಮಂಡಳಿಗೆ ನಡೆದ ಚುನಾವಣೆಯಲ್ಲಿ ೧೧ ಮಂದಿ ನಿರ್ದೇಶಕರುಗಳಾಗಿ ಅವಿರೋಧವಾಗಿ ಆಯ್ಕೆಯಾದರು.

ಸಂಘದ ಸಭಾಂಗಣದಲ್ಲಿ ನಡೆದ ಆಯ್ಕೆ ಪ್ರಕ್ರಿಯೆಯಲ್ಲಿ ಕೆ.ಕೆ. ರೇಣುಕ, ಹೆಚ್.ಎಂ. ದಿವಾಕರ್, ಎಸ್.ಎಸ್. ರಮೇಶ್, ಎ.ಎಂ. ಕುಮಾರಸ್ವಾಮಿ, ಡಿ.ಹೆಚ್. ರಮೇಶ್, ಕೆ.ಜಿ. ಕುಮಾರಸ್ವಾಮಿ, ಎ.ಆರ್. ಚಂದ್ರಶೆಟ್ಟಿ, ಕೆ.ಹೆಚ್. ಅಲ್ತಾಫ್ ಹುಸೇನ್, ಕೆ.ಎಸ್. ಸುಧೀಂದ್ರಕುಮಾರ್, ಎ.ಎಸ್. ಭುವನೇಶ್ವರಿ, ಬಿ.ಕೆ. ರಂಜಿತ ಅವರುಗಳು ಮುಂದಿನ ೫ ವರ್ಷಗಳ ಅವಧಿಗೆ ನಿರ್ದೇಶಕರಾಗಿ ಅವಿರೋಧವಾಗಿ ಆಯ್ಕೆಯಾದರು. ಚುನಾವಣಾಧಿಕಾರಿಯಾಗಿ ಸಹಕಾರ ಸಂಘಗಳ ಉಪ ನಿಬಂಧಕರ ಕಚೇರಿಯ ಎಂ.ಇ. ಮೋಹನ್ ಕಾರ್ಯ ನಿರ್ವಹಿಸಿದರು.