ಶನಿವಾರಸಂತೆ, ಏ. ೧೭: ಶನಿವಾರಸಂತೆ ಸಮೀಪದ ಗೋಪಾಲಪುರ ಗ್ರಾಮದಲ್ಲಿ ಶ್ರೀ ಬನಶಂಕರಿ ಅಮ್ಮನವರ ೨೪ನೇ ವರ್ಷದ ವಾರ್ಷಿಕ ಮಹೋತ್ಸವ ತಾ. ೧೯ ಹಾಗೂ ೨೦ರಂದು ನಡೆಯಲಿದೆ.
ತಾ. ೧೯ರಂದು ಬೆಳಿಗ್ಗೆ ೮ ಗಂಟೆಗೆ ಗಣಪತಿ ಪೂಜೆ, ವಿವಿಧ ಕಾರ್ಯಕ್ರಮಗಳು, ರಾತ್ರಿ ಮಹಾಮಂಗಳಾರತಿ, ತೀರ್ಥ ಪ್ರಸಾದ ವಿನಿಯೋಗ, ಅನ್ನಸಂತರ್ಪಣೆ, ಸುಗ್ಗಿ ಕುಣಿತ ಮತ್ತು ಸಿಡಿಮದ್ದು ಪ್ರದರ್ಶನ. ತಾ. ೨೦ರಂದು ಬೆಳಿಗ್ಗೆ ಅಮ್ಮನವರ ಉತ್ಸವ ಮೂರ್ತಿಯನ್ನು ಅಡ್ಡಪಲ್ಲಕ್ಕಿಯಲ್ಲಿ ವಾದ್ಯ ಸಮೇತ ಗಂಗಾಪೂಜೆ, ನಂತರ ಊರಿನ ಪ್ರಮುಖ ಬೀದಿಯಲ್ಲಿ ಭವ್ಯ ಮೆರವಣಿಗೆಯಲ್ಲಿ ದೇವಾಲಯಕ್ಕೆ ಕರೆತರಲಾಗುವುದು. ಬೆಳಿಗ್ಗೆ ೮ ಗಂಟೆಗೆ ಕೆಂಡೋತ್ಸವ, ೯ ಗಂಟೆಗೆ ಅಮ್ಮನವರಿಗೆ ಕುಂಕುಮಾರ್ಚನೆ, ಮಹಾಮಂಗಳಾರತಿ ಹಾಗೂ ಪ್ರಸಾದ ವಿನಿಯೋಗವಿರುತ್ತದೆ ಎಂದು ಪ್ರಕಟಣೆ ತಿಳಿಸಿದೆ.