ನಾಪೋಕ್ಲು, ಏ. ೧೭: ಸಮೀಪದ ಪಾಲೂರು ಗ್ರಾಮದ ಮಹಾಲಿಂಗೇಶ್ವರ ದೇವಾಲಯದಲ್ಲಿ ವಾರ್ಷಿಕ ಉತ್ಸವ ತಾ. ೧೮ ಮತ್ತು ತಾ. ೧೯. ಜರುಗಲಿದೆ. ಸೋಮವಾರ ಪಟ್ಟಣಿ ಹಬ್ಬ ಜರುಗಲಿದ್ದು, ಬೆಳಿಗ್ಗೆ ೯ ಗಂಟೆಗೆ ತುಲಾಭಾರ, ಮಧ್ಯಾಹ್ನ ಎತ್ತುಪೋರಾಟ ನಡೆಯಲಿದೆ. ಒಂದು ಗಂಟೆಯಿAದ ಸಾಂಸ್ಕೃತಿಕ ಕಾರ್ಯಕ್ರಮಗಳು ಹಾಗೂ ಭಕ್ತರಿಗೆ ಅನ್ನಸಂತರ್ಪಣೆ ನಡೆಯಲಿದೆ. ಅಪರಾಹ್ನ ೩.೩೦ಕ್ಕೆ ಜೋಡಿ ದೇವರ ನೃತ್ಯೋತ್ಸವ ಜರುಗಲಿದೆ.

ಮಂಗಳವಾರ ಸಂಜೆ ದೇವರ ಅವಭೃತ ಸ್ನಾನದ ಬಳಿಕ ರಾತ್ರಿ ದೇವಾಲಯದಲ್ಲಿ ನೃತ್ಯೋತ್ಸವ ಜರುಗಲಿದೆ. ಬುಧವಾರ ಮಹಾಪೂಜೆಯೊಂದಿಗೆ ಉತ್ಸವ ಸಂಪನ್ನಗೊಳ್ಳ್ಳಲಿದೆ.