ಮಡಿಕೇರಿ, ಏ. ೧೮: ೧೯೮೮ನೇ ಇಸವಿಯಲ್ಲಿ ಕುಶಾಲನಗರದಲ್ಲಿ ಪ್ರಾರಂಭವಾದ ಇಗ್ಗುತಪ್ಪ ಸ್ಪೋರ್ಟ್ಸ್ ಮತ್ತು ಕಲ್ಚರಲ್ ಅಸೋಸಿಯೇಷನ್ ಸಂಸ್ಥೆಯ ಆವರಣದಲ್ಲಿ ಹೊಸದಾಗಿ ನಿರ್ಮಾಣಗೊಂಡ ಒಳಾಂಗಣ ಷಟಲ್ ಬ್ಯಾಡ್ಮಿಂಟನ್ ಕೋರ್ಟನ್ನು ಮಡಿಕೇರಿ ಕ್ಷೇತ್ರದ ಶಾಸಕ ಮಂಡೇಪAಡ ಅಪ್ಪಚ್ಚು ರಂಜನ್, ಎಂ.ಎಲ್.ಸಿ. ಶಾಂತೆಯAಡ ವೀಣಾ ಅಚ್ಚಯ್ಯ ಹಾಗೂ ಮಾಜಿ ಎಂ.ಎಲ್.ಸಿ. ಮಂಡೇಪAಡ ಸುನಿಲ್ ಸುಬ್ರಮಣಿ ಅವರು ಉದ್ಘಾಟಿಸಿದರು.
ಸಂಸ್ಥೆಯ ಅಧ್ಯಕ್ಷ ಕರ್ನಂಡ ಅರುಣ್ ಮೊಣ್ಣಪ್ಪ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭಾ ಕಾರ್ಯಕ್ರಮದಲ್ಲಿ ಪಾಲ್ಗೊಂಡ ಅತಿಥಿಗಳು ಮಾತನಾಡಿ, ಸಂಸ್ಥೆಗೆ ಶುಭ ಕೋರಿದರು. ವೇದಿಕೆಯಲ್ಲಿ ಸಂಸ್ಥೆಯ ಉಪಾಧ್ಯಕ್ಷ ಸೋಮೆಯಂಡ ಜಗ್ಗ ಪೂವಯ್ಯ ಹಾಗೂ ಕಾರ್ಯದರ್ಶಿ ಮೇವಡ ಮಧು ಮಾದಯ್ಯ ಅವರುಗಳು ಉಪಸ್ಥಿತರಿದ್ದರು.
ಚೋವಂಡ ಅನಿತ ಪ್ರಾರ್ಥಿಸಿ, ವಾಂಚಿರ ಮನು ನಂಜುAಡ ಸ್ವಾಗತಿಸಿ, ಮೂವೆರ ಗಣೇಶ್ ಕಾರ್ಯಕ್ರಮವನ್ನು ನಿರೂಪಿಸಿ, ಸೋಮೆಯಂಡ ಜಗ್ಗ ಪೂವಯ್ಯ ಅವರು ವಂದಿಸಿದರು.
ಸಭೆಯಲ್ಲಿ ಮಣವಟ್ಟಿರ ಸಂತೋಷ್, ಮಂಡೇಪAಡ ಚಿಮ್ಮ ಉತ್ತಪ್ಪ, ಚೌರೀರ ಸುಧೀಶ್, ಮಾದಪಂಡ ಸತೀಶ್ ಮಾಚಯ್ಯ, ಚಂದಪAಡ ಕಾವ್ಯ ಸೂರಜ್, ಅಪ್ಪಚೆಟ್ಟೋಳಂಡ ಅಜಿತ್ ಅಚ್ಚಯ್ಯ, ಪಾಲಚಂಡ ಸುರೇಶ್ ಮಾದಪ್ಪ ಹಾಗೂ ಉಡುವೆರ ಹ್ಯಾರಿ ಚಿಟ್ಟಿಯಪ್ಪ ಅವರುಗಳು ಉಪಸ್ಥಿತರಿದ್ದರು.