ನಾಪೋಕ್ಲು, ಏ. ೧೭: ಶಿಕ್ಷಕರ ಮೂಲಕ ಮಕ್ಕಳ ಮನಸ್ಸನ್ನು ಹೊಕ್ಕು ದೇಶಪ್ರೇಮ ಹಾಗೂ ರಾಷ್ಟçಪ್ರೇಮವನ್ನು ಬೆಳೆಸುವ, ಪ್ರಕೃತಿ ಪ್ರಾಣಿ ಪಕ್ಷಿ ಸಂಕುಲವನ್ನು ಪ್ರೀತಿಸುವ ಕೆಲಸ ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಸಂಸ್ಥೆಯಿAದ ಆಗುತ್ತಿದೆ ಎಂದು ರಾಜ್ಯ ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಸಂಸ್ಥೆಯ ಮುಖ್ಯ ಆಯುಕ್ತ ಪಿ.ಜಿ.ಆರ್. ಸಿಂದ್ಯಾ ಹೇಳಿದರು.

ಇಲ್ಲಿನ ಕರ್ನಾಟಕ ಪಬ್ಲಿಕ್ ಶಾಲೆಯಲ್ಲಿ ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಸಂಸ್ಥೆ ವತಿಯಿಂದ ಆಯೋಜಿಸಲಾಗಿದ್ದ ಬೇಸಿಗೆ ಶಿಬಿರದ ಸಮಾರೋಪ ಸಮಾರಂಭದಲ್ಲಿ ಅವರು ಮಾತನಾಡಿದರು. ಸತ್ಯವೇ ದೇವರು ಅದರಂತೆ ಸತ್ಯ, ನಿಷ್ಠೆ, ಪ್ರಾಮಾಣಿಕತೆಯ ಒಂದು ಸಂಸ್ಥೆ ಇದ್ದರೆ ಅದು ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಸಂಸ್ಥೆ ಮಕ್ಕಳು ಮನೆಯಲ್ಲಿ ಮತ್ತು ಹೊರಗಡೆ ಸಂತೋಷದಿAದ ಇರಬೇಕೆಂದ ಅವರು, ಯಾವ ಮನೆಯಲ್ಲಿ ಸಂತೋಷ ಇದೆಯೇ ಆ ಮನೆ ಉತ್ಸಾಹದಿಂದ ತುಂಬಿರುತ್ತದೆ.ಪ್ರತಿಯೊಬ್ಬರು ದೇಶ ಪ್ರೇಮವನ್ನು ಬೆಳೆಸಿಕೊಳ್ಳಬೇಕು ಅದರಂತೆ ಪ್ರಕೃತಿ, ಪ್ರಾಣಿ ಪಕ್ಷಿಗಳನ್ನು ಪ್ರೀತಿಸುವ ಮನೋಭಾವವನ್ನು ಹೊಂದಿರಬೇಕು ಎಂದರು. ನಿಮ್ಮ ನಿಮ್ಮ ಧರ್ಮವನ್ನು ನೀವು ಪ್ರೀತಿಸಿ. ನಮ್ಮ ದೇಶ ಜಾತಿ ಧರ್ಮಕ್ಕೆ ಸೀಮಿತವಲ್ಲ. ಮಕ್ಕಳು ಮಾನಸಿಕವಾಗಿ ಮತ್ತು ದೈಹಿಕವಾಗಿ ಸದೃಡರಾಗಿರಬೇಕು. ಕೊಡಗಿನ ಫೀಲ್ಡ್ ಮಾರ್ಷಲ್ ಕಾರ್ಯಪ್ಪ ಅವರ ಪ್ರಾಮಾಣಿಕತೆ, ಶಿಸ್ತನ್ನು ಎಲ್ಲರೂ ಮೈಗೂಡಿಕೊಳ್ಳಬೇಕು ಎಂದರು.