(ವಿಶೇಷ ವರದಿ: ಹೆಚ್.ಕೆ. ಜಗದೀಶ್) , ಏ. ೧೭: ಸ್ವಾತಂತ್ರö್ಯ ಕಳೆದು ೭೫ ವರ್ಷ ಪೂರೈಸಿದ್ದರೂ ಇನ್ನು ಕೂಡ ಬಡಜನತೆ ತಮ್ಮ ಮನೆಗಳ ಹಕ್ಕು ಪತ್ರಕ್ಕಾಗಿ ಕಚೇರಿಗಳಿಗೆ ಅಲೆದಾಡುವುದು ತಪ್ಪಿದಂತಿಲ್ಲ. ಹಲವು ಸರ್ಕಾರಗಳು ವಿವಿಧ ಯೋಜನೆಗಳನ್ನು ಬಡವರ ಮನೆ ಬಾಗಿಲಿಗೆ ತಲುಪಿಸುವ ವ್ಯವಸ್ಥೆ ಕಲ್ಪಿಸಿತ್ತಾದರೂ ಇಲ್ಲಿಯ ತನಕ ಬಹುತೇಕ ಯೋಜನೆಗಳು ಅರ್ಹರ ಮನೆ ಬಾಗಿಲಿಗೆ ಇನ್ನೂ ತಲುಪಿಲ್ಲ.ಸರಿಸುಮಾರು ೬ ದಶಕಗಳ ಹಿಂದಿನಿAದಲೂ ಕಾನೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮುಖ್ಯರಸ್ತೆಗೆ ಹೊಂದಿಕೊAಡAತೆ ಸುಮಾರು ಏಳು ಏಕರೆ ವಿಸ್ತಿçÃರ್ಣವುಳ್ಳ ವಡ್ಡಮೂಲೆ ಕಾಲೋನಿಯ ನಿವಾಸಿಗಳು ಸರ್ಕಾರಿ ಜಾಗದಲ್ಲಿ ೩೦ಕ್ಕೂ ಅಧಿಕ ಬಡಕಾರ್ಮಿಕರು ಸೇರಿದಂತೆ ಇನ್ನಿತರ ಕುಟುಂಬಗಳು ವಾಸಿಸುತ್ತಿವೆ. ಇವರಿಗೆ ಸರ್ಕಾರವೂ ೧೯೭೫ರಲ್ಲಿ ಜನತಾ ಮನೆಗಳನ್ನು ನಿರ್ಮಿಸಿಕೊಟ್ಟು ಏಳು ಏಕರೆ ಸರ್ಕಾರಿ ಜಾಗವನ್ನು ಮೀಸಲಿಟ್ಟಿತ್ತು. ಆ ಸಂದರ್ಭದಲ್ಲಿ ಜನತಾ ಮನೆಗಳಿಗೆ ತಲಾ ೨ ಸಾವಿರ ಹಣವನ್ನು ಸರ್ಕಾರದಿಂದ ಮಂಜೂರು ಮಾಡಲಾಗಿತ್ತು.ಈ ಹಣದಲ್ಲಿ ಮನೆ ನಿರ್ಮಿಸಿಕೊಳ್ಳಬೇಕಾಗಿತ್ತು. ಇಂತಹ ಮನೆಗಳಿಗೆ ಆಗಿನ ಬ್ಲಾಕ್ ಡೆವಲಪ್‌ಮೆಂಟ್ ಆಫೀಸರ್ ಕಡೆಯಿಂದ ಹಕ್ಕು ಪತ್ರ ಮಂಜೂರು ಮಾಡಲಾಗಿತ್ತು. ಆದರೆ ಹಳೆಯ ಹಕ್ಕು ಪತ್ರಗಳು ಈ ಬಡ ಕುಟುಂಬಗಳ ಬಳಿ ಉಳಿದಿಲ್ಲ. ಆರು ದಶಕಗಳ ಹಿಂದೆ ಕಟ್ಟಿಸಿದ ಮನೆಗಳು ಬೀಳಲಾರಂಭಿಸಿವೆೆ. ಹೊಸ ಮನೆ ಮಂಜೂರಾದರೂ ಸೂಕ್ತ ಹಕ್ಕು ಪತ್ರವಿಲ್ಲದೆ ಹೊಸ ಮನೆಯು ಮಂಜೂರಾಗುತ್ತಿಲ್ಲ. ಅಲ್ಲದೆ ಈ ಮನೆಗಳನ್ನು ದುರಸ್ತಿ ಮಾಡಲು ಇವರ ಬಳಿ ಹಣವಿಲ್ಲ. ಮೀಸಲಿಟ್ಟ ಏಳು ಏಕರೆ ಜಾಗವು ಬಹುತೇಕ ಒತ್ತುವರಿಯಾಗಿದ್ದು, ಇದೀಗ ಕೇವಲ ಎರಡು ಎಕರೆ ಜಾಗದಲ್ಲಿ ೩೦ ಕುಟುಂಬಗಳು ವಾಸಿಸುತ್ತಿವೆ.

ಕಾಲೋನಿ ನಿವಾಸಿಗಳ ಅನುಕೂಲಕ್ಕಾಗಿದ್ದ ಕೆರೆಯು ಅನ್ಯರ ಪಾಲಾಗಿದೆ. ಇಲ್ಲಿಯ ಕುಟುಂಬಗಳಿಗೆ ನಾಲ್ಕು ಕುಡಿಯುವ ಬಾವಿಗಳನ್ನು ನಿರ್ಮಿಸಲಾಗಿತ್ತು. ಇದೀಗ ಕಾಲೋನಿಯಲ್ಲಿ ಕೇವಲ ಒಂದು ಕುಡಿಯುವ ಬಾವಿ ಲಭ್ಯವಿದೆ. ಉಳಿದ ಬಾವಿಯೂ ಅನ್ಯರ ಪಾಲಾಗಿದೆ.

ವಡ್ಡಮೂಲೆ ಕಾಲೋನಿಯಲ್ಲಿ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಸೇರಿದಂತೆ ಇನ್ನಿತರ ವರ್ಗದ ಜನರು ವಾಸವಾಗಿದ್ದಾರೆ. ಪ್ರತಿ ವರ್ಷ ಪಂಚಾಯಿತಿಗೆ ನಿಗದಿತ ಕಂದಾಯವನ್ನು ಪಾವತಿಸುತ್ತಿದ್ದಾರೆ. ಕಾನೂರು ಗ್ರಾಮ ಪಂಚಾಯಿತಿ ಪ್ರತಿ ವರ್ಷ ಕಾಲೋನಿಯ ಅಭಿವೃದ್ದಿಗಾಗಿ ಕುಡಿಯುವ ನೀರು, ರಸ್ತೆ, ಮೋರಿ, ಇನ್ನಿತರ ಮೂಲಭೂತ ಸೌಕರ್ಯಗಳನ್ನು ಒದಗಿಸುತ್ತಿದೆ. ಆದರೆ ಇವರಿಗೆ ಪ್ರಮುಖವಾಗಿ ಅಗತ್ಯವಿರುವ ತಮ್ಮ ಮನೆಗಳ ವಾಸದ ಹಕ್ಕು ಪತ್ರವಿಲ್ಲದೆ ಸರ್ಕಾರದ ಯಾವುದೇ ಯೋಜನೆ ಗಳನ್ನು ಪಡೆಯಲು ಸಾಧ್ಯವಾಗುತ್ತಿಲ್ಲ. ಕಾಲೋನಿಯ ನಿವಾಸಿಗಳು ಅಧಿಕಾರಿಗಳಿಗೆ ಹಾಗೂ ಜನಪ್ರತಿನಿಧಿ ಗಳಿಗೆ ಸಾಕಷ್ಟು ಮನವಿ ಸಲ್ಲಿಸಿದರೂ ಈ ಬಗ್ಗೆ ಇಲ್ಲಿಯ

(ಮೊದಲ ಪುಟದಿಂದ) ತನಕ ಯಾವುದೇ ಪ್ರಯೋಜನವಾಗಿಲ್ಲ. ಕೆಲವು ರಾಜಕೀಯ ಮುಖಂಡರು ಈ ನಿವಾಸಿಗಳಿಗೆ ಯಾವುದೇ ಪ್ರಯೋಜನಗಳು ಸಿಗದಂತೆ ತಮ್ಮ ರಾಜಕೀಯ ಪ್ರಭಾವವನ್ನು ಬೀರುತ್ತಿದ್ದಾರೆ ಎಂದು ಕಾಲೋನಿಯ ನಿವಾಸಿಗಳು ತಮ್ಮ ಅಳಲನ್ನು ತೋಡಿಕೊಂಡಿದ್ದಾರೆ.

ಪ್ರತಿ ಚುನಾವಣೆಯಲ್ಲಿ ಮತ ಕೇಳಲು ಬರುವ ಅಭ್ಯರ್ಥಿಗಳು ಹಕ್ಕು ಪತ್ರ ಒದಗಿಸಿಕೊಡುವ ಬಗ್ಗೆ ಭರವಸೆಯನ್ನು ನೀಡುತ್ತ ಈಗಾಗಲೇ ದಶಕಗಳೇ ಕಳೆದಿವೆ. ಆದರೆ ನ್ಯಾಯಯುತವಾಗಿ ನಮಗಳಿಗೆ ಸಿಗಬೇಕಾದ ಹಕ್ಕು ಪತ್ರ ಇನ್ನೂ ಕೂಡ ದೊರೆತಿಲ್ಲ. ಪ್ರಕೃತಿ ವಿಕೋಪದ ಸಂದರ್ಭ ಮಳೆ ಹಾನಿಯಿಂದ ಮೂರು ಮನೆಗಳು ಈ ಭಾಗದಲ್ಲಿ ಕುಸಿದು ಬಿದ್ದಿವೆ. ಆದರೆ ಮನೆ ದುರಸ್ಥಿಗೆ ಅಗತ್ಯ ದಾಖಲಾತಿಗಳಾದ ಹಕ್ಕು ಪತ್ರವಿಲ್ಲದೆ ಯಾವುದೇ ಪರಿಹಾರ ಇಲ್ಲಿಯ ತನಕ ಲಭಿಸಿಲ್ಲ. ಜಿಲ್ಲಾಧಿಕಾರಿಗಳು ಸೇರಿದಂತೆ ಜನಪ್ರತಿನಿಧಿಗಳನ್ನು ಈ ಬಗ್ಗೆ ಹಲವು ಬಾರಿ ಖುದ್ದು ಭೇಟಿ ನೀಡಿ ಮನವಿ ಸಲ್ಲಿಸಿದ್ದರೂ ಕೇವಲ ಭರವಸೆ ನೀಡಿ ಸುಮ್ಮನಾಗಿದ್ದಾರೆ.

ಕಾಲೋನಿ ನಿವಾಸಿಗಳ ಮಕ್ಕಳಿಗಾಗಿ ಅಂಗನವಾಡಿ ಕೇಂದ್ರವು ತೆರೆದಿದೆ. ಇಲ್ಲಿಯ ಪುಟಾಣಿ ಮಕ್ಕಳು ಇದರ ಪ್ರಯೋಜನವನ್ನು ಹಲವು ದಶಕಗಳಿಂದ ಪಡೆಯುತ್ತಿದ್ದಾರೆ. ಕಾಲೋನಿ ಸುತ್ತಲು ಶಾಸಕರ ಅನುದಾನದಿಂದ ಕಾಂಕ್ರಿಟ್ ರಸ್ತೆಗಳನ್ನು ನಿರ್ಮಾಣ ಮಾಡಲಾಗಿದೆ. ಪ್ರತಿಯೊಂದು ಸವಲತ್ತುಗಳು ಇಲ್ಲಿಯ ನಿವಾಸಿಗಳಿಗೆ ಲಭಿಸುತ್ತಿದ್ದರೂ ಅವಶ್ಯವಾಗಿ ಬೇಕಾದ ಮನೆಯ ಹಕ್ಕು ಪತ್ರ ಇಲ್ಲದೆ ತೊಂದರೆಯಲ್ಲಿ ಸಿಲುಕಿದ್ದಾರೆ. ತಹಶೀಲ್ದಾರರು ಈ ಬಗ್ಗೆ ಮುತುವರ್ಜಿ ವಹಿಸಿ ಅರ್ಹ ಫಲಾನುಭವಿಗಳಿಗೆ ಹಕ್ಕು ಪತ್ರ ನೀಡುವಂತಾಗಲಿ.