ಸಿದ್ದಾಪುರ, ಏ. ೧೭: ಯುವ ಜನತಾದಳ ಕುಶಾಲನಗರ ತಾಲೂಕು ಉಪಾಧ್ಯಕ್ಷ ಶಿಹಾಬುದ್ದಿನ್ ತಂಙಳ್ ವಿಪಿಎಸ್ ನೇತೃತ್ವದಲ್ಲಿ ಜೆಡಿಎಸ್ ಪಕ್ಷದ ಸದಸ್ಯತ್ವ ಅಭಿಯಾನ ನಡೆಯಿತು. ರಾಜ್ಯ ಹಾಗೂ ಜಿಲ್ಲಾ ಜೆಡಿಎಸ್ ವರಿಷ್ಠರ ಸೂಚನೆಯ ಮೇರೆಗೆ ಜಿಲ್ಲೆಯಾದ್ಯಂತ ಸದಸ್ಯತ್ವ ಅಭಿಯಾನ ಕಾರ್ಯಕ್ರಮದ ಅಂಗವಾಗಿ ನೆಲ್ಯಹುದಿಕೇರಿ ಗ್ರಾ.ಪಂ. ವ್ಯಾಪ್ತಿಯ ಏಳು ವಾರ್ಡಿನ ನೂರಕ್ಕೂ ಅಧಿಕ ಮಂದಿ ಸದಸ್ಯತ್ವ ಅಭಿಯಾನದಲ್ಲಿ ಪಾಲ್ಗೊಂಡು ನೋಂದಾಯಿಸಿಕೊAಡರು.
ಈ ಸಂದರ್ಭ ಪಕ್ಷದ ಅಲ್ಪಸಂಖ್ಯಾತ ಮುಖಂಡರುಗಳಾದ ಹಬೀಬ್, ಸುಹೈಲ್, ಶಿಹಾಬ್ ಕೆ.ಎಂ.ಎಸ್. ಇನ್ನಿತರರು ಹಾಜರಿದ್ದರು.