ಮಡಿಕೇರಿ, ಏ. ೧೭: ಮಾದಾಪುರ ಚೆನ್ನಮ್ಮ ಪದವಿ ಪೂರ್ವ ಕಾಲೇಜಿನಲ್ಲಿ ೧೯೭೮-೮೦ನೇ ಸಾಲಿನಲ್ಲಿ ವ್ಯಾಸಂಗ ಮಾಡಿದ ವಿದ್ಯಾರ್ಥಿಗಳು ೪೨ ವರ್ಷಗಳ ಬಳಿಕ ಕಾಲೇಜಿಗೆ ಭೇಟಿ ನೀಡಿ ತಮ್ಮ ಹಳೆಯ ನೆನಪುಗಳನ್ನು ಹಂಚಿಕೊAಡರು. ತಂಡದಲ್ಲಿ ೩೧ ಮಂದಿ ಇದ್ದು, ಎಲ್ಲರೂ ಕಾಲೇಜಿನ ಕ್ಯಾಂಪಸ್ನಲ್ಲಿ ವಿಹರಿಸಿದ ಬಳಿಕ ಮಾದಾಪುರ ಸ್ಪೋರ್ಟ್ಸ್ ಅಸೋಸಿಯೇಶನ್ಸ್ ಹಾಲ್ನಲ್ಲಿ ವಿಚಾರ ವಿನಿಮಯ ನಡೆಸಿದರು.