ಸೋಮವಾರಪೇಟೆ, ಏ. ೧೭: ಶಾಂತಳ್ಳಿಯAತಹ ಗ್ರಾಮೀಣ ಭಾಗದ ಮಕ್ಕಳು ಸ್ಥಳೀಯವಾಗಿಯೇ ಕಾಲೇಜು ಶಿಕ್ಷಣ ಪಡೆಯಬೇಕೆಂಬ ಮಹತ್ವಾಕಾಂಕ್ಷೆಯಿAದ ಕಾರ್ಯಾರಂಭ ಮಾಡಿದ ಸರ್ಕಾರಿ ಪದವಿ ಪೂರ್ವ ಕಾಲೇಜು ಇದೀಗ ಕಾಡುಪಾಲಾಗುತ್ತಿದ್ದು, ಅನೈತಿಕ ಚಟುವಟಿಕೆಗಳಿಗೆ ವಿದ್ಯಾಸಂಸ್ಥೆಯ ಆವರಣ ಬಳಕೆಯಾಗುತ್ತಿದೆ.
ತಾಲೂಕು ಕೇಂದ್ರದಿAದ ಸುಮಾರು ೧೦ ಕಿ.ಮೀ. ದೂರದಲ್ಲಿರುವ ಶಾಂತಳ್ಳಿ ಗ್ರಾಮದಲ್ಲಿ ಕುಗ್ರಾಮಗಳಿಂದ ಆಗಮಿಸುವ ವಿದ್ಯಾರ್ಥಿಗಳಿಗೆ ವಿದ್ಯಾದಾನ ಮಾಡುತ್ತಿದ್ದ ಸರ್ಕಾರಿ ಪದವಿ ಪೂರ್ವ ಕಾಲೇಜು ಸದ್ಯಕ್ಕೆ ಮುಚ್ಚಲ್ಪಟ್ಟಿದ್ದು, ಕಾಲೇಜು ಕಟ್ಟಡ ಗಿಡಗಂಟಿಗಳಿAದ ಆವೃತ್ತವಾಗಿ ಕಾಡು ಪಾಲಾಗುತ್ತಿದೆ.
ಕಳೆದ ೨೦೦೬ರಿಂದ ಶ್ರೀಕುಮಾರಲಿಂಗೇಶ್ವರ ಪೌಢಶಾಲೆಯ ಕೊಠಡಿಯಲ್ಲಿ ಪ್ರಾರಂಭಗೊAಡು ೧೭.೦೧.೨೦೧೨ರಲ್ಲಿ ನೂತನ ಕಟ್ಟಡಕ್ಕೆ ಸ್ಥಳಾಂತರಗೊAಡಿತು. ಆರ್.ಐ.ಡಿ.ಎಫ್. ಯೋಜನೆಯಡಿ ಪಾಲಾಗುತ್ತಿದೆ.
ಕಳೆದ ೨೦೦೬ರಿಂದ ಶ್ರೀಕುಮಾರಲಿಂಗೇಶ್ವರ ಪೌಢಶಾಲೆಯ ಕೊಠಡಿಯಲ್ಲಿ ಪ್ರಾರಂಭಗೊAಡು ೧೭.೦೧.೨೦೧೨ರಲ್ಲಿ ನೂತನ ಕಟ್ಟಡಕ್ಕೆ ಸ್ಥಳಾಂತರಗೊAಡಿತು. ಆರ್.ಐ.ಡಿ.ಎಫ್. ಯೋಜನೆಯಡಿ ನೀಡುತ್ತಾ ಬಂದಿದ್ದರು.
ಶಾAತಳ್ಳಿ ಶ್ರೀಕುಮಾರಲಿಂಗೇಶ್ವರ ದೇವಾಲಯಕ್ಕೆ ಸೇರಿದ ಸುಮಾರು ೧೦ ಎಕರೆ ಜಾಗವನ್ನು ಕಾಲೇಜಿಗೆ ಬಿಟ್ಟುಕೊಡಲಾಗಿದ್ದು, ಮಾಜಿ ವಿಧಾನ ಪರಿಷತ್ ಸದಸ್ಯ, ಸ್ಥಳೀಯರೇ ಆದ ಎಸ್.ಜಿ. ಮೇದಪ್ಪ
(ಮೊದಲ ಪುಟದಿಂದ) ಹಾಗೂ ಶಾಸಕ ಎಂ.ಪಿ.ಅಪ್ಪಚ್ಚು ರಂಜನ್ ಸೇರಿದಂತೆ ಗ್ರಾಮಸ್ಥರ ಸಹಕಾರದೊಂದಿಗೆ ಈ ಕಾಲೇಜು ಪ್ರಾರಂಭವಾಗಿತ್ತು.
ನಿಸರ್ಗದ ಸೊಬಗನ್ನು ಹೊದ್ದಿರುವ ಬೆಟ್ಟಶ್ರೇಣಿಗಳ ನಡುವಿನ ಪ್ರಶಾಂತ ವಾತಾವರಣದಲ್ಲಿ ನಿರ್ಮಾಣವಾಗಿ, ಈ ವ್ಯಾಪ್ತಿಯ ವಿದ್ಯಾರ್ಥಿಗಳ ವಿದ್ಯಾದಾಹವನ್ನು ನೀಗಿಸುತ್ತಿದ್ದ ಕಾಲೇಜಿಗೆ ತೋಳೂರುಶೆಟ್ಟಳ್ಳಿ, ಯಡೂರು ಸೇರಿದಂತೆ ಹೆಗ್ಗಡಮನೆ, ಬೆಟ್ಟದಳ್ಳಿ, ಹರಗ, ಕೊತ್ನಳ್ಳಿ,ಕುಡಿಗಾಣ, ಬೀದಳ್ಳಿ, ಕುಮಾರಳ್ಳಿ, ಬಾಚಳ್ಳಿ, ಕುಂದಳ್ಳಿ,ನಗರಳ್ಳಿ, ಅಭಿಮಠ ಬಾಚಳ್ಳಿ, ತಲ್ತರೆಶೆಟ್ಟಳ್ಳಿ ನೆರೆಯ ಹಾಸನ ಜಿಲ್ಲೆ ಮಾಗೇರಿ, ಬಾಣಗೇರಿ, ಕೂಡುರಸ್ತೆ ಗ್ರಾಮಗಳಿಂದಲೂ ವಿದ್ಯಾರ್ಥಿಗಳು ಆಗಮಿಸುತ್ತಿದ್ದರು.
೨೦೧೨ರಿಂದ ೧೭ರವರೆಗೆ ಉತ್ತಮವಾಗಿ ನಡೆಯುತ್ತಿದ್ದ ಕಾಲೇಜಿಗೆ ನಂತರದ ದಿನಗಳಲ್ಲಿ ವಿದ್ಯಾರ್ಥಿಗಳ ಸಂಖ್ಯೆ ಇಳಿಮುಖವಾಯಿತು. ಕೇವಲ ಕಲಾ ವಿಭಾಗ ಮಾತ್ರ ಹೊಂದಿದ್ದರಿAದ ವಿದ್ಯಾರ್ಥಿಗಳ ದಾಖಲಾತಿಯೂ ಕ್ಷೀಣಿಸಿತು. ಪರಿಣಾಮ ೨೦೧೭ರಲ್ಲಿ ಕಾಲೇಜು ಮುಚ್ಚಲ್ಪಟ್ಟಿತು. ತದನಂತರ ಕಾಲೇಜು ಆಡಳಿತವನ್ನು ಡಿಡಿಪಿಐಗೆ ಹಸ್ತಾಂತರಿಸಲಾಯಿತು.
ಇಲ್ಲಿAದ ಕಾಲೇಜು ಆವರಣ ಅನೈತಿಕ ಚಟುವಟಿಕೆಯ ತಾಣವಾಗಿ ಪರಿವರ್ತನೆಗೊಂಡಿತು. ಕಾಲೇಜು ಕಟ್ಟಡದಲ್ಲಿ ಗಿಡಗಂಟಿಗಳು ಬೆಳೆದು ಕಾಡುಪಾಲಾಗುತ್ತಿರುವ ಕೊಠಡಿಯೊಳಗೆ ಮದ್ಯ-ಮಾಂಸ ಸೇವನೆ, ಬೀಡಿ ಸಿಗರೇಟ್ ಸೇದುವುದು, ಅಡುಗೆ ಮಾಡುವುದು ಸೇರಿದಂತೆ ಕಾಲೇಜು ಆವರಣದ ಸುತ್ತಮುತ್ತ ಮದ್ಯದ ಬಾಟಲಿ, ಟೆಟ್ರಾ ಪ್ಯಾಕೆಟ್ಗಳನ್ನು ಎಸೆಯುವ ಕೃತ್ಯ ನಡೆಯುತ್ತಿದೆ.
ಶಾಂತಳ್ಳಿ ಮುಖ್ಯರಸ್ತೆಗೆ ಹೊಂದಿಕೊAಡAತೆ ಇರುವ ಈ ಕಾಲೇಜು ಆವರಣದಲ್ಲಿ ಪ್ರವಾಸಿಗರ ಮೋಜು ಮಸ್ತಿಯೂ ನಡೆಯುತ್ತಿದ್ದು, ಸಂಜೆ ವೇಳೆಗೆ ಆಗಮಿಸುವ ಮಂದಿ ಸ್ವೇಚ್ಛಾಚಾರದಲ್ಲಿ ತೊಡಗುತ್ತಿದ್ದಾರೆ. ಒಟ್ಟಾರೆ ಕಾಲೇಜು ಅವರಣ ಅನೈತಿಕ ಚಟುವಟಿಕೆಯ ತಾಣವಾಗಿ ಮಾರ್ಪಟ್ಟಿದ್ದು, ವಿದ್ಯಾಪ್ರೇಮಿಗಳ ಆಶಯಗಳು ನುಚ್ಚುನೂರಾಗಿವೆ.
ತಕ್ಷಣಕ್ಕೆ ಕಾಡುಬೆಳೆದಿರುವ ಕಾಲೇಜು ಕಟ್ಟಡವನ್ನು ಸಂರಕ್ಷಿಸುವ ಕಾರ್ಯ ಆಗಬೇಕಿದೆ. ಕಾಲೇಜು ಆವರಣದ ಸುತ್ತಲೂ ಬೇಲಿ ನಿರ್ಮಿಸಿ, ಅಕ್ರಮ ಚಟುವಟಿಕೆಗೆ ಕಡಿವಾಣ ಹಾಕಬೇಕಿದೆ. ಈ ಬಗ್ಗೆ ಸ್ಥಳೀಯರೂ ಗಮನಹರಿಸಬೇಕಿದ್ದು, ತಮ್ಮ ಊರಿನಲ್ಲಿರುವ ಕಾಲೇಜು ಕಟ್ಟಡವನ್ನು ಇತರ ಚಟುವಟಿಕೆಗಳಿಗೆ ಬಳಕೆಯಾಗದಂತೆ ನೋಡಿಕೊಳ್ಳಬೇಕಿದೆ. - ವಿಜಯ್ ಹಾನಗಲ್