ವೀರಾಜಪೇಟೆ, ಏ. ೧೭: ಅಕ್ರಮವಾಗಿ ಕೇರಳ ರಾಜ್ಯದ ಲಾಟರಿ ಟಿಕೆಟ್‌ಗಳನ್ನು ಮಾರಾಟಕ್ಕೆ ಯತ್ನಿಸಿದ ಇಬ್ಬರನ್ನು ಪೊಲೀಸರು ಬಂಧಿಸಿದ ಘಟನೆ ಮೊಗರಗಲ್ಲಿಯಲ್ಲಿ ನಡೆದಿದೆ. ನೆಹರುನಗರ ನಿವಾಸಿ ಗಫೂರ್ (೬೫) ಮತ್ತು ಪೆರುಂಬಾಡಿ ಗ್ರಾಮದ ನಿವಾಸಿ ಸುಕುಮಾರನ್ ವಿ.ಎ. (೬೦) ಬಂಧಿತ ಆರೋಪಿಗಳು. ಲಾಟರಿ ಮಾರಾಟಗಾರ ಗಫೂರ್ ನಗರದ ಮೊಗರಗಲ್ಲಿ ರಸ್ತೆಯಲ್ಲಿ ಲಾಟರಿ ಟಿಕೆಟ್ ಮಾರಾಟ ಮಾಡುತ್ತಿದ್ದ. ಈ ಸಂದÀರ್ಭ ಲಾಟರಿ ಖರೀದಿಸಲು ಸುಕುಮಾರನ್ ತಮ್ಮ ವಾಹನ ಮಾರುತಿ ಓಮ್ನಿ (ಕೆಎ ೦೧ಜೆಡ್ ೪೮೯೪)ಯಲ್ಲಿ ಆಗಮಿಸಿ ಲಾಟರಿ ಟಿಕೆಟ್ ಖರೀದಿಸಲು ಮುಂದಾದ ವೇಳೆ ಪೊಲೀಸರು ದಾಳಿ ಮಾಡಿದ್ದಾರೆ. ದಾಳಿ ವೇಳೆ ೪೮೨೦ ರೂ. ನಗದು ಸೇರಿದಂತೆ, ೪೦ ರೂ. ಮುಖಬೆಲೆಯ ೧೫೭ ಕೇರಳ ರಾಜ್ಯದ ಲಾಟರಿ ಟಿಕೆಟ್‌ಗಳು ಹಾಗೂ ೨೫೦ ರೂ. ಮುಖಬೆಲೆಯ ೩ ಬಂಪರ್ ಲಾಟರಿ ಟಿಕೆಟ್‌ಗಳನ್ನು ಹಾಗೂ ಕೃತ್ಯಕ್ಕೆ ಬಳಸಿದ ವಾಹನವನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. - ಕೆ.ಕೆ.ಎಸ್.