ಸಿದ್ದಾಪುರ, ಏ. ೧೬: ನಿವೇಶನ ರಹಿತರಿಗೆ ನಿವೇಶನ ಹಾಗೂ ಸೂರು ಕಲ್ಪಿಸಿಕೊಡಬೇಕೆಂದು ಒತ್ತಾಯಿಸಿ ಸಿಪಿಐ(ಎಂ) ಪಕ್ಷದ ಗ್ರಾಮ ಸಮಿತಿ ವತಿಯಿಂದ ಸಿದ್ದಾಪುರ ಗ್ರಾ.ಪಂ. ಕಚೇರಿ ಎದುರು ಪ್ರತಿಭಟನೆ ನಡೆಯಿತು.
ಪ್ರತಿಭಟನಾ ಸಭೆಯನ್ನು ಉದ್ದೇಶಿಸಿ ಸಿಪಿಐ(ಎಂ) ಪಕ್ಷದ ಜಿಲ್ಲಾ ಮುಖಂಡ ಡಾ. ಐ.ಆರ್. ದುರ್ಗಾಪ್ರಸಾದ್ ಮಾತನಾಡಿ ಸಿದ್ದಾಪುರ ಗ್ರಾ.ಪಂ. ವ್ಯಾಪ್ತಿಯ ಕಾಫಿ ತೋಟಗಳಲ್ಲಿ ಸಾವಿರಾರು ಮಂದಿ ತೋಟ ಕಾರ್ಮಿಕರು ತೋಟದ ಲೈನ್ ಮನೆಗಳಲ್ಲಿ ತಲತಲಾಂತರಗಳಿAದ ವಾಸ ಮಾಡಿಕೊಂಡಿದ್ದಾರೆ. ಇವರಿಗೆ ಶಾಶ್ವತ ಸೂರು ಒದಗಿಸಿ ಕೊಡುವಲ್ಲಿ ಸಿದ್ದಾಪುರ, ಏ. ೧೬: ನಿವೇಶನ ರಹಿತರಿಗೆ ನಿವೇಶನ ಹಾಗೂ ಸೂರು ಕಲ್ಪಿಸಿಕೊಡಬೇಕೆಂದು ಒತ್ತಾಯಿಸಿ ಸಿಪಿಐ(ಎಂ) ಪಕ್ಷದ ಗ್ರಾಮ ಸಮಿತಿ ವತಿಯಿಂದ ಸಿದ್ದಾಪುರ ಗ್ರಾ.ಪಂ. ಕಚೇರಿ ಎದುರು ಪ್ರತಿಭಟನೆ ನಡೆಯಿತು.
ಪ್ರತಿಭಟನಾ ಸಭೆಯನ್ನು ಉದ್ದೇಶಿಸಿ ಸಿಪಿಐ(ಎಂ) ಪಕ್ಷದ ಜಿಲ್ಲಾ ಮುಖಂಡ ಡಾ. ಐ.ಆರ್. ದುರ್ಗಾಪ್ರಸಾದ್ ಮಾತನಾಡಿ ಸಿದ್ದಾಪುರ ಗ್ರಾ.ಪಂ. ವ್ಯಾಪ್ತಿಯ ಕಾಫಿ ತೋಟಗಳಲ್ಲಿ ಸಾವಿರಾರು ಮಂದಿ ತೋಟ ಕಾರ್ಮಿಕರು ತೋಟದ ಲೈನ್ ಮನೆಗಳಲ್ಲಿ ತಲತಲಾಂತರಗಳಿAದ ವಾಸ ಮಾಡಿಕೊಂಡಿದ್ದಾರೆ. ಇವರಿಗೆ ಶಾಶ್ವತ ಸೂರು ಒದಗಿಸಿ ಕೊಡುವಲ್ಲಿ ರಹಿತರಿಗೆ ನಿವೇಶನ ನೀಡಬೇಕೆಂದು ಜಿಲ್ಲಾಡಳಿತವನ್ನು ಆಗ್ರಹಿಸಿದರು.
ಪ್ರತಿಭಟನೆಯಲ್ಲಿ ಕಾರ್ಮಿಕ ಮುಖಂಡರಾದ ಎನ್.ಡಿ ಕುಟ್ಟಪ್ಪ, ಡಿ.ವೈ.ಎಫ್.ಐ ಮುಖಂಡ ಎನ್.ಕೆ. ಅನಿಲ್, ಪಕ್ಷದ ಪದಾಧಿಕಾರಿಗಳಾದ ಸಿ.ಯು. ಮುಸ್ತಫಾ, ಅಬ್ದುಲ್ ರೆಹಮಾನ್ ಇನ್ನಿತರರು ಹಾಜರಿದ್ದರು. ನಂತರ ಪ್ರತಿಭಟನಾಕಾರರು ಸಿದ್ದಾಪುರ ಗ್ರಾ.ಪಂ. ಕಾರ್ಯದರ್ಶಿ ಮೋಹನ್ ಅವರಿಗೆ ಮನವಿ ಪತ್ರ ಸಲ್ಲಿಸಿದರು.