ಕ್ಷೇತ್ರ ತಂತ್ರಿಯವರ ನೇತೃತ್ವದಲ್ಲಿ ತಲಕಾವೇರಿಯಲ್ಲಿಯೂ ದೋಷ ಪರಿಹಾರಾರ್ಥ ವಿವಿಧ ಹೋಮ-ಹವನ, ಪೂಜೆ ,ಪ್ರಾರ್ಥನೆ ನೆರವೇರಿದವು. ಭಾಗಮಂಡಲ ಸುತ್ತಮುತ್ತಲಿನ ಗ್ರ್ರಾಮಗಳಾದ ತಾವೂರು, ಚೇರಂಗಾಲ, ಕೋರಂಗಾಲ ಗ್ರಾಮಗಳಲ್ಲಿನ ದೈವಗಳಿಗೂ ಪೂಜಾದಿಗಳನ್ನು ನೆರವೇರಿಸಲಾಯಿತು.
ಇದಕ್ಕೂ ಮುನ್ನ ಸಮಿತಿಯ ಕೆಲವರು ಮಂಗಳೂರು ಸನಿಹದ ಮರಕಡ ಶ್ರೀ ಗುರು ಪರಾಶಕ್ತಿ ಮಠದ ಶ್ರೀ ನರೇಂದ್ರನಾಥ ಯೋಗೇಶ್ವರೇಶ್ವರ ಸ್ವಾಮೀಜಿ (ಈಗ ದಿವಂಗತರು) ಅವರ ಬಳಿ ತೆರಳಿ ಮಾರ್ಗದರ್ಶನ ಪಡೆದಿದ್ದೆವು. ಆ ಸಂದರ್ಭ ಅಲ್ಲಿಗೆ ದಿಢೀರಾಗಿ ಬಂದ ಓರ್ವ ಅತ್ಯಂತ ದಿವ್ಯ ಕಳೆಯಿಂದ ಕೂಡಿದ್ದ ಭಕ್ತೆ ಯುವತಿಯೊಬ್ಬಳಿಗೆ ಕಾವೇರಿ ಮಾತೆಯ ದರ್ಶನ ಬಂದAತಾಗಿ ನೃತ್ಯ ಮಾಡುತ್ತ ಏನೆಲ್ಲ ದೋಷಗಳು ತಲಕಾವೇರಿ ಕ್ಷೇತ್ರದಲ್ಲಿ ಘಟಿಸಿ ಹೋಗಿವೆ. ಅದಕ್ಕೆ ಏನೆಲ್ಲ ಪರಿಹಾರ ಮಾಡಬೇಕು ಎನ್ನುವ ಮಾರ್ಗದರ್ಶನ ಆಕೆಯಿಂದÀ ದೊರಕಿದುದು ಮತ್ತೊಂದು ಆಶ್ಚರ್ಯಕರವಾದ ಘಟನೆಯಾಗಿತ್ತು. ಅಷ್ಟಮಂಗಲ ಪ್ರಶ್ನೆಯಲ್ಲಿ ಕಂಡುಬAದುದೇ ಅಲ್ಲಿ ಆ ಯುವತಿ ಮೂಲಕ ಪುನರುಚ್ಚಾರವಾಯಿತು. ಮರಕಡ ಸ್ವಾಮೀಜಿ ಅವರ ಪ್ರಾರ್ಥನೆ ಮೇರೆಗೆ ಯುವತಿ ಶಾಂತಳಾದಳು.ಮತ್ತೆ ನಾವು ಆಕೆಯನ್ನು ಮಾತನಾಡಿಸೋಣ ಎಂದು ಪ್ರಯತ್ನಿಸಿದಾಗ ನಮಗೆ ಆಕೆ ಕಾಣ ಸಿಗಲೇ ಇಲ್ಲ.
ಈ ಪರಿಹಾರ ಕಾರ್ಯದ ಬಳಿಕ ಜೀರ್ಣೋದ್ಧಾರ ಸಮಿತಿಯಿಂದ ರಾಜ್ಯದ ಅನೇಕ ಮಠಾಧಿಪತಿಗಳನ್ನು, ಸಾಧು ಸಂತರನ್ನು ಭೇಟಿಯಾಗಿ ಮುಂದಿನ ಕಾರ್ಯ ಕೈಗೊಳ್ಳಲು ಆಶೀರ್ವಾದ ಪಡೆಯಲಾಯಿತು. ಅಲ್ಲದೆ, ಬಳಿಕ ಜೀರ್ಣೋದ್ಧಾರ ಕಾರ್ಯಕ್ಕೆ ಚಾಲನೆ ನೀಡಲಾಯಿತು. ಆದರೆ, ಜೀರ್ಣೋದ್ಧಾರ ನಡೆಸಲು ಕೆಲವು ಕಾನೂನಾತ್ಮಕ ತೊಡಕಿತ್ತು. ತಲಕಾವೇರಿ ಕ್ಷೇತ್ರವನ್ನು ಮೂಲಸ್ವರೂಪದಲ್ಲಿರುವಂತೆಯೇ ಮುಂದುವರಿಸಿ ಯಾವದೇ ಕಾಮಗಾರಿ ನಡೆÀಸದಂತೆ ಈ ಹಿಂದೆ ಕಾವೇರಿ ಮೂಲಸ್ವರೂಪ ರಕ್ಷಣಾ ವೇದಿಕೆಯಿಂದ ನ್ಯಾಯಾಲಯದಲ್ಲಿ ತಡೆಯಾಜ್ಞೆಯಿತ್ತು. ಕಾಮಗಾರಿ ಆರಂಭಕ್ಕೆ ಮುನ್ನ ಜೀರ್ಣೋದ್ಧಾರ ಸಮಿತಿ ಪರವಾಗಿ ಮಾತಂಡ ಮೊಣ್ಣಪ್ಪ ಅವರು ಎಂ.ಸಿ.ನಾಣಯ್ಯ ಅವರ ನೇತೃತ್ವದಲ್ಲಿ ಸಭೆ ನಡೆಸಿ ಮೂಲ ಸ್ವರೂಪಕ್ಕೆ ಧಕ್ಕೆ ಬಾರದ ರೀತಿ ಕಾರ್ಯಗಳನ್ನು ನಡೆಸಲಾಗುತ್ತದೆ ಎಂದು ಭರವಸೆಯಿತ್ತರು. ಆ ಭರವಸೆ ಮೇರೆಗೆ ಮೂಲಸ್ವರೂಪ ರಕ್ಷಣಾ ವೇದಿಕೆಯ ಪ್ರಮುಖರುಗಳಾದ ಕೊಕ್ಕಲೇರ ಕಾರ್ಯಪ್ಪ ಹಾಗೂ ಉಳ್ಳಿಯಡ ಎಂ. ಪೂವಯ್ಯ ಇವರುಗಳು ತಡೆಯಾಜ್ಞೆಯನ್ನು ಹಿಂದಕ್ಕೆ ಪಡೆದು ಸಹಕರಿಸಿದರು. ಆದರೆ, ಕೆಲವೇ ಸಮಯದ ಬಳಿಕ ಜೀರ್ಣೋದ್ಧಾರಕ್ಕೆ ಅಧಿಕ ಹಣದ ಅವಶ್ಯಕತೆ ಮನಗಂಡು ಸಮಿತಿಯು ಕೊಡಗು ಏಕೀಕರಣದ ಸಹಯೋಗದೊಂದಿಗೆ ಆಗಿನ ಜಿಲ್ಲಾ ಸಚಿವರುಗಳಾಗಿದ್ದ ಸುಮಾ ವಸಂತ್, ಎಂ.ಎA. ನಾಣಯ್ಯ, ಟಿ.ಜಾನ್ ಹಾಗೂ ಮಾಜಿ ಸಚಿವ ಎಂ.ಸಿ.ನಾಣಯ್ಯ ಇವರುಗಳ ನೇÃತೃತ್ವದಲ್ಲಿ ಮುಖ್ಯಮಂತ್ರಿಯಾಗಿದ್ದ ಎಸ್. ಎಂ. ಕೃಷ್ಣ ಅವರನ್ನು ಭೇಟಿಯಾಗಿ ವಿನಂತಿಸಿದಾಗ ಸರಕಾರವೇ ಕಾವೇರಿ ನಿಗಮದ ಮೂಲಕ ಜೀರ್ಣೋದ್ಧಾರ ಕಾರ್ಯವನ್ನು ಕೈಗೆತ್ತಿಕೊಂಡಿತು. ಮೊಣ್ಣಪ್ಪ ಅವರ ನೇತೃತ್ವದ ಸಾರ್ವಜನಿಕ ಜೀರ್ಣೊದ್ಧಾರ ಸಮಿತಿ ವಿಸರ್ಜನೆಗೊಂಡಿತು. ಬಳಿಕ ಸರಕಾರದ ಪರವಾಗಿ ಕಾವೇರಿ ನೀರಾವರಿ ನಿಗಮದಿಂದಲೇ ಜೀರ್ಣೋದ್ಧಾರ ನಡೆಯಿತು.
ಹಳೆಯ ಶಿವಲಿಂಗವನ್ನು ಭೂಗತ ಮಾಡಲಾಗಿತ್ತು
ಪ್ರಾರಂಭಿಕವಾಗಿ ತಲಕಾವೇರಿಯ ಜೀರ್ಣೋದ್ಧಾರ ನಡೆಯಿತು. ಕಾವೇರಿ ನೀರಾವರಿ ನಿಗಮದ ವ್ಯವಸ್ಥಾಪಕ ನಿರ್ದೇಶಕ ರಾಗಿದ್ದ ತಿಮ್ಮೇಗೌಡ, ರಾಜ್ಯ ಸರಕಾರದ ಮುಖ್ಯ ವಾಸ್ತು ಶಿಲ್ಪಜ್ಞರಾಗಿದ್ದ ಉದಯ ಹಾಗೂ ಜೀರ್ಣೋದ್ಧಾರ ಕಾಮಗಾರಿಯ ಉಸ್ತುವಾರಿ ಯನ್ನು ನಿಗಮದ ಪರವಾಗಿ ವಹಿಸಿಕೊಂಡಿದ್ದ ರಾಜ್ಯ ಲೋಕೋಪಯೋಗಿ ಇಲಾಖಾ ನಿವೃತ್ತ ಮುಖ್ಯ ಅಭಿಯಂತರ ಹಾಗೂ ಮೂಲತ: ಕೊಡಗಿನವರಾದ ಟಿ.ಡಿ. ಮನಮೋಹನ್ ಇವರುಗಳ ಮಾರ್ಗದರ್ಶನದಲ್ಲಿ ತಲಕಾವೇರಿ ಕ್ಷೇತ್ರದ ಜೀರ್ಣೋದ್ಧಾರ ಕಾರ್ಯ ನಡೆದಿತ್ತು. ಬಳಿಕ ತಾ.೧೪-೫-೨೦೦೬ ರಿಂದ ತಾ.೨೦-೫-೦೬ ರವರೆಗೆ ತಲಕಾವೇರಿಯಲ್ಲಿ ಶ್ರೀ ಮಹಾಗಣಪತಿ, ಶ್ರೀ ಅಗಸ್ತೆö್ಯÃಶ್ವರ, ಶ್ರೀ ಶಾಸ್ತಾವು ದೇವರುಗಳ ಪುನರ್ ಪ್ರತಿಷ್ಠ್ಠಾಪನೆಯನ್ನು ಶ್ರೀ ನೀಲೇಶ್ವರ ಪದ್ಮನಾಭ ತಂತ್ರಿಯವರು ಜ್ಯೋತಿಷ್ಕ ರೊಂದಿಗೆ ಸಮಾಲೋಚಿಸಿ ನಿರ್ಧಾರÀ ಕೈಗೊಂಡರು. ಪುನರ್ ಪ್ರತಿಷ್ಠಾಪನೆಗೋಸ್ಕರ ಈ ಹಿಂದೆ ವಿಸರ್ಜಿತ ಜೀರ್ಣೋದ್ಧಾರ ಸಮಿತಿಯ ಅಧ್ಯಕ್ಷರಾಗಿದ್ದ ಮಾತಂಡ ಮೊಣ್ಣಪ್ಪ ಅವರ ನೇತೃತ್ವದಲ್ಲಿಯೇ ನೂತನ ಪುನರ್ ಪ್ರತಿಷ್ಠ್ಠಾಪನಾ ಸಮಿತಿಯನ್ನು ಸರಕಾರದ ಪರವಾಗಿ ಮುಜರಾಯಿ ಸಚಿವೆ ಸುಮಾ ವಸಂತ್ ನೇಮಿಸಿದರು. ನಾನೂ ಆ ಸಮಿತಿಯ ಕಾರ್ಯದರ್ಶಿಯಾಗಿದ್ದೆ. ಸುರೇಶ್ ಚÀಂಗಪ್ಪ ಅವರು ಖಚಾಂಚಿಯಾಗಿದ್ದು ಇತರ ಸದಸ್ಯರುಗಳ ಜಿಲ್ಲಾ ಮಟ್ಟದ ಸಮಿತಿ ರಚಿಸಲಾಯಿತು. ನಾವು ತಲಕಾವೇರಿಯಲ್ಲಿ ಪುನರ್ ಪ್ರತಿಷ್ಠಾಪನೆಗೆ ವ್ಯವಸ್ಥೆ ಕೈಗೊಳ್ಳುತ್ತಿದ್ದಾಗ ಪ್ರಮುಖರುಗಳಾದ ಕೊಕ್ಕಲೇರ ಕಾರ್ಯಪ್ಪ ಹಾಗೂ ಉಳ್ಳಿಯಡ ಎಂ. ಪೂವಯ್ಯ ಇವರುಗಳು ತಡೆಯಾಜ್ಞೆಯನ್ನು ಹಿಂದಕ್ಕೆ ಪಡೆದು ಸಹಕರಿಸಿದರು. ಆದರೆ, ಕೆಲವೇ ಸಮಯದ ಬಳಿಕ ಜೀರ್ಣೋದ್ಧಾರಕ್ಕೆ ಅಧಿಕ ಹಣದ ಅವಶ್ಯಕತೆ ಮನಗಂಡು ಸಮಿತಿಯು ಕೊಡಗು ಏಕೀಕರಣದ ಸಹಯೋಗದೊಂದಿಗೆ ಆಗಿನ ಜಿಲ್ಲಾ ಸಚಿವರುಗಳಾಗಿದ್ದ ಸುಮಾ ವಸಂತ್, ಎಂ.ಎA. ನಾಣಯ್ಯ, ಟಿ.ಜಾನ್ ಹಾಗೂ ಮಾಜಿ ಸಚಿವ ಎಂ.ಸಿ.ನಾಣಯ್ಯ ಇವರುಗಳ ನೇÃತೃತ್ವದಲ್ಲಿ ಮುಖ್ಯಮಂತ್ರಿಯಾಗಿದ್ದ ಎಸ್. ಎಂ. ಕೃಷ್ಣ ಅವರನ್ನು ಭೇಟಿಯಾಗಿ ವಿನಂತಿಸಿದಾಗ ಸರಕಾರವೇ ಕಾವೇರಿ ನಿಗಮದ ಮೂಲಕ ಜೀರ್ಣೋದ್ಧಾರ ಕಾರ್ಯವನ್ನು ಕೈಗೆತ್ತಿಕೊಂಡಿತು. ಮೊಣ್ಣಪ್ಪ ಅವರ ನೇತೃತ್ವದ ಸಾರ್ವಜನಿಕ ಜೀರ್ಣೊದ್ಧಾರ ಸಮಿತಿ ವಿಸರ್ಜನೆಗೊಂಡಿತು. ಬಳಿಕ ಸರಕಾರದ ಪರವಾಗಿ ಕಾವೇರಿ ನೀರಾವರಿ ನಿಗಮದಿಂದಲೇ ಜೀರ್ಣೋದ್ಧಾರ ನಡೆಯಿತು.
ಹಳೆಯ ಶಿವಲಿಂಗವನ್ನು ಭೂಗತ ಮಾಡಲಾಗಿತ್ತು
ಪ್ರಾರಂಭಿಕವಾಗಿ ತಲಕಾವೇರಿಯ ಜೀರ್ಣೋದ್ಧಾರ ನಡೆಯಿತು. ಕಾವೇರಿ ನೀರಾವರಿ ನಿಗಮದ ವ್ಯವಸ್ಥಾಪಕ ನಿರ್ದೇಶಕ ರಾಗಿದ್ದ ತಿಮ್ಮೇಗೌಡ, ರಾಜ್ಯ ಸರಕಾರದ ಮುಖ್ಯ ವಾಸ್ತು ಶಿಲ್ಪಜ್ಞರಾಗಿದ್ದ ಉದಯ ಹಾಗೂ ಜೀರ್ಣೋದ್ಧಾರ ಕಾಮಗಾರಿಯ ಉಸ್ತುವಾರಿ ಯನ್ನು ನಿಗಮದ ಪರವಾಗಿ ವಹಿಸಿಕೊಂಡಿದ್ದ ರಾಜ್ಯ ಲೋಕೋಪಯೋಗಿ ಇಲಾಖಾ ನಿವೃತ್ತ ಮುಖ್ಯ ಅಭಿಯಂತರ ಹಾಗೂ ಮೂಲತ: ಕೊಡಗಿನವರಾದ ಟಿ.ಡಿ. ಮನಮೋಹನ್ ಇವರುಗಳ ಮಾರ್ಗದರ್ಶನದಲ್ಲಿ ತಲಕಾವೇರಿ ಕ್ಷೇತ್ರದ ಜೀರ್ಣೋದ್ಧಾರ ಕಾರ್ಯ ನಡೆದಿತ್ತು. ಬಳಿಕ ತಾ.೧೪-೫-೨೦೦೬ ರಿಂದ ತಾ.೨೦-೫-೦೬ ರವರೆಗೆ ತಲಕಾವೇರಿಯಲ್ಲಿ ಶ್ರೀ ಮಹಾಗಣಪತಿ, ಶ್ರೀ ಅಗಸ್ತೆö್ಯÃಶ್ವರ, ಶ್ರೀ ಶಾಸ್ತಾವು ದೇವರುಗಳ ಪುನರ್ ಪ್ರತಿಷ್ಠ್ಠಾಪನೆಯನ್ನು ಶ್ರೀ ನೀಲೇಶ್ವರ ಪದ್ಮನಾಭ ತಂತ್ರಿಯವರು ಜ್ಯೋತಿಷ್ಕ ರೊಂದಿಗೆ ಸಮಾಲೋಚಿಸಿ ನಿರ್ಧಾರÀ ಕೈಗೊಂಡರು. ಪುನರ್ ಪ್ರತಿಷ್ಠಾಪನೆಗೋಸ್ಕರ ಈ ಹಿಂದೆ ವಿಸರ್ಜಿತ ಜೀರ್ಣೋದ್ಧಾರ ಸಮಿತಿಯ ಅಧ್ಯಕ್ಷರಾಗಿದ್ದ ಮಾತಂಡ ಮೊಣ್ಣಪ್ಪ ಅವರ ನೇತೃತ್ವದಲ್ಲಿಯೇ ನೂತನ ಪುನರ್ ಪ್ರತಿಷ್ಠ್ಠಾಪನಾ ಸಮಿತಿಯನ್ನು ಸರಕಾರದ ಪರವಾಗಿ ಮುಜರಾಯಿ ಸಚಿವೆ ಸುಮಾ ವಸಂತ್ ನೇಮಿಸಿದರು. ನಾನೂ ಆ ಸಮಿತಿಯ ಕಾರ್ಯದರ್ಶಿಯಾಗಿದ್ದೆ. ಸುರೇಶ್ ಚÀಂಗಪ್ಪ ಅವರು ಖಚಾಂಚಿಯಾಗಿದ್ದು ಇತರ ಸದಸ್ಯರುಗಳ ಜಿಲ್ಲಾ ಮಟ್ಟದ ಸಮಿತಿ ರಚಿಸಲಾಯಿತು. ನಾವು ತಲಕಾವೇರಿಯಲ್ಲಿ ಪುನರ್ ಪ್ರತಿಷ್ಠಾಪನೆಗೆ ವ್ಯವಸ್ಥೆ ಕೈಗೊಳ್ಳುತ್ತಿದ್ದಾಗ ತಂತ್ರಿಯವರ ನೇತೃತ್ವದಲ್ಲಿ ಪುನರ್ ಪ್ರತಿಷ್ಠಾಪನಾ ಸಮಿತಿಯಿಂದ ನೂತನ ಶಿವಲಿಂಗದ ಪ್ರತಿಷ್ಠ್ಠಾಪನೆ ನಡೆಯಿತು. ಶ್ರೀ ಮಹಾಗಣಪತಿಯ ಪ್ರತಿಷ್ಠಾಪನೆಯನ್ನೂ ನೆÀರವೇರಿಸಲಾಯಿತು.ಜೊತೆಗೆ ಮಹಾಗಣಪತಿ ದೇಗುಲದಲ್ಲಿ ಈ ಹಿಂದೆ ಜೊತೆಗೆ ತಪ್ಪಾಗಿ ಇರಿಸಲಾಗಿದ್ದ ಶಾಸ್ತಾ ದೈವದ ಶಿಲೆಯನ್ನು ಬೇರ್ಪಡಿಸಿ ಪ್ರತ್ಯೇಕ ಕಿರು ದೇಗುಲವನ್ನು ನಿರ್ಮಿಸಿದ್ದು ಅಲ್ಲಿ ಶಾಸ್ತಾ ದೈವದ ಪ್ರತಿಷ್ಠಾಪನೆ ನಡೆಯಿತು. ತಲಕಾವೇರಿಯಲ್ಲಿ ಎಲ್ಲ ದೇವತೆಗಳ ಪುನರ್ ಪ್ರತಿಷ್ಠಾಪನೆ ಬಳಿಕ ಬ್ರಹ್ಮ ಕುಂಡಿಕೆಯಲ್ಲಿ ಶುದ್ಧ ಕಲಶವನ್ನು ತಂತ್ರಿ ಯವರು ನೆರವೇರಿಸಿದರು. ಮಂಡೀರ ದೇವಿ ಪೂಣಚ್ಚ ಕುಟುಂಬದವರು ಆ ಸಂದರ್ಭ ಸಹಕರಿಸಿದರು.
ಭಾಗಮಂಡಲದಲ್ಲಿ ಪ್ರತಿಷ್ಠಾಪನೆ
ಇದಾದ ಬಳಿಕ ರಾಜ್ಯ ಸರಕಾರದ ಪರವಾಗಿ ಕಾವೇರಿ ನೀರಾವರಿ ಅಭಿವೃದ್ಧಿ ನಿಗಮದಿಂದ ಭಾಗಮಂಡಲದಲ್ಲಿ ಜೀರ್ಣೋದ್ಧಾರ ಕಾರ್ಯ ಮುಂದುವರಿ ಯಿತು. ೨೦೦೯ ರ ಮಾರ್ಚ್ ವೇಳೆಗೆ ಅಲ್ಲಿನ ಜೀರ್ಣೋದ್ಧಾರ ಕಾರ್ಯ ಮುಕ್ತಾಯ ಗೊಂಡಿತು. ಈ ಹಿನ್ನೆಲೆಯಲ್ಲಿ ತಾ. ೨-೪-೨೦೦೯ ರಿಂದ ತಾ. ೧೪-೪-೨೦೦೯ ರ ವರೆಗೆ ಭಾಗಮಂಡಲದಲ್ಲಿ ಪುನರ್ ಪ್ರತಿಷ್ಠಾಪನಾ ಧಾರ್ಮಿಕ ವಿಧಿ ವಿಧಾನಗಳನ್ನು ಈ ಹಿಂದೆ ತಲಕಾವೇರಿಯಲ್ಲಿ ಪುನರ್ ಪ್ರತಿಷ್ಠಾಪನೆ ನೆರವೇರಿಸಿದ್ದ ನಮ್ಮ ಸಮಿತಿಯಿಂದಲೇ ಹಮ್ಮಿಕೊಳ್ಳಲಾಗಿತ್ತು. ಅಷ್ಟು ದಿನಗಳ ಕಾಲ ಅವಶ್ಯಕತೆ ಏಕಿತ್ತೆಂದರೆ,ವಿವಿಧ ಮುಹೂರ್ತಗಳಲ್ಲಿ ನಾಲ್ಕು ಅಧಿದೇವತೆಗಳನ್ನುö ಪ್ರತಿಷ್ಠ್ಠಾಪಿಸಬೇಕಿತ್ತು. ಶ್ರೀ ಭಗಂಡೇಶ್ವರ, ಶ್ರೀ ಸುಬ್ರಹ್ಮಣ್ಯ, ಶ್ರೀ ಮಹಾವಿಷ್ಣು ಹಾಗೂ ಶ್ರೀ ಮಹಾಗಣಪತಿ ದೇವರ ಪ್ರತಿಷ್ಠಾಪನಾ ಕಾರ್ಯವನ್ನು ಹಮ್ಮಿಕೊಳ್ಳಲಾಗಿತ್ತು. ನೂರಾರು ವರ್ಷಗಳಿಂದ ಯಾವದೇ ಪುನರ್ ಪ್ರತಿಷ್ಠಾಪನೆಗಳಾಗಲೀ, ಅಷ್ಟ ಬಂಧ, ಬ್ರಹ್ಮ ಕಲಶಗಳಾಗಲೀ, ಧಾರ್ಮಿಕ ಹೋಮ ಹವನಾದಿಗಳಾಗಲೀ ಭಾಗಮಂಡಲದಲ್ಲಿ ನಡೆದಿರಲಿಲ್ಲ. ಆದರೆ, ಈ ಕಾರ್ಯಕ್ಕೂ ಅನೇಕ ವಿಘ್ನಗಳೂ ತಲೆದೋರಿತ್ತು. ತಂತ್ರಿಗಳೇ ಈ ಕುರಿತು ಹೀಗೆ ಹೇಳಿದ್ದರು:”ನಾಲ್ಕು ದೇವತೆಗಳ ಪ್ರತಿಷ್ಠಾಪನೆಗೆ ಒಟ್ಟಿಗೇ ಮುಹೂರ್ತ ಸಿಗುವುದು ದುರ್ಲಭ. ಆದರೆ ಈಗ ಸಿಕ್ಕಿದೆ.ಹಾಗೆಂದು, ಈ ಕಾರ್ಯ ನಡೆಸುವ ಸಮಿತಿಯವರಿಗೆ ಗುರುಬಲದ ದೋಷವುಂಟಾಗುತ್ತದೆ. ಇದರಿಂದಾಗಿ ತುಂಬ ತೊಂದರೆಯುAಟಾಗುತ್ತದೆ.
(ಮುಂದುವರಿಯುವುದು)
- ಜಿ. ರಾಜೇಂದ್ರ, ಮಡಿಕೇರಿ.