ಪಾಲಿಬೆಟ್ಟ, ಏ. ೧೬: ಪಾಲಿಬೆಟ್ಟ ಗ್ರಾಮದಲ್ಲಿರುವ ಪೈಸಾರಿ ಜಾಗವೊಂದರಲ್ಲಿ ಹತ್ತಕ್ಕೂ ಹೆಚ್ಚು ಕುಟುಂಬಗಳು ದಿಢೀರ್ ಪ್ಲಾಸ್ಟಿಕ್ ಗುಡಿಸಲುಗಳನ್ನು ಕಟ್ಟಿ ವಾಸ ಮಾಡಲು ಮುಂದಾಗಿದ್ದಾರೆ.
ಹಲವು ವರ್ಷಗಳಿಂದ ಬಾಡಿಗೆ ಮನೆಗಳಲ್ಲಿ ವಾಸವಾಗಿ ಸ್ವಂತ ಮನೆಯಿಲ್ಲದೆ ಸಂಕಷ್ಟದಲ್ಲಿದ್ದು ಹಲವು ಬಾರಿ ನಿವೇಶನಕ್ಕಾಗಿ ಮನವಿ ಸಲ್ಲಿಸಿದರು ಇದುವರೆಗೂ ಒಂದಿAಚು ಜಾಗ ಸಿಗದ ಹಿನ್ನೆಲೆಯಲ್ಲಿ ಕೆಲವು ನಿವೇಶನ ರಹಿತರು ದಿಢೀರ್ ಗುಡಿಸಲನ್ನು ಕಟ್ಟಿ ವಾಸಿಸಲು ಆರಂಭಿಸಿದ್ದಾರೆ.
ಶಾಶ್ವತವಾಗಿ ನಿವೇಶನ ಸಿಗುವವರೆಗೂ ನಾವು ಇಲ್ಲೇ ಇರುವುದಾಗಿ ಹೇಳಿದ ಅವರುಗಳು ನಮ್ಮನ್ನು ಒಕ್ಕಲೆಬ್ಬಿಸಿದಲ್ಲಿ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಎಚ್ಚರಿಕೆ ನೀಡಿದ್ದಾರೆ.
ಸ್ಥಳಕ್ಕೆ ಕಂದಾಯ ಇಲಾಖೆ ಅನಿಲ್ ಕುಮಾರ್ ಭೇಟಿ ನೀಡಿ ತೆರವುಗೊಳಿಸಲು ಮನವೊಲಿಸಿದ ಸಂದರ್ಭ ಸಂತ್ರಸ್ತರು ಅಧಿಕಾರಿಗಳನ್ನೇ ತರಾಟೆಗೆ ತೆಗೆದುಕೊಂಡರು. ನಿರಾಶ್ರಿತರಾದ ಅಬ್ದುಲ್ ರೌಫ್, ಶಕ್ತಿವೇಲ್, ರಾಧಾ, ವನಜ, ಸಂತೋಷ್, ಜಲೀಲ್, ಸುನೀಲ್, ಶೈಲಾ, ಮೋಹನ, ಮಣಿಕಂಠ, ನರಸಿಂಹ, ನೌಫಲ್, ಫೈಸಲ್, ಹಂಸ, ಮಂಜು, ವಸಂತಕುಮಾರ್, ಪುಷ್ಪಾ, ರವೂಫ್ ಕಾಳಪ್ಪ ಸೇರಿದಂತೆ ಮತ್ತಿತರರು ಇದ್ದರು