ಭಾಗಮಂಡಲ, ಏ. ೧೬: ನೀರಾವರಿ ಕ್ಷೇತ್ರದಲ್ಲಿ ರಾಜ್ಯಕ್ಕೆ ಆಗಿರುವ ಅನ್ಯಾಯವನ್ನು ಸರಿಪಡಿಸುವ ನಿಟ್ಟಿನಲ್ಲಿ ಜೆಡಿಎಸ್ ವತಿಯಿಂದ ಹಮ್ಮಿಕೊಂಡಿರುವ ಜನತಾ ಜಲಧಾರೆ ಕಾರ್ಯಕ್ರಮಕ್ಕೆ ತಲಕಾವೇರಿಯಲ್ಲಿ ಕೊಡಗು ಜಿಲ್ಲಾ ಮಾಜಿ ಉಸ್ತುವಾರಿ ಸಚಿವ ಸಾರಾ ಮಹೇಶ್ ಅವರು ತೀರ್ಥ ಸಂಗ್ರಹಿಸುವ ಮೂಲಕ ಶನಿವಾರ ಚಾಲನೆ ನೀಡಿದರು.

(ಮೊದಲ ಪುಟದಿಂದ) ತಲಕಾವೇರಿಯಲ್ಲಿ ಅಗಸ್ತö್ಯ ಹಾಗೂ ಕಾವೇರಿ ಮಾತೆಗೆ ವಿಶೇಷ ಪೂಜೆ ಸಲ್ಲಿಸಿದ ಬಳಿಕ ಪವಿತ್ರ ಕಾವೇರಿ ಕುಂಡಿಕೆಯಿAದ ಬಿಂದಿಗೆಯಲ್ಲಿ ತೀರ್ಥವನ್ನು ಸಂಗ್ರಹಿಸಿದರು.

ನAತರ ಜಲಧಾರೆ ವಾಹನದ ಮೂಲಕ ಮೆರವಣಿಗೆ ನಡೆಸಲಾಯಿತು. ಭಾಗಮಂಡಲದ ತ್ರಿವೇಣಿ ಸಂಗಮದಲ್ಲಿ ಪೂಜೆ ಸಲ್ಲಿಸಿ ಜಲವನ್ನು ಸಂಗ್ರಹಿಸಲಾಯಿತು. ಜೆಡಿಎಸ್‌ನ ನೂರಾರು ಕಾರ್ಯಕರ್ತರು ಬೈಕ್ ಹಾಗೂ ಕಾರಿನಲ್ಲಿ ಜಾಥಾದಲ್ಲಿ ಪಾಲ್ಗೊಂಡಿದ್ದರು.

ಈ ಸಂದರ್ಭ ಪಿರಿಯಾಪಟ್ಟಣ ಶಾಸಕ ಮಹದೇವ್, ಕೊಡಗು ಜಿಲ್ಲಾ ಜೆಡಿಎಸ್ ಅಧ್ಯಕ್ಷ ಕೆ.ಎಂ. ಗಣೇಶ್, ಜೆಡಿಎಸ್ ವಕ್ತಾರೆ ನಝ್ಮ ನಜೀರ್ ಸೇರಿದಂತೆ ಹಲವರು ಪಾಲ್ಗೊಂಡಿದ್ದರು.

ತಲಕಾವೇರಿಯಲ್ಲಿ ಸುದ್ದಿಗಾರ ರೊಂದಿಗೆ ಮಾತನಾಡಿದ ಸಾರಾ ಮಹೇಶ್, ರಾಜ್ಯ ಮತ್ತು ಕೇಂದ್ರದಲ್ಲಿ ಇಂದು ಬಿಜೆಪಿ ಸರ್ಕಾರ ಇದೆ. ಅವರೇ ಹೇಳಿಕೊಳ್ಳುವಂತೆ ಡಬಲ್ ಸರ್ಕಾರ ಇದೆ. ಆದರೂ ನೀರಾವರಿ ಯೋಜನೆಗಳು ಯಾಕೆ ಅನುಷ್ಠಾನಗೊಳ್ಳುತ್ತಿಲ್ಲ ಎನ್ನುವುದಕ್ಕೆ ಮುಖ್ಯಮಂತ್ರಿ ಉತ್ತರಿಸಬೇಕೆಂದು ಹೇಳಿದರು.

ನಾವು ಹಿಂದೆ ಪಾದಯಾತ್ರೆ ಮಾಡಲು ತಯಾರಾಗಿದ್ದೆವು. ಅದನ್ನು ಕಾಂಗ್ರೆಸ್ ಹೈಜಾಕ್ ಮಾಡಿದೆ. ಆದರೆ ಈಗ ಇಡೀ ರಾಜ್ಯದ ನದಿಗಳನ್ನು ಜೋಡಣೆ ಮಾಡುವ ಮೂಲಕ ಈಗ ಇರುವ ನೀರಾವರಿ ಯೋಜನೆಗಳು ಬೇಗ ಪೂರ್ಣಗೊಳ್ಳಬೇಕೆಂಬ ಒತ್ತಾಯದೊಂದಿಗೆ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ಈ ಕಾರ್ಯಕ್ರಮ ಹಮ್ಮಿಕೊಂಡಿ ಕೊಂಡಿದ್ದಾರೆ ಎಂದು ತಿಳಿಸಿದರು.

ಸಚಿವ ಈಶ್ವರಪ್ಪ ರಾಜೀನಾಮೆ ಕುರಿತು ಮಾತನಾಡಿದ ಅವರು, ಈಶ್ವರಪ್ಪ ಈಗಾಗಲೇ ರಾಜೀನಾಮೆ ಕೊಟ್ಟಿದ್ದಾರೆ. ಸಿಎಂ ಅಂಗೀಕರಿಸಿದ್ದಾರೆ. ಪ್ರಕರಣ ನ್ಯಾಯಾಲಯದಲ್ಲಿದ್ದು, ಇಂತಹ ಸಂದರ್ಭದಲ್ಲಿ ನಾವು ಮಧ್ಯಪ್ರವೇಶಿಸುವುದು ಸರಿಯಲ್ಲ ಎಂದರು.

ಚಾಮರಾಜನಗರ ಕ್ಷೇತ್ರದಿಂದ ಕುಮಾರಸ್ವಾಮಿ ಸ್ಪರ್ಧಿಸುತ್ತಾರಾ ಎನ್ನುವ ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿದ ಅವರು, ಚುನಾವಣೆಗೆ ಇನ್ನೂ ಒಂದು ವರ್ಷವಿದೆ. ಜಿ.ಟಿ. ದೇವೇಗೌಡ ನಮ್ಮ ಪಕ್ಷದ ಶಾಸಕರಾಗಿದ್ದಾರೆ. ಚುನಾವಣೆ ವೇಳೆ ಮುಖಂಡರಾದ ಕುಮಾರಸ್ವಾಮಿ ಮತ್ತು ಕ್ಷೇತ್ರದ ಜನತೆ ಇದನ್ನು ತೀರ್ಮಾನಿಸುತ್ತಾರೆ ಎಂದರು.

ಎಲ್ಲಾ ಪಕ್ಷದವರಿಗೂ ರಾಜಕಾರಣ ಗೊತ್ತು. ಜನರ ಆಶೀರ್ವಾದ ಪಡೆಯುವುದೇ ಎಲ್ಲರ ಉದ್ದೇಶ. ಜನ ಆಶೀರ್ವಾದ ಮಾಡಿದರೆ ಯೋಜನೆಗಳನ್ನು ಕಾರ್ಯರೂಪಕ್ಕೆ ತರಬಹುದು. ಪಾದಯಾತ್ರೆ ನಡೆಸಬೇಕೆಂದು ಈ ಹಿಂದೆ ಕುಮಾರಸ್ವಾಮಿ ತೀರ್ಮಾನ ಮಾಡಿದ್ದರು. ಆದರೆ ಕಾಂಗ್ರೆಸ್‌ನವರು ಅದನ್ನು ಹೈಜಾಕ್ ಮಾಡಿದರು. ರಾಜ್ಯದ ಜಲಯೋಜನೆಗಳನ್ನು ಪೂರ್ಣಗೊಳಿಸಬೇಕು ಎನ್ನುವುದು ನಮ್ಮ ಉದ್ದೇಶ. ರಾಜ್ಯದ ನದಿಗಳ ಜೋಡಣೆಯ ಮಹತ್ವಾಕಾಂಕ್ಷೆಯೂ ಇದೆ ಎಂದರು.

ಇಡೀ ಸಮಗ್ರ ಕರ್ನಾಟಕದಲ್ಲಿ ಹೆಚ್.ಡಿ. ದೇವೇಗೌಡ ಹಾಗೂ ಕುಮಾರಸ್ವಾಮಿ ಅವರ ನೇತೃತ್ವದಲ್ಲಿ ಜನತಾ ಜಲಧಾರೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದ್ದು, ತಲಕಾವೇರಿ ಸನ್ನಿಧಿಯಲ್ಲಿ ಸಂಗ್ರಹಿಸಲಾದ ಜಲವನ್ನು ರಾಜಧಾನಿಗೆ ಕೊಂಡೊಯ್ಯ ಲಾಗುತ್ತದೆ ಎಂದು ಹೇಳಿದರು.