ಸೋಮವಾರಪೇಟೆ, ಏ. ೧೬: ಕಂದಾಯ ಇಲಾಖೆ, ಜಿಲ್ಲಾಧಿಕಾರಿಗಳ ಕಚೇರಿ, ತಾಲೂಕು ಆಡಳಿತದ ಆಶ್ರಯದಲ್ಲಿ ಸಮೀಪದ ಗಣಗೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗೋಣಿಮರೂರಿನಲ್ಲಿ ಆಯೋಜಿಸಿದ್ದ ಜಿಲ್ಲಾಧಿಕಾರಿಗಳ ಗ್ರಾಮ ವಾಸ್ತವ್ಯ ಕಾರ್ಯಕ್ರಮದಲ್ಲಿ ಸಾರ್ವಜನಿಕರು ಗ್ರಾಮೀಣ ಭಾಗದ ಸಮಸ್ಯೆಗಳನ್ನು ಡಿ.ಸಿ. ಎದುರು ತೆರೆದಿಟ್ಟರು.

ಜಿಲ್ಲಾಧಿಕಾರಿ ಡಾ. ಬಿ.ಸಿ. ಸತೀಶ ಅವರ ಅಧ್ಯಕ್ಷತೆಯಲ್ಲಿ ಗೋಣಿಮರೂರು ಸರ್ಕಾರಿ ಪ್ರಾಥಮಿಕ ಶಾಲಾ ಆವರಣದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಗ್ರಾಮೀಣ ಭಾಗದಲ್ಲಿರುವ ರಸ್ತೆ, ನೀರು, ಚರಂಡಿ, ಕಂದಾಯ ಇಲಾಖೆಯ ಸಮಸ್ಯೆಗಳು, ಕಾಡಾನೆ ಹಾವಳಿ, ಬ್ಯಾಂಕಿAಗ್ ಸೇವೆಯಲ್ಲಿ ವ್ಯತ್ಯಯ, ಗ್ರಾಮ ಲೆಕ್ಕಿಗರ ಲಂಚಾವತಾರದ ಬಗ್ಗೆ ಸಾರ್ವಜನಿಕರು ತಮ್ಮ ಅಹವಾಲು ಹೇಳಿಕೊಂಡರು.

ಎಲ್ಲರ ಸಮಸ್ಯೆಗಳನ್ನು ಶಾಂತಚಿತ್ತರಾಗಿ ಆಲಿಸಿದ ಜಿಲ್ಲಾಧಿಕಾರಿಗಳು ಸಭೆಯಲ್ಲಿದ್ದ ಇಲಾಖಾಧಿಕಾರಿಗಳಿಂದ ಪ್ರತಿಕ್ರಿಯೆ ಪಡೆದÀರು. ಸಭೆಯ ಆರಂಭದಿAದಲೂ ಮುಕ್ತಾಯವರೆಗೆ ಡಿ.ಸಿ., ನಗುನಗುತ್ತಲೇ ಸಮಸ್ಯೆಗಳ ಪರಿಹಾರದ ಭರವಸೆ ನೀಡಿದರು. ಬೆಳಿಗ್ಗೆ ಶಾಲಾ ಆವರಣಕ್ಕೆ ಡಿ.ಸಿ. ಆಗಮಿಸುತ್ತಿದ್ದಂತೆ ವಾದ್ಯ ಗೋಷ್ಠಿಯೊಂದಿಗೆ ಸ್ವಾಗತಿಸಿದರು.

ಸಭೆಯಲ್ಲಿ ಪ್ರಮುಖವಾಗಿ ಗಣಗೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿರುವ ಕಾಡಾನೆ ಹಾವಳಿ, ರಸ್ತೆ, ಚರಂಡಿ, ಕಂದಾಯ ದಾಖಲೆಗಳ ಸಮಸ್ಯೆ, ಆರ್‌ಟಿಸಿ, ಪೌತಿ ಖಾತೆ, ಬಿಪಿಎಲ್ ಕಾರ್ಡ್, ಗ್ರಾಮ ಲೆಕ್ಕಿಗರಿಂದ ಲಂಚದ ಬೇಡಿಕೆಗಳು, ಪರಿಹಾರ ಹಣದ ಸಮಸ್ಯೆಗಳು ಕೇಳಿಬಂದವು.

ಗಣಗೂರು ಗ್ರಾಮದ ಚಂದ್ರಶೇಖರ್ ಮಾತನಾಡಿ, ಆರ್‌ಟಿಸಿಯಲ್ಲಿ ಬೆಳೆಕಲಂ ನಮೂದಿಗೆ ಸಂಬAಧಿಸಿAತೆ ರೈತರು ಸಂಕಷ್ಟ ಎದುರಿಸುತ್ತಿದ್ದಾರೆ. ಸಾಲದ ಮಾಹಿತಿಯನ್ನು ಆರ್‌ಟಿಸಿಯಲ್ಲಿ ನಮೂದು ಮಾಡಿದ್ದು, ಸಾಲ ಮುಕ್ತಾಯಗೊಂಡರೂ ಕಾಲಂನಿAದ ತೆಗೆಯುತ್ತಿಲ್ಲ. ಬ್ಯಾಂಕ್ ಮತ್ತು ನೋಂದಣಾಧಿಕಾರಿಗಳ ಕಚೇರಿಗೆ ಅಲೆಯುವಂತಾಗಿದೆ. ಇದರಿಂದಾಗಿ ಸಹಕಾರ ಸಂಘಗಳಲ್ಲಿ ಸಾಲವೂ ಸಿಗುತ್ತಿಲ್ಲ. ಆರ್‌ಟಿಸಿ ಸಮಸ್ಯೆ ಬಗೆಹರಿಸುವಂತೆ ತಾಲೂಕು ಕಚೇರಿಗೆ ತೆರಳಿದರೆ ಆನ್‌ಲೈನ್ ಸಮಸ್ಯೆ ಎಂದು ಸಬೂಬು ನೀಡುತ್ತಿರುವುದಾಗಿ ಸಭೆಯ ಗಮನಕ್ಕೆ ತಂದರು.

ಇದಕ್ಕೆ ಪ್ರತಿಕ್ರಿಯಿಸಿದ ಜಿಲ್ಲಾಧಿಕಾರಿಗಳು, ಪ್ರತಿಯೋರ್ವರಿಗೂ ಪ್ರತ್ಯೇಕ ಆರ್‌ಟಿಸಿ ನೀಡುವ ಗುರಿ ಸರ್ಕಾರದ್ದು. ಪ್ರಸ್ತುತ ಎಲ್ಲಾ ಸರ್ವೆ ನಂಬರ್‌ಗಳನ್ನು ಒಂದುಗೂಡಿಸಿ ಆಕಾರಬಂಧು ದುರಸ್ತಿ ಮಾಡುವ ಕಾರ್ಯ ನಡೆಯುತ್ತಿದೆ. ಈ ಪೈಕಿ ಆರ್‌ಟಿಸಿಗಳನ್ನು ಒಂದುಗೂಡಿಸಿ ನಂತರ ವೈಯುಕ್ತಿಕವಾಗಿ ಆರ್‌ಟಿಸಿ ನೀಡಲಾಗುವುದು. ಸಹಕಾರ ಸಂಘಗಳಲ್ಲಿ ಪಡೆದಿರುವ ಸಾಲದ ನವೀಕರಣಕ್ಕೆ ಯಾವುದೇ ಸಮಸ್ಯೆಯಾಗದಂತೆ ಕ್ರಮ ವಹಿಸಲಾಗುವುದು. ಸಹಕಾರ ಸಂಘಗಳ ಉಪ ನಿಬಂಧಕರ ಕಚೇರಿಯಿಂದ ಎಲ್ಲಾ ಸಹಕಾರ ಸಂಘಗಳಿಗೂ ಪತ್ರ ಕಳುಹಿಸಲಾಗುವುದು ಎಂದರು.

ಗಣಗೂರು ವ್ಯಾಪ್ತಿಯಲ್ಲಿರುವ ಕಾಡಾನೆಗಳ ಸಮಸ್ಯೆಗಳ ಬಗ್ಗೆ ಜಿ.ಪಂ. ಮಾಜಿ ಅಧ್ಯಕ್ಷ ವಿ.ಎಂ. ವಿಜಯ ಅವರು ಜಿಲ್ಲಾಧಿಕಾರಿಗಳ ಗಮನ ಸೆಳೆದರು. ಕಾಡಾನೆಗಳ ಹಾವಳಿಯಿಂದ ಜನಜೀವನ ದುಸ್ತರವಾಗಿದೆ. ಕೃಷಿ ಕಾರ್ಯ ಕೈಗೊಳ್ಳಲು ಸಾಧ್ಯವಾಗುತ್ತಿಲ್ಲ. ಸೋಲಾರ್ ಬೇಲಿ ಮತ್ತು ಆನೆಕಂದಕ ಕಾಮಗಾರಿ ಅವೈಜ್ಞಾನಿಕವಾಗಿದೆ ಎಂದರು.

ಕಾಡಾನೆಗಳ ಸಮಸ್ಯೆ ಪರಿಹಾರಕ್ಕೆ ಕ್ರಮಕೈಗೊಳ್ಳಲಾಗುತ್ತಿದೆ. ಕಾಡಂಚಿನ ಗ್ರಾಮಗಳ ಸಮಸ್ಯೆ ತಮ್ಮ ಗಮನಕ್ಕೆ ಬಂದಿದ್ದು, ಇದನ್ನು ಸಚಿವರ ಗಮನಕ್ಕೂ ತರಲಾಗಿದೆ. ೬೦೦ ಕೋಟಿ ಅನುದಾನದ ಪೈಕಿ ೧೦೦ ಕೋಟಿ ಬಿಡುಗಡೆಯಾಗಿದೆ. ಅವಶ್ಯಕತೆಗಳಿಗೆ ಅನುಗುಣವಾಗಿ ಕಾಮಗಾರಿ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು.

(ಮೊದಲ ಪುಟದಿಂದ) ಆಹಾರ ಇಲಾಖೆಯಿಂದ ಬಡ ಜನರಿಗೆ ಸಮಸ್ಯೆಯಾಗುತ್ತಿದೆ. ಬಡವರ ಬಿಪಿಎಲ್ ಕಾರ್ಡ್ಗಳನ್ನು ಎಪಿಎಲ್ ಮಾಡಲಾಗುತ್ತಿದೆ. ಪಡಿತರ ಸಿಗದೇ ಸಮಸ್ಯೆಯಾಗುತ್ತಿದೆ. ಯಾವ ಮಾನದಂಡದ ಆಧಾರದ ಮೇಲೆ ಕಾರ್ಡ್ ರದ್ದುಪಡಿಸಲಾಗುತ್ತಿದೆ? ಸ್ಥಿತಿವಂತರಿಗೆ ಬಿಪಿಎಲ್ ನೀಡಲಾಗಿದೆ ಎಂದು ಸಾರ್ವಜನಿಕರು ಅಸಮಾಧಾನ ವ್ಯಕ್ತಪಡಿಸಿದರು.

ಡಾಟಾ ಎಂಟ್ರಿ ಸಮಸ್ಯೆಯಿಂದಾಗಿ ಕೆಲವೊಂದು ಕಾರ್ಡ್ಗಳು ಎಪಿಎಲ್ ಆಗಿದ್ದು, ಬದಲಾವಣೆಗಾಗಿ ಸಚಿವರಿಗೆ ಪತ್ರ ಬರೆಯಲಾಗಿದೆ. ಜಿಲ್ಲೆಯಲ್ಲಿ ೮೫೪ ಕಾರ್ಡ್ಗಳು ಎಪಿಎಲ್‌ಗೆ ಪರಿವರ್ತನೆಯಾಗಿದೆ. ಸದ್ಯದಲ್ಲಿಯೇ ಸಮಸ್ಯೆ ಬಗೆಹರಿಯಲಿದೆ. ಚಿಕಿತ್ಸೆಯ ಅವಶ್ಯಕತೆಯಿದ್ದು ಬಿಪಿಎಲ್ ಕಾರ್ಡ್ ಇರದಿದ್ದರೆ ಆಯುಷ್ಮಾನ್ ಕಾರ್ಡ್ ಮೂಲಕವೂ ಉಚಿತವಾಗಿ ಚಿಕಿತ್ಸೆ ಪಡೆಯಬಹುದಾಗಿದೆ ಎಂದು ಡಾ. ಬಿ.ಸಿ. ಸತೀಶ್ ತಿಳಿಸಿದರು.

ಗ್ರಾಮಸ್ಥ ನಾಣಯ್ಯ ಮಾತನಾಡಿ, ಸರ್ಕಾರಿ ಕೆರೆಗಳ ಹೂಳೆತ್ತಿಸುವ ಮೂಲಕ ಅಂಜರ್ತಲ ವೃದ್ಧಿಗೆ ಕ್ರಮಕೈಗೊಳ್ಳಬೇಕೆಂದು ಮನವಿ ಮಾಡಿದರು. ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ವತಿಯಿಂದ ಪ್ರತಿ ತಾಲೂಕಿನಲ್ಲಿ ತಲಾ ಎರಡು ಕೆರೆಗಳ ಹೂಳೆತ್ತಲು ಕ್ರಮವಹಿ ಸಲಾಗಿದೆ. ಸೋಮವಾರಪೇಟೆ ತಾಲೂಕಿನಲ್ಲಿಯೂ ಎರಡು ಕೆರೆಗಳ ಹೂಳೆತ್ತಲಾಗುವುದು. ಕೆರೆಗಳ ಹೂಳನ್ನು ಸ್ಥಳೀಯ ಕೃಷಿಕರು ತಮ್ಮ ಜಮೀನುಗಳಿಗೆ ಸಾಗಾಟಗೊಳಿಸಲು ಮುಂದೆ ಬರಬೇಕಿದೆ ಎಂದು ಜಿಲ್ಲಾಧಿಕಾರಿಗಳು ಹೇಳಿದರು.

ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಒತ್ತುವರಿಯಾಗಿರುವ ಸರ್ಕಾರಿ ಕೆರೆಗಳ ಒತ್ತುವರಿ ತೆರವಿಗೆ ಕ್ರಮಕೈಗೊಳ್ಳ ಬೇಕೆಂದು ಚಂದ್ರಶೇಖರ್ ಒತ್ತಾಯಿಸಿದರು. ಸುಪ್ರಿಂ ಕೋರ್ಟ್ ಆದೇಶದ ಪ್ರಕಾರ ಕೆರೆಗಳ ಒತ್ತುವರಿಯನ್ನು ತೆರವುಗೊಳಿಸಲಾ ಗುತ್ತಿದೆ. ಈಗಾಗಲೇ ೫೪೭ ಕೆರೆಗಳ ಅಳತೆ ಮಾಡಲಾಗಿದೆ. ತಾಲೂಕಿನಲ್ಲಿ ೭೯ ಕೆರೆಗಳ ಒತ್ತುವರಿಯನ್ನು ಗುರುತಿಸಿದ್ದು, ಶೇ.೫೦ರಷ್ಟು ತೆರವು ಕಾರ್ಯ ಮುಕ್ತಾಯಗೊಂಡಿದೆ. ಉಳಿದ ಕೆರೆಗಳ ಒತ್ತುವರಿ ತೆರವು ಕಾರ್ಯ ಪ್ರಗತಿಯಲ್ಲಿದೆ ಎಂದರು.

ಗ್ರಾಮೀಣ ಪ್ರದೇಶದಲ್ಲಿ ರಸ್ತೆಗಳು ಒತ್ತುವರಿಯಾಗಿದೆ ಎಂದು ಗಣಗೂರಿನ ರುದ್ರೇಶ್ ಹೇಳಿದರು. ಗ್ರಾಮ ನಕಾಶೆಯನ್ನು ಪರಿಶೀಲಿಸಿ ರಸ್ತೆ ಒತ್ತುವರಿಯಾಗಿದ್ದರೆ ತೆರವುಗೊಳಿ ಸುವಂತೆ ತಾಲೂಕು ತಹಶೀಲ್ದಾರ್ ಗೋವಿಂದರಾಜು ಅವರಿಗೆ ಜಿಲ್ಲಾಧಿಕಾರಿಗಳು ಸೂಚನೆ ನೀಡಿದರು. ಬೆಳೆ ಪರಿಹಾರ ಹಣ ರೈತರ ಖಾತೆಗೆ ನೇರವಾಗಿ ಸಂದಾಯವಾಗುತ್ತದೆ. ೨೫೦ ಮಂದಿಗೆ ಪರಿಹಾರ ಬಾರದಿರುವ ಬಗ್ಗೆ ದೂರು ಬಂದಿದೆ. ಅಗತ್ಯ ದಾಖಲಾತಿ ಗಳನ್ನು ಒದಗಿಸಿದರೆ ಪರಿಹಾರ ಹಣ ಬಿಡುಗಡೆಗೆ ಕ್ರಮವಹಿಸಲಾಗುವುದು ಎಂದರು.

ಸ್ವ-ಸಹಾಯ ಸಂಘಗಳಿಗೆ ಬ್ಯಾಂಕ್‌ನಿAದ ಅಗತ್ಯ ನೆರವು ಲಭಿಸು ತ್ತಿಲ್ಲ ಎಂದು ಜಯಮ್ಮ ದೂರಿದರು. ಈ ಬಗ್ಗೆ ಬ್ಯಾಂಕ್ ವ್ಯವಸ್ಥಾಪಕರಿಂದ ಜಿಲ್ಲಾಧಿಕಾರಿಗಳು ಸ್ಪಷ್ಟನೆ ಬಯಸಿ, ಗ್ರಾಹಕರಿಗೆ ಉತ್ತಮ ಸೇವೆ ಒದಗಿಸುವಂತೆ ನಿರ್ದೇಶನ ನೀಡಿದರು.

ಮಹಿಳಾ ಸ್ವ-ಸಹಾಯ ಸಂಘಗಳು ತಮ್ಮ ಕಾರ್ಯಚಟುವಟಿಕೆ ಗಳನ್ನು ಇನ್ನಷ್ಟು ವಿಸ್ತರಿಸಿಕೊಳ್ಳಬೇಕು. ವ್ಯಾವಹಾರಿಕವಾಗಿ ಮುಂದೆ ಬರಬೇಕು. ಆದಾಯ ಗಳಿಕೆಯತ್ತ ಚಿಂತನೆ ನಡೆಸಬೇಕೆಂದು ಜಿಲ್ಲಾಧಿಕಾರಿ ಗಳು ಕಿವಿಮಾತು ಹೇಳಿದರು.

ನರೇಗಾ ಯೋಜನೆಯಡಿ ಸರ್ಕಾರಿ ಶಾಲೆಗಳಿಗೆ ಜಾಗದಲ್ಲಿ ಗಿಡಗಳನ್ನು ನೆಡುವುದು, ಉದ್ಯಾನವನ ನಿರ್ಮಾಣಕ್ಕೆ ಅವಕಾಶವಿದ್ದು, ಇನ್ನು ಸದ್ಬಳಕೆ ಮಾಡಿಕೊಳ್ಳಬೇಕೆಂದು ಸಲಹೆ ನೀಡಿದ ಜಿಲ್ಲಾಧಿಕಾರಿಗಳು, ಖಾಸಗಿ ನರ್ಸರಿಗಳಲ್ಲಿ ಬೆಳೆಯಲಾಗಿರುವ ಗಿಡಗಳನ್ನು ಖರೀದಿಸಿ ಇಲಾಖೆಯ ಮೂಲಕ ರೈತರಿಗೆ ತಲುಪಿಸಲು ಕ್ರಮವಹಿಸಿ ಎಂದು ತೋಟಗಾರಿಕಾ ಇಲಾಖೆಯ ಅಧಿಕಾರಿ ಮಂಜುನಾಥ್ ಅವರಿಗೆ ಸೂಚಿಸಿದರು.

ಸಭೆಯ ಬಳಿಕ ವಿವಿಧ ಇಲಾಖೆಗಳ ಕೆಲಸ ಕಾರ್ಯಗಳಿಗೆ ಸಂಬAಧಿಸಿದAತೆ ಗ್ರಾಮಸ್ಥರು ತಂದಿದ್ದ ಅಹವಾಲುಗಳನ್ನು ಸ್ವೀಕರಿಸಿದ ಜಿಲ್ಲಾಧಿಕಾರಿಗಳು, ಕೆಲವೊಂದು ಸಮಸ್ಯೆಗಳಿಗೆ ಸ್ಥಳದಲ್ಲಿಯೇ ಪರಿಹಾರ ಒದಗಿಸಿದರು. ಸಭೆಯನ್ನು ಗ್ರಾ.ಪಂ. ಅಧ್ಯಕ್ಷ ಶಶಿಕುಮಾರ್ ಉದ್ಘಾಟಿಸಿದರು. ಉಪ ವಿಭಾಗಾಧಿಕಾರಿ ಯತೀಶ್, ಸಮಾಜ ಕಲ್ಯಾಣ ಇಲಾಖಾಧಿಕಾರಿ ಶೇಖರ್, ಗಿರಿಜನ ಅಭಿವೃದ್ಧಿ ಯೋಜನಾಧಿಕಾರಿ ಹೊನ್ನೇಗೌಡ, ಲೋಕೋಪಯೋಗಿ ಕಾರ್ಯಪಾಲಕ ಅಭಿಯಂತರ ಡಿ. ನಾಗರಾಜ್, ಯೋಜನಾ ನಿರ್ದೇಶಕ ಶ್ರೀಕಂಠ ಮೂರ್ತಿ, ಸೆಸ್ಕ್ ಎಇಇ ಧನಂಜಯ, ಹಿಂದುಳಿದ ವರ್ಗಗಳ ಕಲ್ಯಾಣಾಧಿ ಕಾರಿ ಮಂಜುನಾಥ್, ಕಾರ್ಮಿಕಾಧಿ ಕಾರಿ ಅನಿಲ್, ಕೆಪಿಟಿಸಿಎಲ್‌ನ ಮಹದೇಶ್, ಜಿಲ್ಲಾ ಆರೋಗ್ಯಾಧಿಕಾರಿ ವೆಂಕಟೇಶ್, ಪಶುವೈದ್ಯಕೀಯ ಇಲಾಖೆಯ ಸುರೇಶ್ ಭಟ್, ಕೃಷಿ ಇಲಾಖೆಯ ಶಬಾನಾ ಶೇಖ್, ಕೆಎಸ್‌ಆರ್‌ಟಿಸಿ ವ್ಯವಸ್ಥಾಪಕಿ ಗೀತಾ, ಬಿಎಸ್‌ಎನ್‌ಎಲ್‌ನ ಲೀಲಾ ದಯಾನಂದ್, ಉಪ ನೋಂದಣಾಧಿ ಕಾರಿ ಅನಿತ, ತಾಲೂಕು ಆರೋಗ್ಯಾಧಿಕಾರಿ ಶ್ರೀನಿವಾಸ್, ಬಿಇಓ ಸುರೇಶ್, ಪೊಲೀಸ್ ಇನ್ಸ್ಪೆಕ್ಟರ್ ಮಹೇಶ್ ಸೇರಿದಂತೆ ಇತರ ಅಧಿಕಾರಿಗಳು ಉಪಸ್ಥಿತರಿದ್ದರು.