ಸೋಮವಾರಪೇಟೆ, ಏ.೧೬: ನಾವು ಪ್ರತಿಷ್ಠಾನ ಕೊಡಗು ಆಯೋಜಿಸಿರುವ ‘ಹಕ್ಕಿಗೊಂದು ಗುಟುಕು ಅಭಿಯಾನ-೨೦೨೨’ದ ಸಮಾರೋಪ ಸಮಾರಂಭ ತಾ.೧೭ ರಂದು (ಇಂದು) ಪ್ರತಿಕಾಭವನದಲ್ಲಿ ಬೆಳಿಗ್ಗೆ ೮ ಗಂಟೆಗೆ ನಡೆಯಲಿದೆ ಎಂದು ಪ್ರತಿಷ್ಠಾನದ ಸಂಸ್ಥಾಪಕ ಗೌತಮ್ ಕಿರಗಂದೂರು ತಿಳಿಸಿದ್ದಾರೆ.

ಸಮಾರೋಪ ಸಮಾರಂಭದ ನಂತರ ಪುಷ್ಪಗಿರಿ ತಪ್ಪಲಿನಲ್ಲಿ ಪಕ್ಷಿವೀಕ್ಷಣೆ ಮತ್ತು ಪರಿಸರ ಅಧ್ಯಯನ, ಪರ್ವತಾರೋಹಣದ ಬಗ್ಗೆ ಮಾಹಿತಿ ನೀಡಲಾಗುತ್ತದೆ. ಕಾರ್ಯಕ್ರಮದ ಅಂಗವಾಗಿ ಪ್ರೌಢ ಹಾಗೂ ಪ್ರಾಥಮಿಕ ಶಾಲಾ ಮಕ್ಕಳು ಪ್ರಬಂಧ ಸ್ಪರ್ಧೆಯಲ್ಲಿ ಭಾಗವಹಿಸಿದ್ದು, ೩೦ ವಿದ್ಯಾರ್ಥಿಗಳು ಆಯ್ಕೆಯಾಗಿದ್ದಾರೆ. ಇವರುಗಳು ಪಕ್ಷಿ ವೀಕ್ಷಣೆ, ಅಧ್ಯಯನ ಶಿಬಿರದಲ್ಲಿ ಭಾಗವಹಿಸಲಿದ್ದಾರೆ.

ಸಂಪನ್ಮೂಲ ವ್ಯಕ್ತಿಗಳಾದ ಪಕ್ಷಿತಜ್ಞ ಡಾ.ನರಸಿಂಹನ್, ಹಾಸನದ ಭಾರತೀಯ ಜ್ಞಾನ ವಿಜ್ಞಾನ ಸಮಿತಿ ಉಪಾಧ್ಯಕ್ಷ ಅಹ್ಮದ್ ಹಗರೆ, ಅಂತಾರಾಷ್ಟಿçÃಯ ಕಿಕ್ ಬಾಕ್ಸರ್ ಹಾಗೂ ಪರ್ವತಾರೋಹಿ ಗಿರೀಶ್ ಆರ್.ಗೌಡ, ಪಕ್ಷಿ ತಜ್ಞ ದೇಸಾಯಿ, ಕರ್ನಾಟಕ ಪರಿಸರ ಶಿಕ್ಷಣ ಕೇಂದ್ರದ ಸಿ.ಪಿ.ಆರ್.ಯೋಜನಾಧಿಕಾರಿ ಎಸ್.ರವಿಶಂಕರ್, ವಿಜ್ಞಾನ ಬರಹಗಾರ ಕೆ.ಎಸ್.ರವಿ ಕುಮಾರ್ ಭಾಗವಹಿಸಲಿದ್ದಾರೆ.

ವಿಶೇಷ ಆಹ್ವಾನಿತರಾಗಿ ರಾಜ್ಯ ಒಕ್ಕಲಿಗರ ಸಂಘದ ಕಾರ್ಯಾಧ್ಯಕ್ಷ ಹರಪಳ್ಳಿ ರವೀಂದ್ರ, ಪುಷ್ಪಗಿರಿ ಶಾಂತಾಮಲ್ಲಿಕಾರ್ಜುನ ದೇವಾಲಯ ಸಮಿತಿ ಅಧ್ಯಕ್ಷ ಟಿ.ಪಿ.ಚಂಗಪ್ಪ, ಪುಷ್ಪಗಿರಿ ವನ್ಯಜೀವಿ ಘಟಕದ ಆರ್.ಎಫ್.ಒ ವಿಮಲ್‌ಬಾಬು, ಒಕ್ಕಲಿಗರ ಯುವ ವೇದಿಕೆ ಅಧ್ಯಕ್ಷ ಬಿ.ಜೆ.ದೀಪಕ್, ಕೊಡಗು ಜಿಲ್ಲಾ ಒಕ್ಕಲಿಗರ ಯುವ ವೇದಿಕೆ ಅಧ್ಯಕ್ಷ ಗಿರೀಶ್ ಮಲ್ಲಪ್ಪ, ಎ.ವಿ.ಎಂಟರ್‌ಪ್ರೆöÊಸಸ್ ಮಾಲೀಕ ಅರುಣ್ ಕಾಳಪ್ಪ, ಯಂಗ್ ಇಂಡಿಯನ್ ಫರ‍್ಮರ‍್ಸ್ ಅಸೋಸಿಯೇಷನ್ ಅಧ್ಯಕ್ಷ ಶ್ರೀನಿಧಿ ಭಾಗವಹಿಸಲಿದ್ದಾರೆ ಎಂದು ಮಾಹಿತಿ ನೀಡಿದ್ದಾರೆ.