ಕಣಿವೆ, ಏ. ೧೪ : ದೇಶಕ್ಕೆ ಸ್ವಾತಂತ್ರö್ಯ ಬಂದು ೭೫ ವರ್ಷಗಳು ಕಳೆದರೂ ಇಲ್ಲಿನ ಗಿರಿಜನ ಹಾಡಿಯ ನಿವಾಸಿಗಳಿಗೆ ಮಾತ್ರ ಸ್ವಾತಂತ್ರ‍್ಯ ದೊರಕಿಲ್ಲ.

ಮೈಸೂರು-ಮಡಿಕೇರಿ ರಾಷ್ಟಿçÃಯ ಹೆದ್ದಾರಿಯ ಅಂಚಿನಲ್ಲಿರುವ ಕಣಿವೆ, ಏ. ೧೪ : ದೇಶಕ್ಕೆ ಸ್ವಾತಂತ್ರö್ಯ ಬಂದು ೭೫ ವರ್ಷಗಳು ಕಳೆದರೂ ಇಲ್ಲಿನ ಗಿರಿಜನ ಹಾಡಿಯ ನಿವಾಸಿಗಳಿಗೆ ಮಾತ್ರ ಸ್ವಾತಂತ್ರ‍್ಯ ದೊರಕಿಲ್ಲ.

ಮೈಸೂರು-ಮಡಿಕೇರಿ ರಾಷ್ಟಿçÃಯ ಹೆದ್ದಾರಿಯ ಅಂಚಿನಲ್ಲಿರುವ ಜನ ಇಲ್ಲಿ ಒಂದೇ ಸೂರಿನಲ್ಲಿ ಬಂಧಿಯಾಗಿದ್ದಾರೆ. ಆದರೆ ಈ ಜನರು ವಾಸವಿರುವ ಸೂರುಗಳನ್ನು ನೋಡಿದರೆ ಪರಮಾಶ್ಚರ್ಯವಾಗುತ್ತದೆ.

ಅಂದರೆ ಕಾಡಿನಲ್ಲಿ ಇರುವ ಈ ಮಾನವ ಮುಗ್ಧ ಜೀವಿಗಳನ್ನು ಕೊಡಗು ಜಿಲ್ಲಾಡಳಿತ ಹಾಗೂ ಅರಣ್ಯ ಇಲಾಖೆ ಅತ್ಯಂತ ನಿಕೃಷ್ಟವಾಗಿ ಕಾಣುತ್ತಿದೆ. ಈ ತಲೆ ಮೇಲಿನ ಸೂರುಗಳಲ್ಲಿ ಕೊನೆಯ ಪಕ್ಷ ಪ್ಲಾಸ್ಟಿಕ್ ಹೊದಿಕೆಗೂ ಗತಿಯಿಲ್ಲದೆ ಹರಿದು, ಕಿತ್ತು ಹೋಗಿ ತೂತುಗಳು ಕಾಣುವ ಪ್ಲಾಸ್ಟಿಕ್ ಹೊದಿಕೆಗಳನ್ನು ಹಾಕಿರುವ ಈ ಮಂದಿ ಮಳೆ ಬರುವಾಗ ಪಡುವ ಯಾತನೆ ಹೇಳತೀರದ್ದು.

ಸೋರುವ ಸೂರುಗಳಲ್ಲಿ ಮಳೆ ನೀರು ಹರಿದು ಸೂರಿನೊಳಗಿರುವ ಈ ಗಿರಿಜನ ಬದುಕು ಮೂರಾ ಬಟ್ಟೆಯಾಗುತ್ತಿದೆ. ಇನ್ನು ಮಕ್ಕಳು ಹಾಗೂ ಮಹಿಳೆಯರ ಪಾಡು ಹೇಳತೀರದ್ದು.

ಶೌಚಾಲಯ ನೋಡೇ ಇಲ್ಲ : ರಾಷ್ಟಿçÃಯ ಹೆದ್ದಾರಿಯಂಚಿನ ಈ ಹಾಡಿಯಲ್ಲಿ ವಾಸವಿರುವ ಆದಿವಾಸಿ ಕುಟುಂಬಗಳಿಗೆ ಶೌಚಾಲಯ ಭಾಗ್ಯ ಇದೂವರೆಗೂ ದೊರಕಿಲ್ಲ. ಶೌಚಕ್ಕೆ ಏನು ಮಾಡ್ತೀರಾ ಅಂತಾ ಗಿರಿಜನರನ್ನು ಕೇಳಿದರೆ ಅಯ್ಯೋ ಕಾಡಿಲ್ವ ಬಿಡಿ ಅಂತಾರೆ.

(ಮೊದಲ ಪುಟದಿಂದ) ಅಂದರೆ ಶೌಚಾಲಯ ಕಟ್ಟಿದರೆ ಬೇಕಾದ ನೀರಿಗೆ ಗತಿಯಿಲ್ಲ. ಹಾಗಾಗಿ ಸುಮ್ಕಿರಿ. ನಮಗೆ ಕಾಡೇ ಸಾಕು ಅಂತಾರೆ ಇಲ್ಲಿನ ವಾಸಿ ಶಾಂತಿ ಎಂಬ ೬೮ ರ ಪ್ರಾಯದ ಮಹಿಳೆ.

ಮಕ್ಕಳು ಶಿಕ್ಷಣದಿಂದ ವಂಚಿತ : ಈ ಹಾಡಿಯಲ್ಲಿ ಹತ್ತಕ್ಕೂ ಹೆಚ್ಚು ಮಕ್ಕಳಿವೆ. ಆದರೆ ಇಲ್ಲಿನ ಬಹುತೇಕ ಮಕ್ಕಳು ಶಾಲೆಯ ಮುಖವನ್ನೇ ನೋಡಿಲ್ಲ. ಶಿಬಿರದಿಂದ ಎರಡು ಕೀ.ಮೀಗಳಿಗೂ ಹೆಚ್ಚು ದೂರವಿರುವ ಬಸವನಹಳ್ಳಿ ಹಾಗೂ ಗುಡ್ಡೆಹೊಸೂರು ಶಾಲಾ ಕಾಲೇಜುಗಳಿಗೆ ಇಲ್ಲಿನ ಮಕ್ಕಳು ದಾಖಲಾತಿಯನ್ನೇ ಪಡೆದಿಲ್ಲ. ಅದರಲ್ಲೂ ೬ ರ ಪ್ರಾಯದ ತಬ್ಬಲಿ ಹೆಣ್ಣು ಮಗುವೊಂದು ಶಾಲೆಯ ಮೆಟ್ಟಿಲೇ ಹತ್ತಿಲ್ಲ. ಗಿರಿಜನ ಅಭಿವೃದ್ಧಿ ಇಲಾಖೆಯ ಅಧಿಕಾರಿಗಳು ಕೂಡ ಈ ಬಗ್ಗೆ ಜಾಗೃತಿಯನ್ನೇ ಮೂಡಿಸಿಲ್ಲ.

ಶಾಲೆಯ ಬಾಗಿಲನ್ನೇ ತುಳಿಯದ ಈ ಹೆಣ್ಣು ಮಗುವಿನ ಜೀವನ ಹರುಕು ಮುರುಕಾದ ಗುಡಿಸಲ ಒಳಗೆ ಕಮರಿ ಹೋಗುತ್ತಿದೆ.

ಮಕ್ಕಳಿಗೆ ಕಡ್ಡಾಯ ಶಿಕ್ಷಣ ನೀಡಬೇಕಾದ ಸ್ಥಳೀಯ ಶಾಲೆಗಳ ಅಥವಾ ಪಂಚಾಯಿತಿ ಅಧಿಕಾರಿಗಳಿಗೆ ಈ ಬಗ್ಗೆ ಮಾಹಿತಿ ಇಲ್ಲದಿರುವುದು ಮಾತ್ರ ದುರ್ದೈವದ ಸಂಗತಿ.

ಹಾಗೆಯೇ ಇಲ್ಲಿನ ಮತ್ತಿಬ್ಬರು ಹೆಣ್ಣು ಮಕ್ಕಳು ಕೂಡ ಶಾಲೆಗೆ ದಾಖಲಾಗಿಲ್ಲ ಎಂದು ಇಲ್ಲಿನ ನಿವಾಸಿಗಳು ನೊಂದು ನುಡಿಯುತ್ತಾರೆ.

ಆಹಾರದ ಕಿಟ್‌ಗಳು ದೊರಕುತ್ತಿಲ್ಲ : ಈ ಆದಿವಾಸಿಗಳಿಗೆ ಕಡ್ಡಾಯವಾಗಿ ಜಿಲ್ಲಾಡಳಿತದಿಂದ ನೀಡಲೇ ಬೇಕಾದ ಪೌಷ್ಠಿಕ ಆಹಾರದ ಕಿಟ್‌ಗಳನ್ನು ಇದೂವರೆಗೂ ನೀಡಿಯೇ ಇಲ್ಲ ಎಂಬುದು ಮಾತ್ರ ಸೋಜಿಗವೇ ಸರಿ. ಈ ಆದಿವಾಸಿಗಳಿಗೆ ತುರ್ತಾಗಿ ಅಗತ್ಯವಿರುವ ಕೋಳಿ ಮೊಟ್ಟೆ, ಅಡುಗೆ ಎಣ್ಣೆ, ದವಸ ಧಾನ್ಯಗಳು ಸೇರಿದಂತೆ ಯಾವುದೇ ಆಹಾರದ ಪದಾರ್ಥಗಳು ಈ ಹಾಡಿಗೆ ದರ್ಶನವಾಗಿಯೇ ಇಲ್ಲವಂತೆ.

ಆರೋಗ್ಯ ಶಿಕ್ಷಣ ಕೊರತೆ : ಈ ಹಾಡಿಯಲ್ಲಿ ವಾಸವಿರುವ ಆದಿವಾಸಿ ಹೆಣ್ಣು ಮಕ್ಕಳಿಗೆ ತುರ್ತು ಅಗತ್ಯವಾಗಿ ನೀಡಲೇಬೇಕಾದ ಆರೋಗ್ಯ ಶಿಕ್ಷಣ, ನೈತಿಕ ಶಿಕ್ಷಣ ಹಾಗೂ ವೈಯಕ್ತಿಕ ಸ್ವಚ್ಛತೆಯ ಶಿಕ್ಷಣ ದೊರಕಲೇ ಇಲ್ಲ. ಹಾಗಾಗಿ ಈ ಹಾಡಿಯಲ್ಲಿ ಪ್ರೌಢಾವಸ್ಥೆಗೆ ಬಂದಿರುವ ಹೆಣ್ಣು ಮಕ್ಕಳು ಹಾಗೂ ತಾಯಂದಿರ ಮಾಸಿಕ ರುತುಸ್ರಾವದ ನಿರ್ವಹಣೆಯ ಬಗ್ಗೆಯೂ ಕನಿಷ್ಟ ಮಾಹಿತಿ ಇಲ್ಲ ಎಂಬುದು ಜಿಲ್ಲೆಯ ಅಧಿಕಾರಿಗಳ ಬೇಜವಾಬ್ದಾರಿಯನ್ನು ಎತ್ತಿ ತೋರಿಸುತ್ತಿದೆ.

ವೈಯಕ್ತಿಕ ಸ್ವಚ್ಛತೆಯ ಬಗ್ಗೆ ಗಿರಿಜನ ಮಹಿಳೆಯೊಬ್ಬರ ಬಳಿ ‘ಶಕ್ತಿ’ ಪ್ರಶ್ನಿಸಿದಾಗ, ‘ಅಯ್ಯೋ ನಮಗೆ, ನಮ್ಮ ಮಕ್ಕಳಿಗೆ ಯಾವ ಪ್ಯಾಡ್ಗಳು ಗೊತ್ತಿಲ್ಲ. ನಾವೆಲ್ಲಾ ಹಾಗಾದಾಗ ಕಾಡಿಗೆ ಹೋಗ್ತೇವೆ’ ಎನ್ನುತ್ತಾರೆ.

ಕರೆಂಟು ಮೊದಲೇ ಇಲ್ಲ : ಈ ಹಾಡಿಯಲ್ಲಿ ವಿದ್ಯುತ್ ಸಂಪರ್ಕ ಇಲ್ಲದ ಕಾರಣ ಮಕ್ಕಳಿಗೆ ಓದುವ ಮತ್ತು ಬರೆಯುವ ಆಸಕ್ತಿಯೇ ಉಳಿದಿಲ್ಲ.

ಹಾಗಾಗಿ ಯಾವ ಮಕ್ಕಳು ಕೂಡ ಶಾಲೆಗೆ ಹೋಗುತ್ತಿಲ್ಲ ಎನ್ನಲಾಗುತ್ತಿದೆ.

ಅಂಗನವಾಡಿಗಳಲ್ಲಿ, ಗರ್ಭಿಣಿಯರು, ಮಕ್ಕಳು ಹಾಗೂ ಬಾಣಂತಿ ಮಹಿಳೆಯರಿಗೆ ನೀಡುವ ಕಿಟ್‌ಗಳು ದೊರಕುತ್ತಿಲ್ಲ ಎಂದು ಇಲ್ಲಿನ ಮಹಿಳೆಯರೇ ದೂರಿಕೊಳ್ಳುತ್ತಾರೆ.

ಶಯನಕ್ಕೆ - ಸ್ನಾನಕ್ಕೆ ಮರೆಯೇ ಇಲ್ಲ: ಈ ಹಾಡಿಯ ಪ್ರತೀ ಗುಡಿಸಲಲ್ಲಿ ಕನಿಷ್ಟ ಮೂರು ಮತ್ತೊಂದು ಕುಟುಂಬಗಳು ವಾಸಿಸುತ್ತಿರುವುದು ಒಂದೆಡೆಯಾದರೆ, ಇಲ್ಲಿನ ಮಹಿಳೆಯರು ಹಾಗೂ ಹೆಣ್ಣು ಮಕ್ಕಳ ಸ್ನಾನಕ್ಕೆ ಗುಡಿಸಲ ಬಳಿಯ ಬೇಲಿಯಂಚಿನಲ್ಲಿ ಕಟ್ಟಿದ ಹಳೆಯ ಸೀರೆಗಳ ಮರೆಯೇ ಸ್ನಾನದ ಕೋಣೆಗಳಾಗಿವೆ.

ಸಾಕಾನೆ ಶಿಬಿರವಾಗಿರುವ ಇಲ್ಲಿ ವಿಜಯ ಮತ್ತು ವಿಕ್ರಮ ಎಂಬ ಎರಡು ಸಾಕಾನೆಗಳಿದ್ದು, ಇವುಗಳ ಕಾವಾಡಿ ಹಾಗೂ ಮಾವುತರ ಸೂರುಗಳು ಕೂಡ ಹಾಳಾಗಿವೆ. ಅರಣ್ಯ ಇಲಾಖೆ ಮೌನ ಮುರಿದು, ಇಲ್ಲಿ ವಾಸವಿರುವ ಮಂದಿಗೆ ಒದಗಿಸಲೇ ಬೇಕಾದ ಕನಿಷ್ಟ ಹಕ್ಕುಗಳನ್ನು ಪೂರೈಸಬೇಕಿದೆ. ಇಲ್ಲಿ ನಿದ್ರಾವಸ್ಥೆಯಲ್ಲಿರುವ ಸಂಬAಧಿಸಿದ ಇಲಾಖೆಗಳ ಅಧಿಕಾರಿಗಳ ಬದ್ಧತೆಯನ್ನು ಖುದ್ದು ಪರಿಶೀಲಿಸಲು ಹಾಗೂ ಸಮಸ್ಯೆಗಳಿಗೆ ಪರಿಹಾರ ಒದಗಿಸಲು ಜಿಲ್ಲಾಧಿಕಾರಿಗಳು ಒಮ್ಮೆ ಈ ಹಾಡಿಗೆ ಭೇಟಿ ನೀಡುವ ಮೂಲಕ ಕಗ್ಗತ್ತಲೆಯಲ್ಲಿ ಜೀವಿಸುತ್ತಿರುವ ಇಲ್ಲಿನ ಆದಿವಾಸಿಗಳ ಬದುಕಿಗೆ ಬೆಳಕಾಗಬೇಕಿದೆ.

(ವಿಶೇಷ ವರದಿ : ಕೆ.ಎಸ್.ಮೂರ್ತಿ)