ಗುಡ್ಡೆಹೊಸೂರು, ಏ. ೧೫: ಹೊಸಪಟ್ಟಣ ಗ್ರಾಮದ ಶ್ರೀ ಬಸವೇಶ್ವರ ಶ್ರೀ ಕನ್ನಂಬಾಡಿ ಅಮ್ಮನವರ ವಾರ್ಷಿಕೋತ್ಸವ ತಾ. ೧೮ ರಿಂದ

ತಾ. ೧೯ರ ತನಕ ನಡೆಯಲಿದೆ. ಶ್ರೀ ಸ್ವತಂತ್ರ ಬಸವಲಿಂಗ ಶಿವಯೋಗಿಗಳು ಶ್ರೀ ತೋಂಟದಾರ್ಯ ಸಂಸ್ಥಾನ ಮಠ ಇವರ ಸಾನ್ನಿಧ್ಯದಲ್ಲಿ ತಾ. ೧೮ ರಂದು ಸಂಜೆ ೪ ಗಂಟೆಯಿAದ ದೇವಸ್ಥಾನದಲ್ಲಿ ವಿವಿಧ ಪೂಜಾ ಕಾರ್ಯಗಳು ನಡೆಯಲಿವೆ. ತಾ. ೧೯ ರಂದು ಕೊಂಡ ಹಾಯುವುದು, ಸ್ವಾಮಿಗಳಿಂದ ಆಶೀರ್ವಚನ, ಮಹಾಮಂಗಳಾರತಿ, ಲೋಕಕಲ್ಯಾಣಾರ್ಥ ಅನ್ನಸಂತರ್ಪಣೆ, ಕಾವೇರಿ ನದಿ ತೀರದಲ್ಲಿ ಉತ್ತರ ಪೂಜೆ, ನಡೆಯಲಿದೆ.

ಈ ಪೂಜಾ ಕಾರ್ಯದಲ್ಲಿ ಶ್ರೀ ಶಾಂತಮಲ್ಲಿಕಾರ್ಜುನ ಮಹಾಸ್ವಾಮಿ, ಅಪ್ಪಾಜಿ ಸ್ವಾಮಿ ಭಾಗವಹಿಸಲಿದ್ದಾರೆ. ಈ ಸಂದರ್ಭ ಪಲ್ಲಕ್ಕಿ ಮೆರವಣಿಗೆ ನಡೆಯಲಿದೆ.