ಮಡಿಕೇರಿ, ಏ. ೧೪: ನಗರದ ಜನರಲ್ ತಿಮ್ಮಯ್ಯ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ವೈಲ್ಡ್ ಮಾಸ್ರ‍್ಸ್ ರಾಷ್ಟಿçÃಯ ಮಟ್ಟದ ಲೆದರ್ ಬಾಲ್ ಕ್ರಿಕೆಟ್ ಟೂರ್ನಿಯ ೭ನೇ ದಿನದ ಪಂದ್ಯಾಟದಲ್ಲಿ ಹೆಚ್.ಸಿ.ಸಿ ಕೊಡಗು ತಂಡ ಏ.ಸಿ.ಸಿ ಕೆ.ಆರ್ ನಗರ ತಂಡವನ್ನು ೬ ವಿಕೆಟ್‌ಗಳಿಂದ ಸೋಲಿಸಿ ಟೂರ್ನಿಯಲ್ಲಿ ಮುನ್ನಡೆ ಸಾಧಿಸಿದೆ.

ಮೊದಲು ಬ್ಯಾಟಿಂಗ್ ಆಯ್ಕೆ ಮಾಡಿದ ಏ.ಸಿ.ಸಿ ಕೆ.ಆರ್ ನಗರ ತಂಡÀ ೨೦ ಓವರ್‌ಗಳಲ್ಲಿ ೯ ವಿಕೆಟ್ ನಷ್ಟಕ್ಕೆ ೧೩೬ ರನ್‌ಗಳಿಸಿತು. ಈ ಮೊತ್ತವನ್ನು ಬೆನ್ನಟ್ಟಿದ ಹೆಚ್.ಸಿ.ಸಿ ತಂಡ ೧೮.೩ ಓವರ್‌ಗಳಲ್ಲಿ ೪ ವಿಕೆಟ್ ನಷ್ಟಕ್ಕೆ ಗುರಿ ಸಾಧಿಸಿತು. ಹೆಚ್.ಸಿ.ಸಿ ತಂಡದ ಪರ ೧೩ ಎಸೆತಗಳಲ್ಲಿ ೩೩ ರನ್‌ಗಳಿಸಿದ ಆಶಿಖ್ ಅವರು ಪಂದ್ಯ ಶ್ರೇಷ್ಠ ಪ್ರಶಸ್ತಿ ಪಡೆದುಕೊಂಡರು.