ಗೋಣಿಕೊಪ್ಪ ವರದಿ, ಏ. ೧೫: ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ ನಿರ್ಮಾಣಕ್ಕೆ ಜಿಲ್ಲಾಡಳಿತ ಸ್ಥಳದ ಅನ್ವೇಷಣೆ ಯಲ್ಲಿದ್ದು, ಈ ಬಗ್ಗೆ ಕಾರ್ಯ ಪ್ರವೃತ್ತರಾಗಿದ್ದೇವೆ ಎಂದು ಜಿಲ್ಲಾಧಿಕಾರಿ ಡಾ. ಬಿ.ಸಿ. ಸತೀಶ ಅವರು ಕೊಡವ ಕೂಟಾಳಿಯಡ ಕೂಟಕ್ಕೆ ಭರವಸೆ ನೀಡಿದ್ದಾರೆ.

ಆಸ್ಪತ್ರೆ ನಿರ್ಮಾಣಕ್ಕೆ ಸಂಬAಧಿಸಿ ದಂತೆ ಕೊಡವ ಕೂಟಾಳಿಯಡ ಕೂಟದಿಂದ ಜಿಲ್ಲಾಧಿಕಾರಿ ಕಚೇರಿಯಲ್ಲಿ ಮನವಿ ಸ್ವೀಕರಿಸಿ ಮಾತನಾಡಿ, ಆಸ್ಪತ್ರೆ ನಿರ್ಮಾಣಕ್ಕೆ ಸೂಕ್ತ ಸ್ಥಳದ ಅವಶ್ಯಕತೆ ಇದೆ. ಜಿಲ್ಲಾಕೇಂದ್ರ ಸಮೀಪ ೫ ಎಕರೆ ಜಾಗ ಹುಡುಕಲಾಗುತ್ತಿದೆ. ಸ್ಥಳ ದಾನಿಗಳು ಕೂಡ ಆಸ್ಪತ್ರೆಗೆ ಜಾಗ ನೀಡಲು ಮುಂದೆ ಬಂದರೆ ಯೋಜನೆ ರೂಪಿಸಲಾಗುವುದು ಎಂದರು.

ಆಸ್ಪತ್ರೆ ಬೇಡಿಕೆ ಮುಂದಿಟ್ಟು ಕೊಂಡು ಕೂಟದಿಂದ ನಡೆಸಿದ ವೀಡಿಯೋ ಅಭಿಯಾನದ ಬಗ್ಗೆ ನಿಯೋಗದಿಂದ ತಿಳಿಸಿಕೊಡ ಲಾಯಿತು. ಸಾಕಷ್ಟು ಜನಾಭಿಪ್ರಾಯ ಸಂಗ್ರಹಿಸಿದ್ದು, ಸರ್ಕಾರದ ಮುಂದಿಟ್ಟಿದ್ದೇವೆ. ಶಾಸಕರು, ಉಸ್ತುವಾರಿ ಮಂತ್ರಿ, ಕೇಂದ್ರ ಮತ್ತು ರಾಜ್ಯದ ಆರೋಗ್ಯ ಸಚಿವರು, ಪ್ರಧಾನಮಂತ್ರಿಗಳಿಗೂ ಪತ್ರ ಬರೆದಿರುವುದಾಗಿ ತಿಳಿಸಲಾಯಿತು. ತುರ್ತು ಸಮಯದಲ್ಲಿ ಚಿಕಿತ್ಸೆ ದೊರೆಯದೆ, ಹೊರ ನಗರಗಳಿಗೆ ಕರೆದುಕೊಂಡು ಹೋಗುವಾಗ ಪ್ರಾಣ ಕಳೆದುಕೊಳ್ಳುವವರ ಸಂಖ್ಯೆ ಹೆಚ್ಚಾಗುತ್ತಿದೆ; ಶೀಘ್ರವಾಗಿ ಯೋಜನೆ ಅನುಷ್ಠಾನ ಮಾಡಬೇಕು ಎಂದು ಮನವಿ ಮಾಡಿಕೊಳ್ಳಲಾಯಿತು.

ಕೂಟದ ಅಧ್ಯಕ್ಷೆ ಚಿಮ್ಮಚ್ಚೀರ ಪವಿತ ರಜನ್, ಉಪಾಧ್ಯಕ್ಷ ಮಂದೇಯAಡ ವನಿತ್ ಸಂಜು, ಕಾರ್ಯದರ್ಶಿ ಚೆಟ್ಟೋಳೀರ ಶರತ್ ಸೋಮಣ್ಣ, ಸಾಂಸ್ಕೃತಿಕ ನಿರ್ದೇಶಕಿ ಕಬ್ಬಚ್ಚೀರ ರಶ್ಮಿ ಕಾರ್ಯಪ್ಪ, ಸಂಘಟನಾ ನಿರ್ದೇಶಕ ಅಮ್ಮಾಟಂಡ ಚೇತನ್ ಅಪ್ಪಯ್ಯ, ಸದಸ್ಯೆ ಅಣ್ಣೀರ ಜೂಬಿ ನಿಯೋಗದಲ್ಲಿದ್ದರು.