ಮಡಿಕೇರಿ, ಏ. ೧೫: ನೇತಾಜಿ ಯುವಕ ಸಂಘ, ತಾಳತ್ತಮನೆ ಇದರ ೩೦ನೇ ವರ್ಷದ ವಾರ್ಷಿಕ ಮಹಾಸಭೆ ಇತ್ತೀಚೆಗೆ ನೇತಾಜಿ ಯುವಕ ಸಂಘದ ಸಭಾಂಗಣದಲ್ಲಿ ನಡೆಯಿತು. ಸಭೆಯಲ್ಲಿ ಅಧ್ಯಕ್ಷತೆಯನ್ನು ಸಂಘದ ಅಧ್ಯಕ್ಷ ಬಿ.ಬಿ. ಸುದೀಪ್ ರೈ ವಹಿಸಿದ್ದರು.

ಸಂಘದ ಕಾರ್ಯದರ್ಶಿ ಬಿ.ಆರ್. ಯತೀಶ್ ರೈ ವಾರ್ಷಿಕ ವರದಿಯನ್ನು ವಾಚಿಸಿದರು. ಖಜಾಂಚಿ ಕೊಂಡಿರ ಪಿ. ಕಾರ್ಯಪ್ಪ ಇವರು ೨೦೨೧-೨೨ನೇ ಸಾಲಿನ ಖರ್ಚು-ವೆಚ್ಚಗಳ ವರದಿಯನ್ನು ಮಂಡಿಸಿದರು. ನಂತರ ಸಂಘದ ಹಿರಿಯ ಕಾರ್ಯಕಾರಿ ಸಮಿತಿ ಸದಸ್ಯ ಗಿರೀಶ್ ತಾಳತ್ತಮನೆ ಮಾತನಾಡಿ, ಸಂಘ ಬೆಳೆದು ಬಂದ ದಾರಿ ಹಾಗೂ ಸಂಘದ ಮೂಲ ಉದ್ದೇಶಗಳನ್ನು ತಿಳಿಸಿದರು. ಮುಂದಿನ ದಿನಗಳಲ್ಲಿ ಹೆಚ್ಚು ಹೆಚ್ಚು ಸಮಾಜ ಮುಖಿ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಸಂಘದ ಪ್ರಗತಿಗೆ ಸಹಕರಿಸುವಂತೆ ಕೋರಿದರು.

೨೦೨೨-೨೩ನೇ ಸಾಲಿಗೆ ಕಾರ್ಯಕಾರಿ ಸಮಿತಿಯ ಆಯ್ಕೆ ನಡೆಯಿತು. ಅಧ್ಯಕ್ಷರಾಗಿ ಜೀವನ್ ಪರ್ಲಕೋಟಿ, ಉಪಾಧ್ಯಕ್ಷರಾಗಿ ಕೊಂಡಿರ ಕಾರ್ಯಪ್ಪ, ಕಾರ್ಯದರ್ಶಿಯಾಗಿ ಡಿ.ಪಿ. ಮಿಲನ್, ಸಹ ಕಾರ್ಯದರ್ಶಿಯಾಗಿ ಎ. ಕಿರಣ್, ಖಜಾಂಚಿಯಾಗಿ ಬಿ.ಆರ್. ಯತೀಶ್ ರೈ ಮತ್ತು ಸಂಘಟನಾ ಕಾರ್ಯದರ್ಶಿಯಾಗಿ ಎಸ್. ಜೀವನ್ ಕುಮಾರ್ ಆಯ್ಕೆಯಾಗಿದ್ದಾರೆ.