ಗೋಣಿಕೊಪ್ಪ ವರದಿ, ಏ. ೧೪: ವಿಶ್ವ ಹಿಂದೂ ಪರಿಷತ್, ಪೊನ್ನಂಪೇಟೆ ಪ್ರಖಂಡ ಭಜರಂಗದಳ ದುರ್ಗಾವಾಹಿನಿ ಮಾತೃಶಕ್ತಿ ವತಿಯಿಂದ ತಾ.೧೮ ರಂದು ಕುಟ್ಟದಲ್ಲಿ ಬೃಹತ್ ಹಿಂದೂ ಸಮಾಜೋತ್ಸವ ಆಯೋಜಿಸಲಾಗಿದೆ ಎಂದು ಪೊನ್ನಂಪೇಟೆ ಪ್ರಖಂಡ ವಿಎಚ್ಪಿ ಅಧ್ಯಕ್ಷ ಪಂದ್ಯAಡ ಹರೀಶ್ ತಿಳಿಸಿದ್ದಾರೆ.
ಕುಟ್ಟ ಬಸ್ ನಿಲ್ದಾಣದ ಎದುರು ವೇದಿಕೆ ಕಾರ್ಯಕ್ರಮ ನಡೆಯಲಿದ್ದು, ಶೋಭಾಯಾತ್ರೆ, ದಿಕ್ಸೂಚಿ ಭಾಷಣ ಕಾರ್ಯಕ್ರಮವಿದೆ. ಹಿಂದೂಗಳು ಜಾಗೃತರಾಗಲು ಗ್ರಾಮ ಮಟ್ಟದಲ್ಲಿ ಸಮಾವೇಶ ನಡೆಸುವ ಕಾರ್ಯಕ್ರಮ ವಾಗಿದ್ದು, ಸಮಾವೇಶಕ್ಕೆ ಸುಮಾರು ೪ ಸಾವಿರ ಜನರು
(ಮೊದಲ ಪುಟದಿಂದ) ಸೇರುವ ನಿರೀಕ್ಷೆ ಇದೆ ಎಂದು ಸುದ್ದಿಗೋಷ್ಠಿಯಲ್ಲಿ ತಿಳಿಸಿದರು. ಬೆ. ೧೦.೩೦ ಗಂಟೆಗೆ ಕುಟ್ಟ ಕೊಡವ ಸಮಾಜದಿಂದ ಶೋಭಾಯಾತ್ರೆ ಆರಂಭಗೊAಡು ಸಿಂಕೋನ ರಸ್ತೆಯವರೆಗೆ ತೆರಳಿ ಬಸ್ ನಿಲ್ದಾಣದಲ್ಲಿ ಸೇರಲಾಗುತ್ತದೆ. ಭಜರಂಗದಳ ದಕ್ಷಿಣ ಪ್ರಾಂತ ಸಹ ಸಂಯೋಜಕ ರಘು ಜಿ. ಸಕಲೇಶಪುರ ದಿಕ್ಸೂಚಿ ಭಾಷಣ ಮಾಡಲಿದ್ದಾರೆ. ಕೊಡಗು ವಿಎಚ್ಪಿ ಅಧ್ಯಕ್ಷ ಜಿ. ಕೃಷ್ಣಮೂರ್ತಿ, ಕುಟ್ಟ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಮಚ್ಚಮಾಡ ಸುಬ್ರಮಣಿ ಭಾಗವಹಿಸಲಿದ್ದಾರೆ ಎಂದು ತಿಳಿಸಿದರು.
ದುರ್ಗಾವಾಹಿನಿ ಮಾತೃಶಕ್ತಿ ಸಂಯೋಜಕಿ ಟಿ. ತೀರ್ಥ ಮಂಜುನಾಥ್ ಮಾತನಾಡಿ, ಸಾಕಷ್ಟು ಕಡೆಗಳಲ್ಲಿ ಹಿಂದೂ ಧಾರ್ಮಿಕ ಭಾವನೆಗಳಿಗೆ ದಕ್ಕೆಯಾಗುತ್ತಿದೆ. ಮಹಿಳೆ, ಹೆಣ್ಣು ಮಕ್ಕಳು, ಗೋಮಾತೆ ಮೇಲೆ ಕೂಡ ದೌರ್ಜನ್ಯ ಹೆಚ್ಚಾಗುತ್ತಿದೆ. ನಾವೆಲ್ಲ ಹಿಂದೂ, ನಾವೆಲ್ಲ ಒಂದು ಎಂಬ ಜನಜಾಗೃತಿಗೆ ಸಮಾವೇಶ ಸಹಕಾರಿ ಎಂದರು.
ಗೋಷ್ಠಿಯಲ್ಲಿ ಕಾರ್ಯದರ್ಶಿ ಅಮ್ಮತ್ತೀರ ಸುರೇಶ್, ಸಹ ಸಂಚಾಲಕ ಚೀರಂಡ ಚಂಗಪ್ಪ ಇದ್ದರು.