ವೀರಾಜಪೇಟೆ, ಏ. ೧೫: ಇಲ್ಲಿನ ಜೆಡಿಎಸ್ ಘಟಕದ ಪೂರ್ವಬಾವಿ ಸಭೆ ತಾ.೧೬ ರಂದು ನಡೆಯಿತು. ಸಭೆಯಲ್ಲಿ ‘ನಮ್ಮ ನೀರು ನಮ್ಮ ಹಕ್ಕು’ ಎಂಬ ವಾಕ್ಯದೊಂದಿಗೆ ತಲಕಾವೇರಿಯಲ್ಲಿ ಜಲಧಾರೆ ಕಾರ್ಯಕ್ರಮ ನಡೆಯುವ ಸಲುವಾಗಿ ಕಾರ್ಯಕ್ರಮ ಯಶಸ್ವಿಗೊಳಿಸಲು ತೀರ್ಮಾನಿಸಲಾಯಿತು. ಸಭೆಯಲ್ಲಿ ಜಿಲ್ಲಾ ಕಾರ್ಯಾಧ್ಯಕ್ಷ ಎಸ್.ಎಚ್. ಮತೀನ್, ಜಯಮ್ಮ, ವಿ.ಸಿ. ದೇವರಾಜ್, ಪಂದ್ಯAಡ ರವಿ ಮಾದಪ್ಪ, ಪಾಣತ್ತಲೆ ಸತ್ಯ, ಚೊಕ್ಕಂಡಹಳ್ಳಿ ಮಜೀದ್, ಬಾಳೆಕುಟ್ಟೀರ ದಿನಿ, ಅಪ್ಪನೆರವಂಡ ಸನ್ನು ಕುಶಾಲಪ್ಪ, ಅಶ್ರಫ್ ಅಲಿ, ಚಾಮಿಯಾಲ ಸೈಫುದ್ದೀನ್, ಟಿ.ಆರ್. ಹರ್ಷ, ರಚನ್ ಟಿ.ಆರ್. ವಿವೇಕ್ ವೀರಾಜಪೇಟೆ ತಾಲೂಕು ಅಧ್ಯಕ್ಷ ಪಿ.ಎ. ಮಂಜುನಾಥ್ ಕಾರ್ಯಕರ್ತರು ಉಪಸ್ಥಿತರಿದ್ದರು.