ಕುಶಾಲನಗರ, ಏ. ೧೫: ತಾ. ೧೬ ರಂದು (ಇಂದು) ತಲಕಾವೇರಿಯಲ್ಲಿ ನಡೆಯಲಿರುವ ಜೆಡಿಎಸ್ ಪಕ್ಷದ ಜನತಾ ಜಲಧಾರೆ ಕಾರ್ಯಕ್ರಮದ ಹಿನ್ನೆಲೆಯಲ್ಲಿ ಕುಶಾಲನಗರ ತಾಲೂಕಿನ ಜೆಡಿಎಸ್ ಪ್ರಮುಖರ ಸಭೆ ಸ್ಥಳೀಯ ಪ್ರವಾಸಿ ಮಂದಿರದಲ್ಲಿ ನಡೆಯಿತು.
ಜಲಮೂಲಗಳ ಪುನಶ್ಚೇತನಕ್ಕೆ ಒತ್ತು ನೀಡುವ ನಿಟ್ಟಿನಲ್ಲಿ ಜೆಡಿಎಸ್ ರಾಜ್ಯಾದ್ಯಂತ ಹಮ್ಮಿಕೊಂಡಿರುವ ಯೋಜನೆ ಅಂಗವಾಗಿ ತಾ. ೧೬ ರಂದು ತಲಕಾವೇರಿಯಲ್ಲಿ ಕಾರ್ಯಕ್ರಮ ನಡೆಯಲಿದ್ದು ಜಲಧಾರೆ ಕಾರ್ಯಕ್ರಮದ ಯಶಸ್ಸಿಗೆ ಪೂರ್ವ ಸಿದ್ಧತೆ ಬಗ್ಗೆ ಚರ್ಚಿಸಿದರು.
ಜಿಲ್ಲಾ ಯುವ ಜೆಡಿಎಸ್ ಅಧ್ಯಕ್ಷ ಸಿ.ಎಲ್.ವಿಶ್ವ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಕುಶಾಲನಗರ, ಸೋಮವಾರಪೇಟೆ ವ್ಯಾಪ್ತಿಯ ಪಕ್ಷದ ಪ್ರಮುಖರು ಸಭೆಯಲ್ಲಿ ಪಾಲ್ಗೊಂಡಿದ್ದರು.
ಕುಶಾಲನಗರದಿAದ ತಲಕಾವೇರಿಗೆ ಬೈಕ್ ಜಾಥಾ ಹಮ್ಮಿಕೊಳ್ಳುವ ಮೂಲಕ ಸುಮಾರು ೩೦೦ ಬೈಕ್, ನೂರಾರು ಕಾರ್ಯಕರ್ತರು ಭಾಗಿಯಾಗುವ ಬಗ್ಗೆ ಸಮಾಲೋಚನೆ ನಡೆಯಿತು.
ಕಾರ್ಯಕ್ರಮದ ಅಂಗವಾಗಿ ಭಾಗಮಂಡಲದಲ್ಲಿ ಪಕ್ಷದ ಪ್ರಮುಖರಾದ ನಿಖಿಲ್ ಕುಮಾರಸ್ವಾಮಿ, ಸಾ.ರಾ. ಮಹೇಶ್ ಮತ್ತು ಪ್ರಮುಖರು ರಥಕ್ಕೆ ಚಾಲನೆ ನೀಡಲಿದ್ದಾರೆ ಎಂದು ಸಿ.ಎಲ್. ವಿಶ್ವ ತಿಳಿಸಿದರು.
ಇದೇ ಸಂದರ್ಭ ವಿವಿಧ ಪಕ್ಷ ತ್ಯಜಿಸಿದ ಹೆಬ್ಬಾಲೆ ಪ್ರಸನ್ನ ರೆಡ್ಡಿ, ಚಂದ್ರಶೇಖರ್, ಪುಟ್ಟೇಗೌಡ, ಕುಶಾಲನಗರದ ಮಹದೇವ್ ತಂಡ ಜೆಡಿಎಸ್ಗೆ ಸೇರ್ಪಡೆಯಾದರು.
ಸಭೆಯಲ್ಲಿ ತಾಲೂಕು ಅಧ್ಯಕ್ಷ ಪಿ.ಡಿ.ರವಿ, ಸೋಮವಾರಪೇಟೆ ತಾಲೂಕು ಅಧ್ಯಕ್ಷ ಸಿ ಎಸ್ ನಾಗರಾಜ್, ಹೊಸಬೀಡು ಪೂವಯ್ಯ, ಯುವ ಘಟಕದ ಅಧ್ಯಕ್ಷ ರಾಜು, ಪ್ರಮುಖರಾದ ಅಜ್ಜಳ್ಳಿ ರವಿ, ಎಚ್.ಡಿ.ಚಂದ್ರು, ರಾಮಚಂದ್ರ, ತ್ರಿನೇಶ್, ಹೇಮಂತ್, ಮತ್ತಿತರರು ಇದ್ದರು.