ಚೆಯ್ಯಂಡಾಣೆ, ಏ. ೧೪: ನರಿಯಂದಡ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ನಿನ್ನೆ ಸುರಿದ ಗಾಳಿ ಮಳೆಗೆ ಅಪಾರ ನಷ್ಟ ಉಂಟಾಗಿದೆ. ಸ್ಥಳೀಯ ಪೋಕ್ಕುಳಂಡ್ರ, ತೋಟಂಬೈಲು ಕುಟುಂಬಸ್ಥರ ಹಾಗೂ ಎಡಪಾಲದಲ್ಲಿ ಗಾಳಿ ಮಳೆಗೆ ಬಾಳೆ, ಅಡಿಕೆ, ಕಾಫಿ ಗಿಡಗಳಿಗೆ ಹಾನಿಯಾಗಿದ್ದು, ಸಂಬAಧಪಟ್ಟ ಅಧಿಕಾರಿಗಳು ನಷ್ಟ ಅನುಭವಿಸಿದ ಗ್ರಾಮಸ್ಥರಿಗೆ ಪರಿಹಾರ ಒದಗಿಸಬೇಕಾಗಿ ಚೆಯ್ಯಂಡಾಣೆ ಬಿಜೆಪಿ ಶಕ್ತಿ ಕೇಂದ್ರದ ಅಧ್ಯಕ್ಷ ಪೋಕ್ಕುಳಂಡ್ರ ದನೋಜ್ ಕುಮಾರ್ ಆಗ್ರಹಿಸಿದ್ದಾರೆ.