ನಾಪೋಕ್ಲು, ಏ. ೧೫: ಸಮೀಪದ ಬಲ್ಲಮಾವಟಿ ಗ್ರಾಮದ ಭಜರಂಗಿ ಯೂತ್ ಕ್ಲಬ್ ವತಿಯಿಂದ ನಡೆದ ಟೆನ್ನಿಸ್ ಬಾಲ್ ಕ್ರಿಕೆಟ್ ಪಂದ್ಯಾಟದಲ್ಲಿ ಬಲ್ಲಮಾವಟಿಯ ಭಜರಂಗಿ ಬಿ ತಂಡವು ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿತು. ಕಟ್ಟೆಮಾಡು ಬಿವೈಸಿ ತಂಡವು ರನ್ನರ್‌ಅಪ್ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿತು.
ವಿಜೇತ ತಂಡಕ್ಕೆ ರೂ. ೨೨೨೨೨ ಹಾಗೂ ಟ್ರೋಫಿ ವಿತರಿಸಲಾಯಿತು. ರನ್ನರ್‌ಅಪ್ ತಂಡಕ್ಕೆ ರೂ. ೧೧೧೧೧ ಹಾಗೂ ಟ್ರೋಫಿ ಲಭಿಸಿತು. ಪ್ರಶಸ್ತಿಗಾಗಿ ಭಜರಂಗಿ ಬಿ ಮತ್ತು ಬಿವೈಸಿ ಕಟ್ಟೆಮಾಡು ತಂಡಗಳ ನಡುವೆ ಸೂಪರ್ ಓವರ್ ಪಂದ್ಯ ನಡೆಯಿತು. ಬಿವೈಸಿ ಕಟ್ಟೆಮಾಡು ತಂಡವು ಮೊದಲು ಬ್ಯಾಟ್ ಮಾಡಿ ಮೂರು ರನ್‌ಗಳ ಗುರಿ ನೀಡಿತು. ಭಜರಂಗಿ ಬಿ ತಂಡವು ೪ ರನ್ ಗಳಿಸಿ ವಿಜಯ ಸಾಧಿಸಿತು. ಇದಕ್ಕೂ ಮೊದಲು ನಡೆದ ಸೆಮಿಫೈನಲ್ ಪಂದ್ಯದಲ್ಲಿ ಬಿವೈಸಿ ಕಟ್ಟೆಮಾಡು ತಂಡವು ಚಾರ್ವಿನ್ ಬಾಯ್ಸ್ ತಂಡವನ್ನು ಮಣಿಸಿ ಫೈನಲ್‌ಗೆ ಏರಿತು. ಭಜರಂಗಿ ಬಿ ತಂಡವು ಕಣ್ಣನ್ ಟರ‍್ಸ್ ತಂಡವನ್ನು ಮಣಿಸಿ ಫೈನಲ್ ಪ್ರವೇಶಿಸಿತು.
ಬಲ್ಲಮಾವಟಿ ಗ್ರಾಮದ ನೇತಾಜಿ ಪ್ರೌಢಶಾಲೆಯ ಆಟದ ಮೈದಾನದಲ್ಲಿ ನಡೆದ ಪಂದ್ಯಾಟದಲ್ಲಿ ೩೫ ತಂಡಗಳು ಪಾಲ್ಗೊಂಡಿದ್ದವು. ನೇತಾಜಿ ಪ್ರೌಢಶಾಲೆಯ ಮುಖ್ಯ ಶಿಕ್ಷಕ ಸಿ.ಎಸ್. ಸುರೇಶ್, ಗ್ರಾಮ ಪಂಚಾಯಿತಿ ಸದಸ್ಯ ಬಾಬಿ ಭೀಮಯ್ಯ, ಭಜರಂಗಿ ಯೂತ್ ಕ್ಲಬ್ ಸದಸ್ಯರಾದ ಎಡಿಕೇರಿ ಪ್ರಸನ್ನ, ಎಡಿಕೇರಿ ರಾಜೇಶ್, ಕೋಟೇರ ನೂತನ್, ಎಡಿಕೇರಿ ಕೀರ್ತನ್, ವಚನ್, ಸುಧೀರ್, ಚರಣ್ ಪಾಲ್ಗೊಂಡಿದ್ದರು.