ವೀರಾಜಪೇಟೆ, ಏ. ೧೩: ರಾಜ್ಯ ಸರ್ಕಾರದ ಆದೇಶದಂತೆ ಜಿಲ್ಲಾಧಿಕಾರಿಗಳ ನಡೆ ಹಳ್ಳಿ ಕಡೆಯ ತಾಲೂಕು ಮಟ್ಟದ ಸಭೆಯನ್ನು ತಾ. ೧೬ ರಂದು ತಾಲೂಕು ದಂಡಾಧಿಕಾರಿ ತಹಶೀಲ್ದಾರ್ ಡಾ. ಯೋಗಾನಂದ್ ಅವರ ಅಧ್ಯಕ್ಷತೆಯಲ್ಲಿ ಅಮ್ಮತ್ತಿ ಹೋಬಳಿ ಹೊಸೂರು ಗ್ರಾಮ ಪಂಚಾಯಿತಿ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ತಾಲೂಕು ದಂಡಾಧಿಕಾರಿಗಳ ಕಚೇರಿಯ ಪ್ರಕಟಣೆ ತಿಳಿಸಿದೆ.

ಈ ಕಾರ್ಯಕ್ರಮದಲ್ಲಿ ಹೊಸೂರು ಗ್ರಾಮಕ್ಕೆ ಸಂಬAಧಿಸಿದ ಪಹಣಿಯಲ್ಲಿನ ಲೋಪದೋಷಗಳ ತಿದ್ದುಪಡಿ, ಪೌತಿಖಾತೆ, ಸರ್ಕಾರದ ಯೋಜನೆಗಳಾದ ಇಂದಿರಾಗಾAಧಿ ವೃದ್ಧಾಪ್ಯ ವೇತನ, ವಿಧವಾ , ಸಂಧ್ಯಾ ಸುರಕ್ಷಾ, ಅಂಗವಿಕಲ ವೇತನ, ಅಂತ್ಯ ಸಂಸ್ಕಾರದ ಪರಿಹಾರ ಧನ, ರಾಷ್ಟಿçÃಯ ಕುಟುಂಬ ನೆರವು ಯೋಜನೆ, ಸರ್ಕಾರಿ ಜಮೀನು ಒತ್ತುವರಿ ತೆರವು ಗೊಳಿಸುವುದು, ಗ್ರಾಮಗಳಿಗೆ ಸ್ಮಶಾನ ಕಲ್ಪಿಸುವುದು, ಆಶ್ರಯ ಯೋಜನೆಯಡಿಯಲ್ಲಿ ಜಮೀನು ಕಾಯ್ದಿರಿಸುವ ಬಗ್ಗೆ, ಆಧಾರ್ ಕಾರ್ಡ್ನ ಅನುಕೂಲತೆ, ಮತದಾರರ ಪಟ್ಟಿಯಲ್ಲಿನ ಪರಿಷ್ಕರಣೆ, ಪ್ರಕೃತಿ ವಿಕೋಪದಿಂದ ಹಾನಿ ಉಂಟಾದ ವಾಸದ ಮನೆಗಳಿಗೆ ಪರಿಹಾರ ಹಾಗೂ ಬೆಳೆ ಹಾನಿ ಪರಿಹಾರ ಸಕಾಲ ಯೋಜನೆ ಯೋಜನೆಯಲ್ಲಿ ಒದಗಿಸುವ ಸೌಲಭ್ಯದ ಬಗ್ಗೆ, ಜಾಗದ ಹದ್ದುಬಸ್ತು, ಪೋಡಿ ಮುಕ್ತ ಗ್ರಾಮ, ದರಖಾಸ್ತು ಜಮೀನುಗಳ ದುರಸ್ತಿ ಪೋಡಿ ಮಾಡುವುದು ಹಾಗೂ ಪಡಿತರ ಚೀಟಿಯಲ್ಲಿನ ಸಮಸ್ಯೆಗಳ ಬಗ್ಗೆ ಸಾರ್ವಜನಿಕರಿಂದ ಅಹವಾಲು ಸ್ವೀಕಾರ ಮಾಡಲಾಗುವುದು. ಈ ಕಾರ್ಯಕ್ರಮದಲ್ಲಿ ಸಾರ್ವಜನಿಕರು, ಗ್ರಾಮಸ್ಥರು, ಮುಖಂಡರು, ಜನಪ್ರತಿನಿಧಿಗಳು ಸಭೆಗೆ ಹಾಜರಾಗುವಂತೆ ಕೋರಲಾಗಿದೆ.