ಗೋಣಿಕೊಪ್ಪ ವರದಿ, ಏ. ೧೧: ಇಲ್ಲಿ ನಡೆದ ಶ್ರೀರಾಮ ವಿಜಯ ರಥೋತ್ಸವ ಕಾರ್ಯಕ್ರಮದಲ್ಲಿ ರಾಮ ಜಪ ಭಕ್ತಿ ಭಾವ ಹೆಚ್ಚಿಸಿತು. ಅಂತಾರಾಷ್ಟಿçÃಯ ಕೃಷ್ಣ ಪ್ರಜ್ಞಾ ಸಂಘ (ಇಸ್ಕಾನ್) ವತಿಯಿಂದ ಇದೇ ಮೊದಲ ಬಾರಿಗೆ ನಡೆದ ರಥೋತ್ಸವದಲ್ಲಿ ರಾಮ್ ರಾಮ್ ಹರೇ ಕೃಷ್ಣ ಹರೇ ಕೃಷ್ಣ ಜಪ ಮತ್ತೆ ಮತ್ತೆ ಕೇಳುವಂತಿತ್ತು.

ಗೋಣಿಕೊಪ್ಪ ಉಮಾಮಹೇಶ್ವರಿ ದೇವಸ್ಥಾನದಿಂದ ರಥೋತ್ಸವವನ್ನು ಸಂಜೆ ೫.೫ ಸುಮಾರಿಗೆ ಆರಂಭಿಸ ಲಾಯಿತು. ಡಾ. ಮುಕ್ಕಾಟೀರ ಅಮೃತ್ ನಾಣಯ್ಯ, ಆರ್‌ಎಸ್‌ಎಸ್ ಸಂಘ ಚಾಲಕ್ ಚೆಕ್ಕೇರ ಮನು ಕಾವೇರಪ್ಪ, ಎಂಎಲ್‌ಸಿ ಸುಜಾ ಕುಶಾಲಪ್ಪ ಸೇರಿದಂತೆ ಹಿರಿಯರು ಬೂದು ಕುಂಬಳಕಾಯಿ ಹೊಡೆದು ರಥೋತ್ಸವಕ್ಕೆ ವಿಘ್ನ ಬಾರದಂತೆ ಪ್ರಾರ್ಥಿಸಿದರು. ರಥದ ಎದುರು ಈಡುಕಾಯಿ ಹೊಡೆದು ಭಕ್ತಿ ಮೆರೆದರು.

ಬೈಪಾಸ್ ಮೂಲಕ ತೆರಳಿ ಪೊನ್ನಂಪೇಟೆ ಜಂಕ್ಷನ್ ಮತ್ತು ಗೋಣಿಕೊಪ್ಪ ಮುಖ್ಯರಸ್ತೆ ಮೂಲಕ ಮತ್ತೆ ಉಮಾಮಹೇಶ್ವರಿ ದೇವಸ್ಥಾನಕ್ಕೆ ಬರಲಾಯಿತು.

ಹೊರ ರಾಜ್ಯಗಳಿಂದಲೂ ಕೂಡ ಭಕ್ತರು ಆಗಮಿಸಿ ರಾಮನ ಜಪ ಮಾಡಿದರು. ರಥೋತ್ಸವದ ಎದುರು ಭಕ್ತರು ಡೋಲು, ತಾಳ ಬಡಿದುಕೊಂಡು ರಾಮನನ್ನು ಸ್ಮರಿಸಿದರು. ತಾಳಕ್ಕೆ ತಕ್ಕಂತೆ ದಾರಿಯುದ್ದಕ್ಕೂ ಹೆಜ್ಜೆ ಇಟ್ಟರು. ಭಗವದ್ಗೀತೆ, ರಾಮಾಯಣ, ಮಹಾಭಾರತ ಅಧ್ಯಯನದಿಂದ ಲೋಕ ಶಾಂತಿಯೆಡೆಗೆ ಸಾಗಲಿರುವ ಬಗ್ಗೆ ಸಂದೇಶ ಸಾರಲಾಯಿತು. ಹಿರಿಯ ಅಧ್ಯಾತ್ಮಿಕ ಭಕ್ತಾಧಿಗಳು ಪಾಲ್ಗೊಂಡು ರಾಮಸ್ಮರಣೆ ಮಾಡಿದರು. ರಥೋತ್ಸವ ರಾತ್ರಿ ೭ ಗಂಟೆ ಸುಮಾರಿಗೆ ದೇವಸ್ಥಾನ ಆವರಣದಲ್ಲಿ ಸಂಪನ್ನಗೊAಡಿತು.