ಮಡಿಕೇರಿ, ಏ. ೧೩: ನಗರದ ಜನರಲ್ ತಿಮ್ಮಯ್ಯ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ವೈಲ್ಡ್ ಮಾಸ್ರ್ಸ್ ರಾಷ್ಟಿçÃಯ ಮಟ್ಟದ ಲೆದರ್ ಬಾಲ್ ಕ್ರಿಕೆಟ್ ಟೂರ್ನಿಯ ೬ನೇ ದಿನದ ಪಂದ್ಯಾಟದಲ್ಲಿ ಗೆಲುವಿನ ಮೂಲಕ ಎಮ್.ವೈ.ಸಿ.ಸಿ ತಂಡ ಸೆಮಿಫೈನಲ್ ಪ್ರವೇಶಿಸಿದೆ. ಇಂದು ನಡೆದ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಎಮ್.ವೈಸಿ.ಸಿ ತಂಡ ಟೀಮ್ ಬ್ರರ್ಸ್ ತಂಡದ ವಿರುದ್ಧ ೩೭ ರನ್ಗಳ ಅಂತರದಲ್ಲಿ ಜಯ ಸಾಧಿಸಿದೆ.
ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಆಯ್ಕೆ ಮಾಡಿದ ಎಮ್.ವೈ.ಸಿ.ಸಿ ತಂಡ ೨೦ ಓವರ್ಗಳಲ್ಲಿ ೫ ವಿಕೆಟ್ ನಷ್ಟಕ್ಕೆ ೧೬೦ ರನ್ಗಳಿಸಿತು. ಈ ಮೊತ್ತವನ್ನು ಬೆನ್ನಟ್ಟಿದ ಟೀಮ್ ಬ್ರರ್ಸ್ ತಂಡ ೨೦ ಓವರ್ಗಳಲ್ಲಿ ೭ ವಿಕೆಟ್ ನಷ್ಟಕ್ಕೆ ೧೨೩ ರನ್ಗಳಿಸಿ ಸೋಲನುಭವಿಸಿತು. ಎಮ್.ವೈ.ಸಿ.ಸಿ ತಂಡದ ಪರ ವಿನೋದ್ ಪಿಂಟೋ ೬೨ ಎಸೆತಗಳಲ್ಲಿ ೯೪ ರನ್ಗಳಿಸಿ ಪಂದ್ಯಶ್ರೇಷ್ಠ ಪ್ರಶಸ್ತಿ ಪಡೆದುಕೊಂಡರು.
ಈಗಾಗಲೇ ಸೆಮಿಫೈನಲ್ ಪ್ರವೇಶಿಸಿರುವ ಕಿಂಬರ್ಲಿ ಕ್ರಿಕೆರ್ಸ್ ತಂಡದ ವಿರುದ್ಧ ಎಮ್.ವೈ.ಸಿ.ಸಿ ತಂಡ ತಾ. ೨೦ ರಂದು ಸೆಮಿಫೈನಲ್ ಪಂದ್ಯಾಟ ಆಡಲಿದೆ. ತಾ. ೧೪ ರಿಂದ (ಇಂದಿನಿAದ) ರೆಜಿಮೆಂಟ್ -೩ ತಂಡಗಳ ನಡುವೆ ಪಂದ್ಯಾಟ ಆರಂಭವಾಗಲಿದೆ.