ಗುಡ್ಡೆಹೊಸೂರು, ಏ. ೧೩: ಶಾಸಕ ಅಪ್ಪಚ್ಚುರಂಜನ್ ಅವರು ಒಟ್ಟು ೧೧ ಪಂಚಾಯಿತಿಗಳಲ್ಲಿ ಒಟ್ಟು ೩.೫೦ ಕೋಟಿ ಹಣದಲ್ಲಿ ನಡೆಯುವ ರಸ್ತೆ ಕಾಮಗಾರಿಗೆ ಗುಡ್ಡೆಹೊಸೂರಿನಲ್ಲಿ ಭೂಮಿಪೂಜೆ ನೆರವೇರಿಸಿದರು.
ಚೆಟ್ಟಳ್ಳಿ, ನೆಲ್ಲಿಹುದಿಕೇರಿ, ವಾಲ್ನೂರು ತ್ಯಾಗತ್ತೂರು, ನಂಜರಾಯಪಟ್ಟಣ, ಗುಡ್ಡೆಹೊಸೂರು, ಹೊಸಕೋಟೆ, ಕೊಡಗರಹಳ್ಳಿ, ಕಂಬಿಬಾಣೆ, ನಾಕೂರು ಶಿರಂಗಾಲ, ಸುಂಟಿಕೊಪ್ಪ ಪಂಚಾಯಿತಿಗಳ ವಿವಿಧ ರಸ್ತೆಗಳಲ್ಲಿ ಚಾಲನೆ ನೀಡಲಾಯಿತು. ಗುಡ್ಡೆಹೊಸೂರು ಗ್ರಾಮ ಪಂಚಾಯಿತಿಯ ಹಾರಂಗಿ ರಸ್ತೆಯ ಗ್ರಾಮ ವ್ಯಾಪ್ತಿಯ ೨ ರಸ್ತೆ ಮತ್ತು ಮಾದಪಟ್ಟಣ ಗ್ರಾಮದಲ್ಲಿ ೩ ರಸ್ತೆಗಳ ಕಾಮಗಾರಿಗೆ ಭೂಮಿಪೂಜೆ ನಡೆಸಲಾಯಿತು.
ಈ ಸಂದರ್ಭ ಗ್ರಾಮ.ಪಂ ಅಧ್ಯಕ್ಷೆ ನಂದಿನಿ, ಉಪಾಧ್ಯಕ್ಷೆ ಯಶೋಧ, ಸದಸ್ಯರಾದ ನಿತ್ಯಾನಂದ, ಪ್ರವೀಣ್, ಕುಡೆಕಲ್ ಸುಶೀಲ, ಗಂಗಮ್ಮ, ನಾರಾಯಣ, ರಮೇಶ್, ಪಿ.ಡಿ.ಓ. ಶ್ಯಾಂ, ಎಂ.ಆರ್. ಉತ್ತಪ್ಪ ಮುಂತಾದವರು ಹಾಜರಿದ್ದರು.