ಸೋಮವಾರಪೇಟೆ,ಏ.೧೩: ತಾಲೂಕಿನ ಯಲಕನೂರು ಗ್ರಾಮದಲ್ಲಿ ನೂತನವಾಗಿ ನಿರ್ಮಾಣಗೊಂಡಿರುವ ಶ್ರೀ ಮಹಾಲಿಂಗೇಶ್ವರ ದೇವಾಲಯದ ಲೋಕಾರ್ಪಣಾ ಕಾರ್ಯಕ್ರಮ ತಾ. ೧೫ ರಿಂದ (ನಾಳೆಯಿಂದ) ತಾ. ೧೭ರವರೆಗೆ ನಡೆಯಲಿದೆ ಎಂದು ದೇವಾಲಯ ಜೀರ್ಣೋದ್ಧಾರ ಸಮಿತಿ ತಿಳಿಸಿದೆ.

ಯಲಕನೂರು ಗ್ರಾಮದಲ್ಲಿ ನೂತನವಾಗಿ ನಿರ್ಮಿಸಿರುವ ದೇವಾಲಯದಲ್ಲಿ ಶ್ರೀ ಮಹಾಲಿಂಗೇಶ್ವರ, ಶ್ರೀ ಗಣಪತಿ, ಶ್ರೀ ದುರ್ಗಾಪರಮೇಶ್ವರಿ, ಶ್ರೀ ಕಾಲಭೈರವೇಶ್ವರ, ಶ್ರೀ ಭದ್ರಕಾಳಿ, ಶ್ರೀ ವೀರಭದ್ರ, ಶ್ರೀ ನಾಗದೇವತೆ, ಶ್ರೀ ಅವಲಕ್ಕಿ ಬಸವಣ್ಣ, ಶ್ರೀ ಜಟಿಗ ದೇವರುಗಳ ಪ್ರತಿಷ್ಠಾಪನಾ ಮಹೋತ್ಸವ ಹಾಗೂ ದೇವಾಲಯದ ಉದ್ಘಾಟನೆ ಕಾರ್ಯಕ್ರಮಗಳು ಮೂರು ದಿನಗಳ ಕಾಲ ಜರುಗಲಿದೆ.

ಮುದ್ದಿನಕಟ್ಟೆ ಮಠಾಧೀಶರಾದ ಶ್ರೀ ಅಭಿನವ ಸಿದ್ಧಲಿಂಗ ಶಿವಾಚಾರ್ಯ ಸ್ವಾಮೀಜಿ ಹಾಗೂ ಕೊಡ್ಲಿಪೇಟೆಯ ಸೋಮಶೇಖರ ಶಾಸ್ತಿç ಅವರುಗಳ ನೇತೃತ್ವದಲ್ಲಿ ತಾ. ೧೫ರಂದು ಸಂಜೆ ೪.೩೦ಕ್ಕೆ ವೀರಗಾಸೆ, ಮಂಗಳವಾದ್ಯದೊAದಿಗೆ ದೇವರ ಮೂರ್ತಿಗಳ ಮೆರವಣಿಗೆ ನಡೆಯಲಿದೆ. ನಂತರ ಗಂಗಾಪೂಜೆ, ಅಗ್ರೋದಕ ಯಾಗಶಾಲಾ ಪೂಜೆ, ಗಣಪತಿ ಪೂಜೆ, ಪೂರ್ವಕ ಸ್ವಸ್ತಿ ಪುಣ್ಯಾಹ ವಾಚನ ಪಂಚಗವ್ಯ ಸಾಧನ ರಕ್ಷಾಬಂಧನ, ವಾಸ್ತು ರಾಕ್ಷೆÆÃಘ್ನ, ಹೋಮ, ಮಂಗಳಾರತಿ ನಡೆಯಲಿದೆ.

ತಾ. ೧೬ರಂದು ಬೆಳಿಗ್ಗೆ ೬ ಗಂಟೆಯಿAದ ಅಂಕುರಾರ್ಪಣ ಪಂಚಕಳಸ ಸ್ಥಾಪನೆ, ನವಗ್ರಹರಾಧನೆ, ಮೃತ್ಯುಂಜಯ ಅಷ್ಟದಿಕ್ಪಾಲಕರ ಸಪ್ತ ಸಭಾ, ಏಕಾದಶಕರುದ್ರರು, ಋತ್ವಿಗ್ವರಣ ಸ್ವಾಮಿಗೆ ಜಲಾಧಿವಾಸ, ಧಾನ್ಯಾಧಿವಾಸ, ಕಳಸಾರಾಧನೆ, ಶಯನಾಧಿವಾಸ, ಶುಭ ಲಗ್ನದಲ್ಲಿ ಶಿಖರ ಕಲಾ ವಿನ್ಯಾಸ ಜರುಗಲಿದೆ. ತಾ. ೧೭ರಂದು ಬೆಳಿಗ್ಗೆ ೯.೩೦ಕ್ಕೆ ಮಹಾಲಿಂಗೇಶ್ವರ ದೇವರ ಸಹಿತ ಪರಿವಾರ ದೇವರುಗಳ ಪ್ರತಿಷ್ಠಾಪನೆ, ಉಮಾಮಹೇಶ್ವರ, ಲಕ್ಷಿö್ಮÃನಾರಾಯಣ ಆರಾಧನೆ, ಶಿಖರ ಪ್ರತಿಷ್ಠಾಪನೆ, ರುದ್ರಹೋಮ, ರುದ್ರಪಾರಾಯಣ, ಪೂರ್ಣಾಹುತಿ ರುದ್ರಾಭಿಷೇಕ, ಮಹಾಮಂಗಳಾರತಿ ನಂತರ ಮಹಾ ಅನ್ನಸಂತರ್ಪಣೆ ನೆರವೇರಲಿದೆ.

ತಾ. ೧೭ರಂದು ಪೂರ್ವಾಹ್ನ ೧೧ ಗಂಟೆಗೆ ಧಾರ್ಮಿಕ ಸಭಾ ಕಾರ್ಯಕ್ರಮ ನಡೆಯಲಿದ್ದು, ಮುದ್ದಿನಕಟ್ಟೆ ಮಠಾಧೀಶರಾದ ಅಭಿನವ ಸಿದ್ದಲಿಂಗ ಶಿವಾಚಾರ್ಯ ಸ್ವಾಮೀಜಿ, ದಿಂಡುಗಾಡು ಬಸವಜ್ಯೋತಿ ಮಠದ ಅಪ್ಪಾಜಿ ಸ್ವಾಮೀಜಿ, ಮನೆಹಳ್ಳಿ ಮಠದ ಮಹಾಂತ ಶಿವಲಿಂಗ ಸ್ವಾಮೀಜಿ ಅವರುಗಳು ಸಾನ್ನಿಧ್ಯ ವಹಿಸಲಿದ್ದಾರೆ.

ಸಭಾ ಕಾರ್ಯಕ್ರಮವನ್ನು ಗ್ರಾಮದ ಗೌರವಾಧ್ಯಕ್ಷ ಬಿ.ಎಸ್. ದಿಲೀಪ್ ಉದ್ಘಾಟಿಸಲಿದ್ದು, ದೇವಾಲಯ ಸಮಿತಿ ಅಧ್ಯಕ್ಷ ವೈ.ಸಿ. ಶಿವಾನಂದ ಅಧ್ಯಕ್ಷತೆ ವಹಿಸಲಿದ್ದಾರೆ. ಮುಖ್ಯ ಅತಿಥಿಗಳಾದ ಶಾಸಕ ಅಪ್ಪಚ್ಚುರಂಜನ್, ಸಂಸದ ಪ್ರತಾಪ್ ಸಿಂಹ, ಎಂಎಲ್‌ಸಿ ಸುಜಾ ಕುಶಾಲಪ್ಪ, ಮಾಜಿ ಸಚಿವ ಬಿ.ಎ. ಜೀವಿಜಯ, ಗ್ರಾ.ಪಂ. ಅಧ್ಯಕ್ಷೆ ಪುಷ್ಪ, ಗ್ರಾಮದ ಗೌರವಾಧ್ಯಕ್ಷ ಟಿ.ಬಿ. ಚನ್ನಬಸಪ್ಪ ಸೇರಿದಂತೆ ಇತರರು ಭಾಗವಹಿಸಲಿದ್ದಾರೆ. ಸಂಜೆ ೬.೩೦ರಿಂದ ೮.೩೦ರವರೆಗೆ ಮಹಾಪೂಜೆ ಹಾಗೂ ಮಂಗಳಾರತಿ ನಡೆಯಲಿದೆ.