ಪೊನ್ನಂಪೇಟೆ, ಏ. ೧೩: ತಾ. ೧೫, ೧೬ ಹಾಗೂ ೧೭ ರಂದು ದಕ್ಷಿಣ ಕೊಡಗು ಒಕ್ಕಲಿಗರ ಯುವ ವೇದಿಕೆ ವತಿಯಿಂದ ೫ನೇ ವರ್ಷದ ಒಕ್ಕಲಿಗರ ಕ್ರೀಡೋತ್ಸವವನ್ನು ಸುಗ್ಗಿ ಅಂಗವಾಗಿ ಹಾತೂರು ಶಾಲೆಯ ಫೀಲ್ಡ್ ಮಾರ್ಷಲ್ ಕೆ.ಎಂ. ಕಾರ್ಯಪ್ಪ ಮೈದಾನದಲ್ಲಿ ಆಯೋಜಿಸಲಾಗಿದೆ. ಮೂರು ದಿನಗಳ ಕಾಲ ನಡೆಯುವ ಒಕ್ಕಲಿಗರ ಸುಗ್ಗಿ ಕ್ರೀಡೋತ್ಸವದಲ್ಲಿ ವೀರಾಜಪೇಟೆ ಹಾಗೂ ಪೊನ್ನಂಪೇಟೆ ತಾಲೂಕಿನ ಒಕ್ಕಲಿಗರು ಭಾಗವಹಿಸಬಹುದಾಗಿದ್ದು, ಪುರುಷರಿಗೆ ಕ್ರಿಕೆಟ್, ಹಗ್ಗ ಜಗ್ಗಾಟ ಹಾಗೂ ಶೂಟಿಂಗ್ ಸ್ಪರ್ಧೆ ನಡೆಯಲಿದೆ. ಮಹಿಳೆಯರಿಗೆ ಬೆಂಕಿ ರಹಿತ ಅಡುಗೆ, ಹಗ್ಗ ಜಗ್ಗಾಟ, ಬಾಂಬ್ ಇನ್ ದ ಸಿಟಿ ಸ್ಪರ್ಧೆ ನಡೆಯಲಿದೆ. ೨ ವರ್ಷ ದಿಂದ ೪ ವರ್ಷ ಹಾಗೂ ೫ ವರ್ಷದಿಂದ ೭ ವೊಳಗಿರುವ ಮಕ್ಕಳಿಗೆ ಫ್ಯಾಶನ್ ಶೋ, ೮ ರಿಂದ ೧೨ ಹಾಗೂ ೧೩ ರಿಂದ ೧೫ ವರ್ಷದೊಳಗಿನವರಿಗೆ ಸೂಪರ್ ಮಿನಿಟ್ ಗೇಮ್ಸ್ ಸ್ಪರ್ಧೆ ಆಯೋಜಿಸಲಾಗಿದೆ. ದಂಪತಿಗಳಿಗೆ ಆದರ್ಶ ದಂಪತಿ ಸ್ಪರ್ಧೆಯನ್ನು ಏರ್ಪಡಿಸಲಾಗಿದೆ ಎಂದು ವೇದಿಕೆಯ ಅಧ್ಯಕ್ಷ ಲೋಹಿತ್ ಗೌಡ ತಿಳಿಸಿದ್ದಾರೆ.