ಮಡಿಕೇರಿ, ಏ. ೧೩: ಕಡಗದಾಳು ಗ್ರಾಮದ ಶ್ರೀ ಪನ್ನಂಗಾಲ ತಮ್ಮೆ ದೇವಸ್ಥಾನದ ವಾರ್ಷಿಕ ಉತ್ಸವವು ತಾ. ೧೫ ರಿಂದ ೧೭ರ ವರೆಗೆ ನಡೆಯಲಿದೆ.

ತಾ. ೧೫ ರಂದು ಮಧ್ಯಾಹ್ನ ಅಮ್ಮೆ, ದೇವರ ಕೊಡೆ, ಚವುಂಡಿ, ಅಯ್ಯಪ್ಪ, ಕುರುಂದ ದೇವರುಗಳ ಉತ್ಸವ, ಎತ್ತುಪೋರಾಟ, ಕುರುಂದಕಳಿ, ರಾತ್ರಿ ಚವುಂಡಿ ಬಾರಣಿ, ತಾ. ೧೬ ರಂದು ಬೆಳಿಗ್ಗೆ ದೇವರ ದರ್ಶನ, ಮಧ್ಯಾಹ್ನ ನಂತರ ದೇವಿಯ ಅವಭೃತ ಸ್ನಾನ, ತಾ. ೧೭ ರಂದು ಬೆಳಿಗ್ಗೆ ದೇವರ ನುಡಿ ಕೇಳುವುದು, ಹರಕೆ ಒಪ್ಪಿಸುವುದು, ಭಂಡಾರ ನೋಡುವ ಕಾರ್ಯ ಜರುಗಲಿದೆ ಎಂದು ಆಡಳಿತ ಮಂಡಳಿ ತಿಳಿಸಿದೆ.