ಪೆರಾಜೆ, ಏ. ೧೦: ಇಲ್ಲಿನ ನಿಡ್ಯಮಲೆಯಲ್ಲಿ ಕಳೆದ ರಾತ್ರಿ ಭಾರೀ ಗಾಳಿ- ಮಳೆಗೆ ಮರ ಬಿದ್ದು ನಾಲ್ಕು ಮನೆಗಳಿಗೆ ಹಾನಿಯಾಗಿದ್ದು, ಅಪಾರ ಕೃಷಿ ನಾಶವಾಗಿದೆ.
ಎನ್.ಎಂ.ರಾಮಣ್ಣ, ರಮೇಶ, ಎನ್.ಎ.ಗೋಪಾಲ, ಎನ್.ಎಸ್.ಮನೋಜ್ ಎಂಬವರುಗಳ ಮನೆಗಳ ಮೇಲೆ ಮರಬಿದ್ದು ಅಪಾರ ನಷ್ಟ ಸಂಭವಿಸಿದೆ.
ವೆAಕಪ್ಪ ಎನ್.ಬಿ, ಶೇಷಪ್ಪ ಎನ್.ಎ., ಎನ್.ಡಿ. ರವಿಚಂದ್ರ, ಎನ್.ಎ.ದಾಮೋದರ, ಪಾರ್ಶ್ವನಾಥ ಪೆರುಮುಂಡ, ದೇರಪ್ಪ ನಿಡ್ಯಮಲೆ, ಕಾಚೇಲು ಚಂದ್ರಶೇಖರ ಎಂಬವರುಗಳ ಅಡಿಕೆ, ತೆಂಗು, ಬಾಳೆ, ಗೇರುಮರ, ರಬ್ಬರ್ ತೋಟದಲ್ಲಿ ಕೃಷಿ ನಷ್ಟವಾಗಿದ್ದು, ಗ್ರಾಮಲೆಕ್ಕಾಧಿಕಾರಿ ಸ್ಥಳಕ್ಕೆ ಭೇಟಿ ನೀಡಿದ್ದರು.
ಕರಿಕೆ: ಸಮೀಪದ ಚೆತ್ತುಕಾಯ ಪಚ್ಚೆಪಿಲಾವು ಎಂಬಲ್ಲಿ ಗಾಳಿ ಮಳೆಗೆ ಅಪಾರ ಪ್ರಮಾಣದ ಬೆಳೆ ನಾಶವಾಗಿರುವ ಘಟನೆ ನಡೆದಿದೆ.ಗ್ರಾಮದ ಪಚ್ಚೆಪಿಲಾವು ಭಾಗದಲ್ಲಿ ಸುರಿದ ಧಾರಾಕಾರ ಆಲಿಕಲ್ಲು ಮಳೆ ಹಾಗೂ ಬಿರುಗಾಳಿಯಿಂದ ಬೃಹತ್ ಗಾತ್ರದ ಮರವೊಂದು ಉರುಳಿ ಬಿದ್ದ ಪರಿಣಾಮ ಹುಲಿಮನೆ ಜಯಾನಂದ ಎಂಬವರ ಅಡಿಕೆ ಹಾಗೂ ತೆಂಗಿನ ಮರ ನೆಲಸಮಗೊಂಡಿದ್ದು, ಸುಮಾರು ಮೂವತ್ತು ಅಡಿಕೆ ಮರ ಹಾಗೂ ಎರಡು ತೆಂಗಿನ ಮರ ಮುರಿದ ಪರಿಣಾಮ ಒಂದು ಲಕ್ಷಕ್ಕೂ ಅಧಿಕ ನಷ್ಟ ಸಂಭವಿಸಿದೆ. ಅಲ್ಲದೆ ಅಕ್ಕಪಕ್ಕದ ಕ್ರಷ್ಣಪ್ಪ, ಹೇಮಾವತಿ, ಕೇಶವ, ಹೊನ್ನಪ್ಪ, ಗೋಪಾಲ ಎಂಬರ ಅಡಿಕೆ, ಗೇರು, ಬಾಳೆ ಬೆಳೆಗಳು ಕೂಡ ನಾಶವಾಗಿ ನಷ್ಟ ಸಂಭವಿಸಿದ್ದು, ಕಂದಾಯ ಇಲಾಖೆಯವರು ಸ್ಥಳ ಪರಿಶೀಲನೆ ನಡೆಸಿದ್ದಾರೆ.