ಮಡಿಕೇರಿ: ಬಿಜೆಪಿ ಸಂಸ್ಥಾಪನಾ ದಿನದ ಅಂಗವಾಗಿ ಮಡಿಕೇರಿ ಪುಟಾಣಿ ನಗರ ವಾರ್ಡ್ ಸಂಖ್ಯೆ ೧೩ರ ಬೂತ್ ಅಧ್ಯಕ್ಷÀ ವೇಣುಗೋಪಾಲ್ ಅವರ ಮನೆಯ ಮೇಲೆ ಧ್ವಜ ಹಾರಿಸಲಾಯಿತು.

ಈ ಸಂದರ್ಭ ನಗರಸಭೆ ಸದಸ್ಯ ಮಂಜುಳಾ, ನಗರ ಖಜಾಂಚಿ ಮುರುಗನ್, ಪ್ರಮುಖರಾದ ಚಾರ್ಲಿ, ಮಂಜೇಶ್, ವಿನುತ ಹಾಗೂ ಇತರರು ಹಾಜರಿದ್ದರು.ಮೇಕೇರಿ: ಭಾರತೀಯ ಜನತಾ ಪಾರ್ಟಿಯ ಸಂಸ್ಥಾಪನಾ ದಿನಾಚರಣೆ ಮೇಕೇರಿಯಲ್ಲಿ ಅರ್ಥಪೂರ್ಣವಾಗಿ ನಡೆಯಿತು. ಪಕ್ಷದ ಪದಾಧಿಕಾರಿಗಳು ಸ್ವಚ್ಫತಾ ಶ್ರಮದಾನದ ಮೂಲಕ ಸ್ವಚ್ಛತೆಗೆ ಆದ್ಯತೆ ನೀಡುವಂತೆ ಕರೆ ನೀಡಿದರು.

ಸ್ವಚ್ಛತಾ ಶ್ರಮದಾನದಲ್ಲಿ ಜಿಲ್ಲಾ ರೈತ ಮೋರ್ಚಾದ ಸಹ ಕಾರ್ಯದರ್ಶಿ ಪೈಕೇರ ಮನೋಹರ್ ಮಾದಪ್ಪ, ಶಕ್ತಿ ಕೇಂದ್ರದ ಪ್ರಮುಖ್ ಚೋಂಡಿರ ಕಿರಣ್, ಸಹಪ್ರಮುಖ್ ಮಂಜ್ಞಿರ ಅಪ್ಪಣ್ಣ, ಗ್ರಾ.ಪಂ ಉಪಾಧ್ಯಕ್ಷ ಪೂಜಾರಿರ ರಕ್ಷಿತ್, ಸದಸ್ಯರಾದ ಎಂ.ಯು. ಹನೀಫ್, ಕಾರ್ಯಕರ್ತ ಚೋಂಡಿರ ವಿಠಲ, ಮತ್ತಿತರ ಕಾರ್ಯಕರ್ತರು ಹಾಗೂ ಗ್ರಾಮಸ್ಥರು ಪಾಲ್ಗೊಂಡಿದ್ದರು.ಕಡAಗ: ನರಿಯಂದಡ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕರಡ ಗ್ರಾಮದ ಭಾರತೀಯ ಜನತಾ ಪಕ್ಷದ ಕಾರ್ಯಕರ್ತರು ಬಿಜೆಪಿ ಸಂಸ್ಥಾಪನಾ ದಿನಾಚರಣೆಯನ್ನು ಕರಡ ಗ್ರಾಮದ ಶ್ರೀ ಭಗವತಿ ದೇವಸ್ಥಾನದಲ್ಲಿ ವಿಶೇಷ ಪೂಜೆಯೊಂದಿಗೆ ಆಚರಿಸಲಾಯಿತು.

ಈ ಸಂದರ್ಭ ಜಿಲ್ಲಾ ಬಿಜೆಪಿ ಸಮಿತಿ ಸದಸ್ಯ ಭೀಮಯ್ಯ, ಸ್ಥಾನಿಯ ಸಮಿತಿ ಅಧ್ಯಕ್ಷರಾದ ಸುಷ ಮೊಣ್ಣಯ್ಯ, ದೇವಸ್ಥಾನ ಆಡಳಿತ ಮಂಡಳಿ ಅಧ್ಯಕ್ಷ ಸೋಮಯ್ಯ, ಗ್ರಾಮ ಪಂಚಾಯಿತಿ ಸದಸ್ಯ ವಿಲಿನ್ ಬೇಪಡಿಯಂಡ, ಶಂಕರಿ, ಕಿಶೋರ್ ಪಾಲ್ಗೊಂಡಿದ್ದರು.ಕಡAಗ: ನರಿಯಂದಡ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕರಡ ಗ್ರಾಮದ ಭಾರತೀಯ ಜನತಾ ಪಕ್ಷದ ಕಾರ್ಯಕರ್ತರು ಬಿಜೆಪಿ ಸಂಸ್ಥಾಪನಾ ದಿನಾಚರಣೆಯನ್ನು ಕರಡ ಗ್ರಾಮದ ಶ್ರೀ ಭಗವತಿ ದೇವಸ್ಥಾನದಲ್ಲಿ ವಿಶೇಷ ಪೂಜೆಯೊಂದಿಗೆ ಆಚರಿಸಲಾಯಿತು.

ಈ ಸಂದರ್ಭ ಜಿಲ್ಲಾ ಬಿಜೆಪಿ ಸಮಿತಿ ಸದಸ್ಯ ಭೀಮಯ್ಯ, ಸ್ಥಾನಿಯ ಸಮಿತಿ ಅಧ್ಯಕ್ಷರಾದ ಸುಷ ಮೊಣ್ಣಯ್ಯ, ದೇವಸ್ಥಾನ ಆಡಳಿತ ಮಂಡಳಿ ಅಧ್ಯಕ್ಷ ಸೋಮಯ್ಯ, ಗ್ರಾಮ ಪಂಚಾಯಿತಿ ಸದಸ್ಯ ವಿಲಿನ್ ಬೇಪಡಿಯಂಡ, ಶಂಕರಿ, ಕಿಶೋರ್ ಪಾಲ್ಗೊಂಡಿದ್ದರು.