ವೀರಾಜಪೇಟೆ, ಏ. ೯: ಇಲ್ಲಿಗೆ ಸಮೀಪದ ಕೊಟ್ಟೋಳಿ ಗ್ರಾಮದಲ್ಲಿ ಗ್ರಾಮೀಣ ಅಭಿವೃದ್ಧಿ ರಸ್ತೆ ಯೋಜನೆಯಡಿ ಸುಮಾರು ೫ ಲಕ್ಷ ರೂಪಾಯಿ ವೆಚ್ಚದಲ್ಲಿ ಶಾಸಕರ ವಿಶೇಷ ಅನುದಾನದಲ್ಲಿ ನಿರ್ಮಿಸಲಾದ ಕೊಟ್ಟೋಳಿ ಶ್ರೀ ಭದ್ರಕಾಳಿ ದೇವಸ್ಥಾನ ಹಾಗೂ ಕೋಣೆರಿರ ಐನ್‌ಮನೆಗೆ ಹೋಗುವ ಡಾಂಬರು ರಸ್ತೆಯನ್ನು ವೀರಾಜಪೇಟೆ ಕ್ಷೇತ್ರ ಶಾಸಕ ಕೆ.ಜಿ. ಬೋಪಯ್ಯ ಉದ್ಘಾಟಿಸಿದರು. ಈ ವೇಳೆ ಮಾತನಾಡಿದ ಅವರು, ಗ್ರಾಮದಲ್ಲಿ ಕಾಮಗಾರಿಗಳು ನಡೆಯುವಾಗ ಗ್ರಾಮಸ್ಥರು ಸಹಕರಿಸಿದಲ್ಲಿ ಗುಣಮಟ್ಟದ ಕಾಮಗಾರಿ ನಡೆಯಲು ಸಾಧ್ಯ ಎಂದರು. ಕಾರ್ಯಕ್ರಮದ ಅಧ್ಯಕ್ಷತೆ ಯನ್ನು ಕೋಣೇರಿರ ಕುಟುಂಬ ಸಂಘದ ಅಧ್ಯಕ್ಷ ಮನು ವಹಿಸಿ ಮಾತನಾಡಿದರು. ಜಿ.ಪಂ. ಮಾಜಿ ಸದಸ್ಯ ಮೂಕೊಂಡ ಶಶಿ ಸುಬ್ರಮಣಿ, ಅಚ್ಚಪಂಡ ಮಹೇಶ್, ವೀರಾಜಪೇಟೆ ಭಾಜಪ ಉಪಾಧ್ಯಕ್ಷ ಪಟ್ರಪಂಡ ರಘು ನಾಣಯ್ಯ, ಶಾಸಕರ ಆಪ್ತ ಕಾರ್ಯದರ್ಶಿ ಮಲ್ಲಂಡ ಮಧು ದೇವಯ್ಯ, ಕೆದಮುಳ್ಳೂರು ಗ್ರಾಮ ಪಂಚಾಯಿತಿ ಅಧ್ಯಕ್ಷೆ ನಡಿ ಕೇರಿಯಂಡ ಶೀಲ, ಸದಸ್ಯರಾದ ಇಸ್ಮಾಯಿಲ್, ಪರಮೇಶ್ವರ ಗ್ರಾಮಸ್ಥರು ಹಾಜರಿದರು. ಕೋಣೇರಿರ ಸಂಪಿ ಸ್ವಾಗತಿಸಿ ವಂದಿಸಿದರು. ನಿರೂಪಣೆಯನ್ನು ಕೋಣೇರಿರ ಅಚ್ಚಯ್ಯ ಮಾಡಿದರು. ಗಣ್ಯರಿಗೆ ಹೂಗುಚ್ಚಗಳ ಬದಲು ಜೇನು ತುಪ್ಪವನ್ನು ನೀಡಲಾಯಿತು.